ನಾನು ಬಿಸಿಸಿಐ ಸೇರಿದಾಗ ಇದ್ದಿದ್ದು 40 ಕೋಟಿ, ನನ್ನನ್ನು ಬ್ಯಾನ್ ಮಾಡಿದಾಗ ಇದ್ದಿದ್ದು 47,680 ಕೋಟಿ…!

ನವದೆಹಲಿ: ಐಪಿಎಲ್‌ನ ಮೊದಲ ಅಧ್ಯಕ್ಷರಾದ ಲಲೀತ್ ಮೋದಿ ಬಾಲಿವುಡ್ ನಟಿ ಸುಶ್ಮಿತಾಸೇನ್ ಜೊತೆಗಿನ ಸಂಬಂಧವನ್ನು ಘೋಷಿಸಿದಾಗಿನಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಮೀಡಿಯಾಗಳಲ್ಲಿ ಅವರು ಚರ್ಚೆಯ ವಸ್ತುವಾಗಿದ್ದಾರೆ, ಅಷ್ಟೇ ಅಲ್ಲದೆ ಅವರು ಈಗ ಟ್ರೋಲ್ ಗೆ ಕೂಡ ಒಳಗಾಗುತ್ತಿದ್ದಾರೆ.
ಈ ಸಂದರ್ಭದಲ್ಲಿ ಅವರು ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ಇದಕ್ಕೆಲ್ಲಾ ಉತ್ತರ ನೀಡಿದ್ದಾರೆ.ತಾವು ಸೇರ್ಪಡೆಗೊಂಡಾಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬ್ಯಾಂಕ್‌ನಲ್ಲಿ 40 ಕೋಟಿ ರೂಪಾಯಿಗಳನ್ನು ಹೊಂದಿತ್ತು ಮತ್ತು ತಾವು ಬ್ಯಾನ್ ಆಗುವ ವೇಳೆಗೆ ಬಿಸಿಸಿಐ ಬಳಿ 47,680 ಕೋಟಿ ರೂಪಾಯಿ ಇತ್ತು ಎಂದು ಲಲಿತ್ ಮೋದಿ ಹೇಳಿದ್ದಾರೆ.
ನಾನು ಡೈಮಂಡ್ ಸ್ಪೂನ್ ನೊಂದಿಗೆ ಹುಟ್ಟಿದ್ದೇನೆ,ಇದುವರೆಗೆ ನಾನು ಲಂಚವನ್ನು ತೆಗೆದುಕೊಂಡಿಲ್ಲ, ಅದು ಅಗತ್ಯವೂ ಇಲ್ಲ, ನಾನು ರಾಯ ಬಹದೂರ್ ಗುಜರ ಮಾಲ್ ಅವರ ಹಿರಿಯ ಮೊಮ್ಮಗ ಎನ್ನುವುದನ್ನು ಮರೆಯಬೇಡಿ, ನಾನು ಹಣವನ್ನು ತಂದಿದ್ದೇನೆ ಹೊರತು ತೆಗೆದುಕೊಂಡಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ.
ನಾನು ಬಿಸಿಸಿಐಗೆ ಸೇರಿದಾಗ ಬ್ಯಾಂಕ್‌ನಲ್ಲಿ 40 ಕೋಟಿ ಇತ್ತು. ನನ್ನ ಹುಟ್ಟುಹಬ್ಬದ ನವೆಂಬರ್ 29, 2005 ರಂದು ನಾನು ಸೇರಿಕೊಂಡೆ. ನನ್ನನ್ನು ಬ್ಯಾನ್ ಮಾಡಿದಾಗ ಬ್ಯಾಂಕಿನಲ್ಲಿ ಏನಿತ್ತು ಎಂದು ಊಹಿಸಿ – 47,680 ಕೋಟಿ” ಎಂದು ಅವರು ಹೇಳಿಕೊಂಡಿದ್ದಾರೆ.
ಐಪಿಎಲ್‌ನ ಮೊದಲ ಅಧ್ಯಕ್ಷರಾದ ಲಲಿತ್ ಮೋದಿ ಜುಲೈ 15 ರಂದು ಸುಶ್ಮಿತಾ ಸೇನ್ ಅವರೊಂದಿಗೆ ಚಿತ್ರಗಳನ್ನು ಹಂಚಿಕೊಂಡಾಗಿನಿಂದ ಸುದ್ದಿಯಲ್ಲಿದ್ದಾರೆ.ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ ಅವರು ಮದುವೆಯಾಗಿಲ್ಲ ಆದರೆ ಇಬ್ಬರೂ ಡೇಟಿಂಗ್ ಮಾಡುತ್ತಿರುವುದಾಗಿ ಹೇಳಿದ್ದಾರೆ.