ನಶಿಸಿಹೋಗುತ್ತಿರುವ ಇತಿಹಾಸ ಪ್ರಸಿದ್ಧ ಪುರಾತನ ದೇವಾಲಯಗಳು.

ಅರಸೀಕೆರೆ ನಗರದ ಬೆಂಡೆಕೆರೆ ಗ್ರಾಮದಲ್ಲಿ ಗೋಪಾಲಕೃಷ್ಣ ಹಾಗೂ ರಾಮೇಶ್ವರ ದೇವಾಲಯಗಳು ಇದ್ದು ಇವು ಅತ್ಯಂತ ಪುರಾತನ ದೇವಾಲಯಗಳಾಗಿವೆ. ಇವು ನಮ್ಮ ದೇಶದ ಇತಿಹಾಸವನ್ನು ಹಾಗೂ ನಮ್ಮ ಪೂರ್ವಜರ ಕಲೆ ಸಾಹಿತ್ಯ ಸಂಸ್ಕೃತಿಯನ್ನು ಸಾರುವ ಸಂಕೇತಗಳಾಗಿವೆ. ನಮ್ಮ ಅರಸೀಕೆರೆಯ ಗತವೈಭವವನ್ನು ಸಾರುತ್ತಿವೆ ಇಂತಹ ಈ ದೇವಾಲಯಗಳನ್ನು ಕೇಲ ಭೂಗಳ್ಳರು ಕಬಳಿಸುತ್ತಿದ್ದು, ಕೇಲ ಅವಿವೇಕಿಗಳು ದೇವಾಲಯಗಳ ಆವರಣವನ್ನು ಹಾಳು ಮಾಡುತ್ತಿದ್ದಾರೆ.

ದೇವಾಲಯಗಳು ಶಿಥಿಲಗೊಂಡಿದ್ದು ದೇವಸ್ಥಾನಗಳು ಬೀಳುವ ಸ್ಥಿತಿ ಬಂದಿವೆ ಇದರಿಂದ ಅತ್ಯಂತ ಪುರಾತನ ವಿಗ್ರಹಗಳು ಹಾಳಾಗುವ ಸಾಧ್ಯತೆ ಇದೆ.

ನಮ್ಮ ದೇಶದ ಇತಿಹಾಸ ಕಲೆ ಸಾಹಿತ್ಯ ಸಂಸ್ಕೃತಿ ಪರಂಪರೆಯನ್ನು ಸಾರುವ ಇಂತಹ ದೇವಾಲಯಗಳನ್ನು ಸಂರಕ್ಷಿಸುವುದು ದೇಶದ ಪ್ರತಿಯೊಬ್ಬ ಪ್ರಜೆಗಳ ಕರ್ತವ್ಯವಾಗಿರುತ್ತದೆ. ಅರಸೀಕೆರೆ ತಾಲ್ಲೂಕಿನ ದಂಡಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ನಶಿಸಿ ಹೋಗುತ್ತಿರುವ ನಮ್ಮ ಇತಿಹಾಸದ ಗತವೈಭವ ಸಾರುತ್ತಿರುವ ದೇವಾಲಯಗಳನ್ನು ಸಂರಕ್ಷಿಸಿ ಅವುಗಳನ್ನು ಪುನರ್ ಚೇತನಗೊಳಿಸಿಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.