ನಿತ್ಯಾನಂದನ ಜೊತೆ ಖ್ಯಾತ ನಟಿ ಪ್ರಿಯಾ ಮದುವೆ!? ಏನಿದು ಶಾಕಿಂಗ್ ಹೇಳಿಕೆ!!

ಖ್ಯಾತ ನಟಿ ಪ್ರಿಯಾ ಆನಂದ್ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ. ವಾಮನನ್ ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ಪ್ರಿಯಾ, ಶಿವಕಾರ್ತಿಕೇಯನ್, ಅಥರ್ವ, ವಿಕ್ರಮ್ ಪ್ರಭು, ಗೌತಮ್ ಕಾರ್ತಿಕ್, ಪೃಥ್ವಿರಾಜ್, ಪುನೀತ್ ರಾಜ್‌ಕುಮಾರ್ ಮತ್ತು ಅಶೋಕ್ ಸೆಲ್ವನ್ ಸೇರಿದಂತೆ ದಕ್ಷಿಣ ಭಾರತದ ಹಲವಾರು ಟಾಪ್ ಹೀರೋಗಳೊಂದಿಗೆ ನಟಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಅಷ್ಟೇನು ಆಕ್ಟಿವ್ ಆಗಿರದ ನಟಿ ಪ್ರಿಯಾ ಆನಂದ್, ವಿವಾದಿತ ದೇವಮಾನವ ಸ್ವಾಮಿ ನಿತ್ಯಾನಂದ ಕುರಿತ ಉಲ್ಲೇಖಗಳನ್ನು ತಿಂಗಳಿಗೆ ಎರಡು ಬಾರಿ ಹಂಚಿಕೊಳ್ಳುವುದನ್ನು ಅಭಿಮಾನಿಗಳು ಗಮನಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಪ್ರಿಯಾ ಆನಂದ್ ಅವರನ್ನು ಈ ಬಗ್ಗೆ ಕೇಳಿದಾಗ, ಅವರು ಕೊಟ್ಟ ಉತ್ತರ ಕೇಳಿದವರೆಲ್ಲ ಶಾಕ್ ಆಗಿದ್ದಾರೆ.
ತನ್ನ ವರ್ಚಸ್ಸಿನ ಮೂಲಕ ತನ್ನನ್ನು ಸೆಳೆಯುವ ಕಾರಣ ಸಾವಿರಾರು ಜನ ಆತನನ್ನು ಹಿಂಬಾಲಿಸುತ್ತಾರೆ ಎಂದು ಪ್ರಿಯಾ ಈ ಸಂದರ್ಶನದಲ್ಲಿ ವಿವರಿಸಿದರು. ಅಲ್ಲದೇ ತಾನು ಅವನನ್ನು ಮದುವೆಯಾಗುತ್ತೇನೆ ಎಂದು ತಮಾಷೆಯಾಗಿ ಪ್ರಿಯಾ ಹೇಳಿದ್ದಾರೆ. ನಿತ್ಯಾನಂದನನ್ನು ಮದುವೆಯಾದರೆ ತನ್ನ ಹೆಸರನ್ನು ಬದಲಾಯಿಸಬೇಕಾಗಿಲ್ಲ, ಏಕೆಂದರೆ ಅದು ಈಗಾಗಲೇ ಹೆಚ್ಚು ಕಡಿಮೆ ಹೋಲುತ್ತದೆ ಎಂದು ಪ್ರಿಯಾ ಹಾಸ್ಯಮಯವಾಗಿ ಹೇಳುತ್ತಾರೆ.
ಪ್ರಿಯಾ ಆನಂದ್ ಅವರ ಮುಂದಿನ ಚಿತ್ರ ‘ಸುಮೋ’ ಮತ್ತು ‘ಕಾಸೆದನ್ ಕಡವುಲಡಾ’ ಇವೆರಡೂ ಮಿರ್ಚಿ ಶಿವ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವಲ್ಲದೇ, ‘ಅಂಧಗನ್’ ಸಿನಿಮಾದಲ್ಲಿ ಅವರು ಹಿರಿಯ ನಾಯಕ ಪ್ರಶಾಂತ್ ಜೊತೆ ನಾಯಕಿಯಾಗಿ ನಟಿಸುತ್ತಿದ್ದಾರೆ.