ರಾಜ್ಯ

ನಾಳೆ ಆಗಸ್ಟ್ 27ರಂದು ಈ ಹಳ್ಳಿಗಳಲ್ಲಿ ಹಾಗೂ ನಗರದ ಬಡಾವಣೆಗಳಲ್ಲಿ ಕರೆಂಟ್ ಇರಲ್ಲ.!

ಚಿತ್ರದುರ್ಗ: ರಸ್ತೆ ಅಗಲೀಕರಣ ಕಾಮಗಾರಿಗೆ ಚಿತ್ರದುರ್ಗ ವ್ಯಾಪ್ತಿಯಲ್ಲಿರುವ 66/11 ಕೆವಿ ಚಿತ್ರದುರ್ಗ ವಿತರಣಾ ಕೇಂದ್ರದಲ್ಲಿ 01 ಸಂಖ್ಯೆಯ 11 ಕೆವಿ ಮಾರ್ಗದ ಮಾರ್ಗ ಮುಕ್ತತೆಯನ್ನು ನೀಡಬೇಕಾಗಿರುವುದರಿಂದ ಆಗಸ್ಟ್ 27 ರಂದು ಚಿತ್ರದುರ್ಗದ ಜೆ.ಸಿ.ಆರ್ ಬಡಾವಣೆ 5,6,7 ಮತ್ತು 1 ನೇ ಕ್ರಾಸ್, ಮಾರುತಿ ನಗರ ಗೋಪಾಲಪುರ ರಸ್ತೆ, ಇಮ್ಮತ್ ನಗರ, ಜಯಪದ್ಮ ಕಟ್ಟಡ, ಹನುಮಾನ್ ವೃತ್ತ, ಜಿ-7 ಸೂಪರ್ ಮಾರ್ಕೆಟ್, ಉದಯ ನರ್ಸಿಗ್ ಹೋಮ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಇದೇ ಆಗಸ್ಟ್ 27ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ವಿದ್ಯುತ್ ಆಡಚಣೆಯಾಗುವ ಪ್ರದೇಶಗಳು : 66/11 ಕೆವಿ ಚಿತ್ರದುರ್ಗ ವಿವಿ ಕೇಂದ್ರ ದಿಂದ ಸರಬರಾಜಾಗುವ 01 ಸಂಖ್ಯೆಯ 11 ಕೆವಿ ಮಾರ್ಗಗಳಲ್ಲಿ ವಿದ್ಯುತ್ ಅಡಚಣೆಯಾಗುತ್ತದೆ. ಜೆ.ಸಿ.ಆರ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಚಿತ್ರದುರ್ಗ ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಬೃಹತ್ ಕಾಮಗಾರಿ ಘಟಕದಿಂದ ಗೋಪರಗಳನ್ನು ನಿರ್ಮಿಸಲು ಮತ್ತು ತಂತಿ ಎಳೆಯುವ ಕಾಮಗಾರಿ ಕಾರ್ಯಕ್ಕಾಗಿ 66/11 ನೀರಗುಂದ ವಿದ್ಯುತ್ ವಿತರಣಾ ಕೇಂದ್ರದ 11 ಕೆವಿ ಮಾರ್ಗಗಳ ಮಾರ್ಗ ಮುಕ್ತತೆಯನ್ನು ನೀಡಬೇಕಾಗಿರುವುದರಿಂದ ಇದೇ ಆಗಸ್ಟ್ 27 ರಂದು ನೀರಗುಂದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ವಿದ್ಯುತ್ ಆಡಚಣೆಯಾಗುವ ಪ್ರದೇಶಗಳು 66/11 ಕೆವಿ ನೀರಗುಂದ ವಿವಿ ಕೇಂದ್ರದಿಂದ ಸರಬರಾಜಾಗುವ ಎಲ್ಲಾ 11ಕೆವಿ ಮಾರ್ಗಗಳಲ್ಲಿ ವಿದ್ಯುತ್ ಅಡಚಣೆಯಾಗುತ್ತದೆ. ನೀರಗುಂದ, ಅದರಿಕಟ್ಟೆ, ಶ್ರೀ ಮಠ, ಆಲದಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಚಿತ್ರದುರ್ಗ ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

𝐂𝐡𝐚𝐧𝐝𝐚𝐧 𝐌𝐑𝐂

𝐃𝐈𝐑𝐄𝐂𝐓𝐎𝐑 -𝐍𝐂𝐈𝐁 𝐓𝐈𝐌𝐄𝐒 𝐌𝐄𝐃𝐈𝐀 𝟐𝟒/𝟕 𝐏𝐕𝐓. 𝐋𝐓𝐃.

Related Articles

Leave a Reply

Your email address will not be published. Required fields are marked *

Back to top button