
ಬೆಂಗಳೂರು : ಖ್ಯಾತ ನಿರೂಪಕಿ ಅನುಶ್ರೀ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕರ್ನಾಟಕದ ಮನೆ ಮಗಳು ಅನು ಎಲ್ಲರಿಗೂ ಚಿರಪರಿಚಿತ.
ಸುಂದರ ಚೆಲುವೆಯ ಮುದ್ದಾದ ಮಾತು ಕೇಳದೆ ಕನ್ನಡಿಗರು ರಾತ್ರಿ ಮಲಗುವುದೇ ಇಲ್ಲ. ಹಾಗೆ, ಅನುಶ್ರೀ ಎಲ್ಲರಿಗೂ ಅಚ್ಚುಮೆಚ್ಚು.
ಸದ್ಯ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ರೆಬಲ್ ಸ್ಟಾರ್ ಪುತ್ರ ಅಭಿಷೇಕ್ ಇಬ್ಬರೂ ಸೇರಿ ಅನುಶ್ರೀ ಕಾಲೆಳೆದಿದ್ದು ನೋಡಲು ಮಸ್ತ್ ಮಜಾ ನೀಡುತ್ತಿದೆ.
ಕಾರ್ಯಕ್ರಮದಲ್ಲಿ ಒಂದು ಕ್ಯೂಟ್ ಪ್ರಸಂಗ ನಡೆಯಿತು. ರವಿಮಾಮ ಮತ್ತು ಅಭಿಷೇಕ್ ಅಂಬರೀಷ್ ಇಬ್ಬರೂ ಅನುಶ್ರೀ ಕಾಲೆಳೆದರು.
ವೇದಿಕೆ ಮೇಲೆ ಬಂದ ಅಭಿಷೇಕ್ ನಮಸ್ಕಾರ ಅಣ್ಣ, ನಮಸ್ಕಾರ ರವಿಮಾಮ ಹಾಗೂ ನಮಸ್ತೆ ಅನುಶ್ರೀಯವರೇ ಅಂತ ಕ್ಯೂಟಾಗಿ ಹೇಳುತ್ತಾರೆ.
ಈ ಮಾತಿಗೆ ನಮ್ಮ ಮಲ್ಲ, ಅದನ್ನ ಮಾತ್ರ ಮೆತ್ತಗೆ ಹೇಳಪ್ಪಾ.. ಅವಳು ಬರಲ್ಲ ಬಿಡೋ.. ದೂರದಿಂದ ಬರೀ ಐ ಲವ್ ಯೂ.. ಐ ಲವ್ ಯೂ ಅಂತಾಳೆ.. ಸ್ಟೇಜ್ ಮೇಲೆ ನೋಡಿದ್ಯಲ್ಲ ಶಿವರಾಜ್ ಕುಮಾರ್‌ಗೂ ಐ ಲವ್ ಯೂ ಅಂತಾಳೆ ನನಗೂ ಐಲವ್ ಯೂ ಅಂತಾಳೆ.
ಸಿಕ್ಕ ಸಿಕ್ಕವರಿಗೆ ಐ ಲವ್ ಯೂ ಅಂತಾಳೆ ಅಂತ ಅನುಗೆ ಕಿಚಾಯಿಸಿದರು. ಆಗ ಅನು ನಿಮಗೆ ಹಾಗೆ ಅನಿಸುತ್ತ ಅಭಿಷೇಕ್ ಅಂದಾಗ.. ಅಭಿ ಕೂಡಾ ಸ್ವಲ್ಪ ಸ್ವಲ್ಪ ಹಾಗೆ ಅನಿಸುತ್ತೇ ಎಂದು ಕಾಮಿಡಿ ಮಾಡಿದಾಗ ಕಾರ್ಯಕ್ರಮದಲ್ಲಿದ್ದ ಜನರೆಲ್ಲರೂ ನಕ್ಕರು.
ಆಗ ಅನುಶ್ರೀ ನಾವೇಲ್ಲ ಅಭಿಮಾನಿಗಳು ಯಾರನ್ನಾದ್ರೂ ಇಷ್ಟಾ ಪಟ್ರೆ ಐ ಲವ್ ಯೂ ಅಂತ ಹೇಳ್ತೀವಿ ಈಗ ನೀವು ಅದ್ಭುತವಾಗಿ ನಟನೆ ಮಾಡ್ತೀರಾ.. ಯಂಗ್ ರೆಬಲ್ ಸ್ಟಾರ್.
ಅವರು ಹೆಸರಿಗೆ ಮಾತ್ರ ಬ್ಯಾಡ್ ಮ್ಯಾನರ್ ಸಿನಿಮಾ ಮಾಡ್ತಾರೆ ಅದ್ರೆ ಅವರು ಫುಲ್ ಗುಡ್ ಮ್ಯಾನ್ ಸೋ ವಿ ವಾಂಟ್ ಸೇ ಅಬಿಷೇಕ್ ವಿ ಲವ್ ಯೂ.. ಎಂದು ಬರ್ಲಿ ಚಪ್ಪಾಳೆ ಅಭಿಷೇಕ್‌ಗೆ ಅಂತ ನಾಜೂಕಾಗಿ ಜಾರಿಕೊಂಡರು.