ಬೆಂಗಳೂರುರಾಜ್ಯಸಿನಿಮಾ

ನವೆಂಬರ್ 7 ರಿಂದ 11 ರವರೆಗೆ ಗಂಧದ ಗುಡಿ ಚಿತ್ರದ ಟಿಕೆಟ್ ದರದಲ್ಲಿ ಇಳಿಕೆ

ಬೆಂಗಳೂರು: ನಮ್ಮೆಲ್ಲರ ಹೆಮ್ಮೆ ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅಭಿನಯದ ಚಿತ್ರ ಗಂಧದ ಗುಡಿಯನ್ನು ಕನ್ನಡಿಗರೆಲ್ಲರೂ ನೋಡಬೇಕೆನ್ನುವ ದೃಷ್ಟಿಕೋನದಿಂದ ಈಗ ಟಿಕೆಟ್ ದರದಲ್ಲಿ ಕಡಿತ ಮಾಡಲಾಗಿದೆ.

ಈ ವಿಷಯವನ್ನು ಚಿತ್ರದ ನಿರ್ಮಾಪಕಿಯಾಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಟ್ವೀಟ್ ಮೂಲಕ ಧೃಡಪಡಿಸಿದ್ದಾರೆ.

ಗಂಧದಗುಡಿ ಅಪ್ಪು ರವರ ಒಂದು ಕನಸು ಕರ್ನಾಟಕದ ವನ್ಯ ಸಂಪತ್ತು ಹಾಗೂ ಪ್ರಕೃತಿ ಸೌಂದರ್ಯವನ್ನು ಕನ್ನಡಿಗರಿಗೆ ಪರಿಚಯಿಸುವ ಅವರ ಹಂಬಲ.

ಈ ಸಿನಿಮಾ ರೂಪಗೊಳ್ಳಲು ಕಾರಣ, ಅಪ್ಪು ಅವರ ಉದ್ದೇಶ ಈ ಸಿನಿಮಾ ಎಲ್ಲ ಕನ್ನಡಿಗರು ನೋಡಬೇಕೆಂಬುದು ಅದರಲ್ಲೂ ಮಕ್ಕಳು ನೋಡಬೇಕೆಂಬುದು,

ಈ ಸಲುವಾಗಿ ನಾನು ಹಾಗೂ ಚಿತ್ರ ತಂಡ ಎಲ್ಲರೊಡನೆ ಚರ್ಚಿಸಿ ವಿತರಕರ ಹಾಗೂ ಪ್ರದರ್ಶಕರ ಸಹಕಾರದೊಂದಿಗೆ ನಮ್ಮ ಚಿತ್ರ ಗಂಧದಗುಡಿ ಯನ್ನು 07-11-2022

ಸೋಮವಾರದಿಂದ 10-11-2022 ಗುರುವಾರದವರೆಗೂ Single Screens ಥೀಯೇಟರ್ ಗಳಲ್ಲಿ 56/- ರೂ.ಗಳಿಗೆ ಹಾಗೂ Mulitiplex ಗಳಲ್ಲಿ 112/- ರೂ ಗಳಿಗೆ ಕರ್ನಾಟಕ ರಾಜ್ಯಾದ್ಯಂತ ದಿನದ ಎಲ್ಲಾ ಆಟಗಳು ಪ್ರದರ್ಶನ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆ.

ನಮ್ಮ ಮಕ್ಕಳ ನಾಳೆಗಳಿಗಾಗಿ ಕಾಡನ್ನು ಸಂರಕ್ಷಿಸೋಣ, ಗಂಧದಗುಡಿ ಯನ್ನು ತೋರಿಸೋಣ.” ಎಂದು ಅವರು ಬರೆದುಕೊಂಡಿದ್ದಾರೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button