ನಾಯಿಗಾಗಿ ಮಾಲೀಕನನ್ನೇ ಅಪಹರಿಸಿದ ಖದೀಮರು!

ದುಬಾರಿ ಜಾತಿ ನಾಯಿಗಾಗಿ ನಾಯಿ ಮಾಲೀಕನನ್ನೇ ಕಿಡ್ನ್ಯಾಪ್ ಮಾಡಿದ ಘಟನೆ ಉತ್ತರಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.ನಾಯಿಯ ಮೇಲೆ ಕಣ್ಣು ಹಾಕಿದ್ದ ಖದೀಮರು ಅದಕ್ಕಾಗಿ ನಾಯಿ ಮಾಲೀಕನ ಸಹೋದರನನ್ನೇ ಕಿಡ್ನ್ಯಾಪ್ ಮಾಡಿ ಸಹೋದರ ಜೀವ ಸಹಿತ ಬೇಕಾದರೆ ನಿಮ್ಮಲ್ಲಿರುವ ದುಬಾರಿ ಶ್ವಾನವನ್ನು ತೆಗೆದುಕೊಂಡು ಬರುವಂತೆ ಕುಟುಂಬದವರಿಗೆ ಕರೆ ಮಾಡಿದ್ದಾರೆ.
ಗ್ರೇಟರ್ ನೋಯ್ಡಾದ ಅಲ್ಪಾ 2 ನಿವಾಸಿ ರಾಹುಲ್ ಪ್ರತಾಪ್ ಕಿಡ್ನ್ಯಾಪ್ ಆದ ವ್ಯಕ್ತಿ. ಸಹೋದರ ಶುಭಂ ಎರಡು ದುಬಾರಿ ಬೆಲೆಯ ಶ್ವಾನಗಳನ್ನು ಸಾಕಿದ್ದರು. ರಾಟ್ ವಿಲ್ಲರ್ ಹಾಗೂ ಡಾಗ್ ಅರ್ಜೆಂಟಿನೋ ದುಬಾರಿ ಶ್ವಾನ. ಅರ್ಜೆಂಟಿನೋವನ್ನು ಆರು ತಿಂಗಳ ಹಿಂದೆ 1.5 ಲಕ್ಷ ಹಣ ನೀಡಿ ಖರೀದಿಸಿದ್ದರು.
ಈ ಶ್ವಾನದ ಮೇಲೆ ಖದೀಮರು ಕಣ್ಣು ಹಾಕಿದ್ದರು. ಡಿಸೆಂಬರ್ 14ರಂದು ಗ್ರೇಟರ್ ನೋಯ್ಡಾದ ಅಲ್ಫಾ2ನಲ್ಲಿ ರಾಹುಲ್ ನಿವಾಸದ ಬಳಿ ವಿಶಾಲ್ ಕುಮಾರ್, ಲಲಿತ್ ಹಾಗೂ ಮೋಟಿ ಭೇಟಿ ಮಾಡಿದ್ದಾರೆ.ರಾಹುಲ್‌ನಿಂದ ಶ್ವಾನವನ್ನು ಕಿತ್ತುಕೊಂಡು ಹೋಗಲು ಮುಂದಾಗಿದ್ದು ಸಾಧ್ಯವಾಗಿಲ್ಲ. ನಂತರ ಮೂವರೂ ಶ್ವಾನವನ್ನು ಅಲ್ಲಿ ಬಿಟ್ಟು ರಾಹುಲ್‌ನನ್ನು ಅಲ್ಲಿಂದ ಎಳೆದುಕೊಂಡು ಹೋಗಿದ್ದಾರೆ.
ಅಪಹರಣಕಾರರು ರಾಹುಲ್ ಸಹೋದರ ಶುಭಂಗೆ ಕರೆ ಮಾಡಿ ರಾಹುಲ್ ಜೀವಂತವಾಗಿ ಬೇಕಿದ್ದಲ್ಲಿ ದುಬಾರಿ ಶ್ವಾನದೊಂದಿಗೆ ಬರುವಂತೆ ಹೇಳಿದ್ದಾರೆ.ಶುಭಂ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಪೊಲೀಸರು ದೂರವಾಣಿ ಮೂಲಕವೇ ವಿಚಾರಣೆ ನಡೆಸಿದಾಗ ಡಿಸೆಂಬರ್ 15 ರಂದು ರಾಹುಲ್‌ನನ್ನು ಬಿಟ್ಟು ಕಳುಹಿಸಿದ್ದಾರೆ.
ಅಲಿಗರ್‌ನ ನಿರ್ಜನ ಪ್ರದೇಶವೊಂದರಲ್ಲಿ ರಾಹುಲ್ ಹಾಗೂ ಆತನ ಮೊಬೈಲ್ ಬಿಟ್ಟು ಖದೀಮರು ಪರಾರಿಯಾಗಿದ್ದರು. ಆರೋಪಿಗಳ ಹುಡುಕಾಟದಲ್ಲಿ ಪೊಲೀಸ್ ತಂಡ ನಿರತವಾಗಿದೆ ಎಂದು ಸ್ಟೇಷನ್ ಹೌಸ್ ಆಫೀಸರ್ ಅಂಜನಿ ಕುಮಾರ್ ತಿಳಿಸಿದ್ದಾರೆ.