ನಾಲಿಗೆಯಿಂದ ಕಪ್ಪೆಯಂತೆ ನೊಣ ಹಿಡಿದು ತಿಂತಾಳೆ ಈ ಹುಡುಗಿ

ಸಾಮಾಜಿಕ ಮಾಧ್ಯಮಗಳ ಪ್ರಪಂಚವು ವಿಚಿತ್ರವಾದ ಸಂಗತಿಗಳಿಂದ ತುಂಬಿದೆ. ಇದು ಸಂಭವಿಸಬಹುದು ಎಂದು ನಾವು ಸುಲಭವಾಗಿ ನಂಬಲು ಸಾಧ್ಯವಾಗದಂತಹ ವಿಡಿಯೋಗಳನ್ನು ಇಲ್ಲಿ ನಾವು ನೋಡುತ್ತೇವೆ.
ಆದರೆ ಕೆಲವೊಮ್ಮೆ ಇಂತಹ ಸಂಗತಿಗಳು ಕಂಡು ಬೆಚ್ಚಿಬೀಳುವುದರ ಜೊತೆಗೆ ನಗುವೂ ಬರುತ್ತದೆ. ಇದೀಗ ಅಂತಹ ಆಘಾತಕಾರಿ ವಿಡಿಯೋವೊಂದು ಮುನ್ನೆಲೆಗೆ ಬಂದಿದೆ.
ಈ ವಿಡಿಯೋದಲ್ಲಿ ಒಂದು ಹುಡುಗಿ ಹಾಯಾಗಿ ಮಲಗಿ ನಾಲಿಗೆ ಹೊರ ಹಾಕಿದ್ದಾಳೆ. ಆಗ ಒಂದು ನೊಣ ಬಂದು ಅವಳ ನಾಲಿಗೆ ಮೇಲೆ ಕುಳಿತುಕೊಂಡಿತು. ಹುಡುಗಿ ತಕ್ಷಣವೇ ತನ್ನ ಕ್ಯಾಮೆರಾವನ್ನು ಆನ್ ಮಾಡಿ ಎಲ್ಲವನ್ನೂ ರೆಕಾರ್ಡ್ ಮಾಡಲು ಪ್ರಾರಂಭಿಸಿದಳು. ನಿಧಾನವಾಗಿ ತನ್ನ ನಾಲಿಗೆಯನ್ನು ಬಾಯಿಯೊಳಗೆ ಎಳೆಯಲು ಪ್ರಾರಂಭಿಸಿದಳು.
ಇಲ್ಲಿ ನೊಣ ಇನ್ನೂ ನಾಲಿಗೆ ಮೇಲೆ ಕುಳಿತಿದೆ. ಈಗ ಹುಡುಗಿ ಇಡೀ ನಾಲಿಗೆಯನ್ನು ಬಾಯಿಯೊಳಗೆ ಎಳೆದುಕೊಂಡಳು ಮತ್ತು ತಕ್ಷಣವೇ ಬಾಯಿಯನ್ನು ಮುಚ್ಚಿದಳು. ಆಶ್ಚರ್ಯವೆಂದರೆ ನೊಣ ಇನ್ನೂ ಅವಳ ಬಾಯಿಯಲ್ಲಿಯೇ ಇದ್ದು ಅದನ್ನು ತಿಂದಿದ್ದಾಳೆ. ನೋಡಿದ್ರೆ ಬೆಚ್ಚಿ ಬೀಳಿಸುವ ಈ ದೃಶ್ಯ ಕಂಡ್ರೆ ತುಂಬಾ ನಗು ಬರುತ್ತೆ.
ನೊಣಗಳನ್ನು ತಿನ್ನುವ ಹುಡುಗಿಯನ್ನು ನೋಡಿ ನೆಟಿಜನ್‌ಗಳು ಕೂಡ ಆಶ್ಚರ್ಯ ಪಡುತ್ತಿದ್ದು, ತೀವ್ರವಾಗಿ ಕಾಮೆಂಟ್ ಮಾಡುತ್ತಿದ್ದಾರೆ. Funtop ಹೆಸರಿನ ಹ್ಯಾಂಡಲ್‌ನೊಂದಿಗೆ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ.