
ಇತ್ತೀಚಿನ ದಿನಗಳಲ್ಲಿ, ಭದ್ರತಾ ದೃಷ್ಟಿಕೋನದಿಂದ, ಮಕ್ಕಳ ವಾಟ್ಸಾಪ್ ಖಾತೆಯ ಮೇಲೆಯೂ ಕಣ್ಣಿಡಬೇಕಾಗುತ್ತದೆ. ಆದರೆ ಪದೇ ಪದೇ ಮಕ್ಕಳ ಬಳಿ ಮೊಬೈಲ್ ಕೇಳುವುದು ಕೂಡಾ ಸರಿಯಾಗುವುದಿಲ್ಲ.
ಪ್ರತಿ ಬಾರಿ ಮೊಬೈಲ್ ಕೇಳುವಾಗಲೂ ಕಾರಣ ಹೇಳುತ್ತಿರಬೇಕಾಗುತ್ತದೆ. ಅಲ್ಲದೆ ಪೋಷಕರ ಆತಂಕವನ್ನು ಮಕ್ಕಳು ಅರ್ಥಮಾಡಿಕೊಂಡರೆ ಸರಿ ಇಲ್ಲ ಎಂದಾದರೆ ಮತ್ತೆ ಸಮಸ್ಯೆಗಳು ತಲೆದೋರುತ್ತವೆ.
ಆದರೆ ಈಗ ನಾವು ಹೇಳುವ ಟ್ರಿಕ್ ನಿಂದ ಮಕ್ಕಳ ಬಳಿ ಪದೇ ಪದೇ ಮೊಬೈಲ್ ಕೇಳಬೇಕಾಗಿಲ್ಲ. ಮಕ್ಕಳ ವಾಟ್ಸಾಪ್ ಚಾಟ್ ನೇರವಾಗಿ ನಿಮ್ಮ ಫೋನ್ ನಲ್ಲಿ ಲಭ್ಯವಾಗಲಿದೆ.
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನಿಮ್ಮ ಮಕ್ಕಳ ವಾಟ್ಸಾಪ್ ಅನ್ನು ನೋಡಬೇಕಾದರೆ, ಬಹಳ ಸರಳ ಮಾರ್ಗವನ್ನು ಅನುಸರಿಸಬೇಕು.
ಈ ಉಪಾಯದ ಮೂಲಕ ಲ್ಯಾಪ್‌ಟಾಪ್‌ನಲ್ಲಿ ಅಥವಾ ಸ್ಮಾರ್ಟ್‌ಫೋನ್‌ನಲ್ಲಿ ನಿಮ್ಮ ಮಕ್ಕಳ ಚಾಟ್ ವೀಕ್ಷಿಸುವುದು ಸಾಧ್ಯವಾಗುತ್ತದೆ.
ಫೋನ್‌ನಲ್ಲಿ ಮಕ್ಕಳ ಚಾಟ್ ಅನ್ನು ನೋಡುವ ಮಾರ್ಗ :ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನಿಮ್ಮ ಮಕ್ಕಳ ಆನ್‌ಲೈನ್ ವಾಟ್ಸಾಪ್ ಚಾಟ್ ಅನ್ನು ನೋಡಬೇಕಾದರೆ, ಮೊದಲು ನಿಮ್ಮ ಲ್ಯಾಪ್‌ಟಾಪ್ ಅಥವಾ ಫೋನ್‌ಗೆ ಹೋಗಿ whatsapp-web ಅನ್ನು ತೆರೆಯಬೇಕು.
ನಂತರ ನಿಮ್ಮ ಮಕ್ಕಳ ಫೋನ್‌ಗೆ ಹೋಗಿ WhatsApp ಅನ್ನು ತೆರೆಯಬೇಕು. ಈಗ ಡಿವೈಸ್ ಲಿಂಕ್ ಮಾಡುವ ಮೂಲಕ ನಿಮ್ಮ ಫೋನ್ ಅಥವಾ ಲ್ಯಾಪ್‌ಟಾಪ್‌ನ ಕೋಡ್ ಸ್ಕ್ಯಾನ್ ಮಾಡಬೇಕು.
ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ತಕ್ಷಣ, ಮಕ್ಕಳ WhatsApp ಚಾಟ್ ನಿಮ್ಮ ಲ್ಯಾಪ್‌ಟಾಪ್ ಮತ್ತು ಫೋನ್‌ನಲ್ಲಿ ತೆರೆಯುತ್ತದೆ. ಅದನ್ನು ಲಾಗ್‌ಔಟ್ ಮಾಡುವವರೆಗೂ ಅದು ತೆರೆದಿರುತ್ತದೆ.
ನಿಮ್ಮ ಮಕ್ಕಳ WhatsApp ಖಾತೆಯಲ್ಲಿ ಅಥವಾ ಖಾತೆಯಲ್ಲಿರುವ ಯಾವುದೇ ಮಿಡಿಯಾ ಫೈಲ್‌ಗಳಲ್ಲಿ ನಡೆಯುವ ಎಲ್ಲಾ ಚಾಟಿಂಗ್‌ಗಳನ್ನು ನೀವು ನೋಡಬಹುದು ಮತ್ತು ನಿಯಂತ್ರಿಸಬಹುದು.
ಆದರೆ ನೆನಪಿರಲಿ, ಈ ವಿಧಾನವನ್ನು ಸುರಕ್ಷತಾ ದೃಷ್ಟಿಕೋನದಿಂದ ಮಾತ್ರ ಬಳಸಬೇಕು ಮತ್ತು ಅದರ ದುರುಪಯೋಗ ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ.