ಅಂತಾರಾಷ್ಟ್ರೀಯ

ನಾರ್ವೆಯ ಓಸ್ಲೋದಲ್ಲಿ ಸಾಮೂಹಿಕ ಗುಂಡಿನ ದಾಳಿ, ಇಬ್ಬರ ಸಾವು

several wounded in shooting in Oslo

ನಾರ್ವೆಯ ಓಸ್ಲೋದಲ್ಲಿ ಶನಿವಾರ ಮುಂಜಾನೆ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಡಜನ್‍ಗೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾರ್ವೇಜಿಯನ್ ರಾಜಧಾನಿಯ ಡೌನ್‍ಟೌನ್ ಪ್ರದೇಶದ ಬಾರ್‍ನ ಹೊರಗೆ ಗುಂಡಿನ ದಾಳಿ ನಡೆದಿದೆ. ಶಂಕಿತನನ್ನು ಬಂಧಿಸಲಾಗಿದೆ, ಬೇರೆಯವರು ಈ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಆರಂಭಿಕ ಮಾಹಿತಿ ಇಲ್ಲ ಎಂದು ಪೊಲೀಸ್ ವಕ್ತಾರ ಟೋರೆ ಬಸ್ರ್ಟಾಡ್ ಹೇಳಿದ್ದಾರೆ.ಓಸ್ಲೋದಲ್ಲಿ ಶನಿವಾರ ನಡೆಯಲಿರುವ ಪ್ರೈಡ್ ಪರೇಡ್ ಸಿದ್ಧತೆ ನಡೆಯುತ್ತಿತ್ತು.

ಅದಕ್ಕೂ ಮುನ್ನಾ ಈ ಶೂಟಿಂಗ್ ನಡೆದಿದೆ. ಪ್ರೈಡ್ ಕಾರ್ಯಕ್ರಮದ ಸಂಘಟಕರೊಂದಿಗೆ ಪೊಲೀಸರು ಸಂಪರ್ಕದಲ್ಲಿದ್ದಾರೆ. ಪ್ರೈಡ್ ಪೆರೇಡ್‍ಗೆ ಅಗತ್ಯ ಭದ್ರತೆ ಒದಗಿಸಲಾಗುವುದು, ಗುಂಡಿನ ದಾಳಿಗೂ ಪ್ರೈಡ್ ಪೆರೇಡ್‍ಗೂ ಯಾವುದಾದರೂ ಸಂಬಂಧ ಇದೆಯೇ ಎಂದು ಪರಿಶೀಲಿಸುವುದಾಗಿ ತಿಳಿಸಲಾಗಿದೆ.

ಗಾಯಗೊಂಡ 14 ಜನರು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ, ಅವರಲ್ಲಿ ಎಂಟು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾರ್ವೇಜಿಯನ್ ಪಬ್ಲಿಕ್ ಬ್ರಾಡ್‍ಕಾಸ್ಟರ್ ಪತ್ರಕರ್ತ ಓಲಾವ್ ರೋನೆಬರ್ಗ್ ಅವರು ಶೂಟಿಂಗ್‍ಗೆ ಸಾಕ್ಷಿಯಾಗಿದ್ದಾರೆ ಎಂದು ಹೇಳಿದರು.

ಒಬ್ಬ ವ್ಯಕ್ತಿ ಬ್ಯಾಗ್‍ನೊಂದಿಗೆ ಸ್ಥಳಕ್ಕೆ ಬಂದು, ಆಯುಧವನ್ನು ಎತ್ತಿಕೊಂಡು ಗುಂಡು ಹಾರಿಸಲು ಪ್ರಾರಂಭಿಸಿದನು. ಆರಂಭದಲ್ಲಿ ಅದು ಏರ್‍ಗನ್ ಎಂದು ಭಾವಿಸಲಾಯಿತು, ಪಕ್ಕದ ಬಾರ್‍ನ ಗಾಜು ಒಡೆದ ಬಳಿಕ ವಾಸ್ತವ ಅರಿವಾಯಿತು ಎಂದು ಪತ್ರಕರ್ತ ರೋನೆಬರ್ಗ್ ಎಂದು ತಿಳಿಸಿದ್ದಾರೆ.

ನಾರ್ವೇಜಿಯನ್ ಬ್ರಾಡ್‍ಕಾಸ್ಟರ್ ಮಾದ್ಯಮದಲ್ಲಿ, ಜನರು ಭಯಭೀತರಾಗಿ ಓಸ್ಲೋ ಬೀದಿಗಳಲ್ಲಿ ಓಡುತ್ತಿರುವ ದೃಶ್ಯಾವಳಿಗಳನ್ನು ತೋರಿಸಲಾಗಿದೆ.ನಾವು ದುರಂತ ಘಟನೆಯಿಂದ ಆಘಾತಕ್ಕೊಳಗಾಗಿದ್ದೇವೆ, ಸಂತ್ರಸ್ಥರ ಜೊತೆಯಲ್ಲಿದ್ದೇವೆ.

ಜನರಿಗೆ ಸೂಕ್ತ ಭದ್ರತೆ ಒದಗಿಸಲಾಗುವುದು ಎಂದು ಓಸ್ಲೋ ಆಡಳಿತ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.ನಾರ್ವೆ ಸುರಕ್ಷಿತ ದೇಶವಾಗಿದೆ ಆದರೆ ಬಲಪಂಥೀಯ ಉಗ್ರಗಾಮಿಗಳು ಆಗ್ಗಾಗ್ಗೆ ದಾಳಿ ನಡೆಸುತ್ತಾರೆ. 2011 ರಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿ ಭೀಕರ ಘಟನೆಗಳಲ್ಲಿ ಒಂದಾಗಿದೆ.

ಆಗ ಓಸ್ಲೋದಲ್ಲಿ ಬಾಂಬ್ ಸೋಟಿಸಿದ ನಂತರ ಬಲಪಂಥೀಯ ಉಗ್ರಗಾಮಿ ಉಟೋಯಾ ದ್ವೀಪದಲ್ಲಿ 69 ಜನರನ್ನು ಕೊಂದಿದ್ದನು.2019 ರಲ್ಲಿ ಇನ್ನೊಬ್ಬ ಬಲಪಂಥೀಯ ಉಗ್ರಗಾಮಿ ತನ್ನ ಮಲತಾಯಿಯನ್ನು ಕೊಂದು, ನಂತರ ಮಸೀದಿಗೆ ನುಗ್ಗಿ ಗುಂಡು ಹಾರಿಸಿ ಹಲವರನ್ನು ಗಾಯಗೊಳಿಸಿದ್ದ ಎಂದು ಮಾಹಿತಿ ಹಂಚಿಕೊಳ್ಳಲಾಗಿದೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button