ಅಪರಾಧಪೊಲೀಸ್ರಾಷ್ಟ್ರಿಯ

ನರೇಂದ್ರ ಮೋದಿ ಹತ್ಯೆಗೆ ಸಂಚು; 2047ರ ವೇಳೆಗೆ ಇಸ್ಲಾಮಿಕ್‌ ಇಂಡಿಯಾದ ಪ್ಲಾನ್‌, ಇಬ್ಬರ ಬಂಧನ

ಪಟನಾ: ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸ್ಕೆಚ್‌ ಸಿದ್ಧಪಡಿಸಿದ್ದ ಉಗ್ರರ ಜಾಲವೊಂದು ಬಿಹಾರದಲ್ಲಿ ಬೆಳಕಿಗೆ ಬಂದಿದ್ದು, ಈ ಸಂಬಂಧ ನಿವೃತ್ತ ಜಾರ್ಖಂಡ್‌ ಪೊಲೀಸ್‌ ಅಧಿಕಾರಿ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ಬಿಹಾರ ಪೊಲೀಸರು ನಡೆಸಿದ ರಹಸ್ಯ ತನಿಖೆಯಲ್ಲಿ ಪ್ರಧಾನಿ ಹತ್ಯೆಗೆ ನಡೆದ ಸಂಚಿನ ಬಗ್ಗೆ ತಿಳಿದುಬಂದಿದೆ. ಬುಧವಾರ ತಡರಾತ್ರಿ ಫುಲ್ವಾರಿ ಷರೀಫ್‌ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಉಗ್ರ ಸಂಘಟನೆಗಳ ಜತೆಗೆ ನಂಟು ಹೊಂದಿರುವ ನಿವೃತ್ತ ಅಧಿಕಾರಿ ಮೊಹಮ್ಮದ್‌ ಜಲಾವುದ್ದೀನ್‌, ಅಥೇರ್‌ ಪರ್ವೇಜ್‌ನನ್ನು ಬಂಧಿಸಿದ್ದಾರೆ.

‘ಜಲಾವುದ್ದೀನ್‌ಗೆ ಸಿಮಿ ಉಗ್ರ ಸಂಘಟನೆ ಜತೆಗೆ ನಿಕಟ ಸಂಪರ್ಕ ಇತ್ತು. ಪರ್ವೇಜ್‌ ಕೂಡ ಪಿಎಫ್‌ಐನ ಸಕ್ರಿಯ ಸದಸ್ಯ ಎಂದು ತಿಳಿದುಬಂದಿದೆ. ಜುಲೈ 12ರಂದು ಪ್ರಧಾನಿ ಭೇಟಿ ವೇಳೆ ಕೆಲವು ಸಂಘಟನೆಗಳು, ಅದರ ಸಕ್ರಿಯ ಸದಸ್ಯರ ಮೇಲೆ ತೀವ್ರ ನಿಗಾ ಇರಿಸಿದ್ದೆವು. ಆಗಲೇ ಉಗ್ರ ಜಾಲದ ಸಂಚು ಬಯಲಾಯಿತು’ ಎಂದು ತನಿಖಾಧಿಕಾರಿ ಮನೀಶ್‌ ಕುಮಾರ್‌ ಹೇಳಿದ್ದಾರೆ.

ಪ್ರಧಾನಿ ಹತ್ಯೆಗೆ ಯತ್ನಿಸಿದ ಪ್ರಕರಣ ಸಂಬಂಧ ಎಫ್‌ಐಆರ್‌ ದಾಖಲಿಸಲಾಗಿದ್ದು, 26 ಆರೋಪಿಗಳನ್ನು ಹೆಸರಿಸಲಾಗಿದೆ.

ಬಂಧಿತ ಪರ್ವೇಜ್‌ಗೆ ಪಿಎಫ್‌ಐ ಸಂಘಟನೆಯ ನಂಟಿತ್ತು. ಈ ಮೂಲಕ ಆತ ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಭಾರತ ವಿರೋಧಿ ಚಟುವಟಿಕೆಗೆ ಲಕ್ಷಾಂತರ ದೇಣಿಗೆ ಸಂಗ್ರಹಿಸುತ್ತಿದ್ದ. ಪ್ರಧಾನಿ ಭೇಟಿಗೂ ಮುನ್ನ ಫುಲ್ವಾರಿ ಷರೀಫ್‌ ಪ್ರದೇಶದಲ್ಲೇ ಕೆಲವು ಯುವಕರನ್ನು ಒಟ್ಟುಗೂಡಿಸಿ ದಾಳಿಯ ತರಬೇತಿಯನ್ನು ಪರ್ವೇಜ್‌ ನೀಡಿದ್ದ.
ಸ್ಥಳೀಯರಿಗೆ ಕತ್ತಿ, ಚಾಕುಗಳ ಮೂಲಕ ಮಾರ ಣಾಂತಿಕ ದಾಳಿ ನಡೆಸುವ ಬಗ್ಗೆ ಹಾಗೂ ಕೋಮುಗಲಭೆ ಎಬ್ಬಿಸುವ ಕುರಿತು ತರಬೇತಿ ಕೊಡುತ್ತಿದ್ದ. ತರಬೇತಿಗೆ ಬರುತ್ತಿದ್ದವರು ಹೆಸರು ಬದಲಿಸಿಕೊಂಡು ಬಿಹಾರದ ವಿವಿಧ ಹೋಟೆಲ್‌ಗಳಲ್ಲಿ ತಂಗುತ್ತಿದ್ದರು.

ಜುಲೈ 12ರಂದು ಮೋದಿ ಭೇಟಿಗೂ 15 ದಿನಗಳ ಮುನ್ನ ದಾಳಿಕೋರರ ತಂಡಕ್ಕೆ ಪರ್ವೇಜ್‌ ತರಬೇತಿ ನೀಡಿದ್ದ ಎಂದು ಗುಪ್ತಚರರಿಂದ ಮಾಹಿತಿ ಸಿಕ್ಕಿದೆ ಎಂದು ಸಹಾಯಕ ಪೊಲೀಸ್‌ ವರಿಷ್ಠಾಧಿಕಾರಿ ಮನೀಶ್‌ ಕುಮಾರ್‌ ತಿಳಿಸಿದ್ದಾರೆ. ಪರ್ವೇಜ್‌ನ ಸೋದರ 2001-2002ರಲ್ಲಿ ಬಿಹಾರದಲ್ಲಿಸಿಮಿ ಸಂಘಟನೆ ನಡೆಸಿದ ಹಲವು ಬಾಂಬ್‌ ದಾಳಿ ಪ್ರಕರಣಗಳಲ್ಲಿದೋಷಿಯಾಗಿ ಜೈಲು ಪಾಲಾಗಿದ್ದಾನೆ. ಹಣ ಅಕ್ರಮ ವರ್ಗಾವಣೆ ಕುರಿತು ಪತ್ತೆಗೆ ಬಿಹಾರ ಪೊಲೀಸರು ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ಪತ್ರ ಬರೆದು ಕೋರಿದ್ದಾರೆ ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button