ನಮ್ಮ ರಾಜ್ಯದ ಶಾಸಕರಿಗೆ ತಿಂಗಳಿಗೆ ಸಿಗುವ ವೇತನ ಎಷ್ಟು ಗೊತ್ತೇ?

ಶಾಸಕರ ವೇತನ: ಯಾವುದೇ ಕ್ಷೇತ್ರದಲ್ಲಿ ಏನೇ ಸಮಸ್ಯೆ ಇದ್ದರೂ ಜನರು ಮೊದಲು ತಮ್ಮ ಕುಂದು ಕೊರತೆಗಳ ಬಗ್ಗೆ ಮಾಹಿತಿ ನೀಡುವುದು ಆ ಪ್ರದೇಶದ ಶಾಸಕರಿಗೆ.
ಅಂತೆಯೇ ಯಾವುದೇ ಮೂಲಭೂತ ಸೌಕರ್ಯಗಳ ಕೊರತೆ ಕಂಡು ಬಂದರೂ ಮೊದಲು ಪ್ರತಿಭಟನೆಯ ಬಿಸಿ ತಾಕುವುದೇ ಶಾಸಕರಿಗೆ. ಜನರ ಸೇವೆಗಾಗಿ ರಾಜಕೀಯ ರಂಗದಲ್ಲಿ ದುಡಿಯುವ ನಮ್ಮ ಜನನಾಯಕರು ಅಂದರೆ ನಮ್ಮ ಶಾಸಕರಿಗೂ ಸಂಬಳ ದೊರೆಯುತ್ತದೆ.
ಇದನ್ನು ಶಾಸಕರ ಭತ್ಯೆ ಎಂತಲೂ ಕರೆಯಲಾಗುತ್ತದೆ. ನಿನ್ನೆಯಷ್ಟೇ (ಜುಲೈ 4) ದೆಹಲಿ ವಿಧಾನಸಭೆಯಲ್ಲಿ ದೆಹಲಿ ಸರ್ಕಾರದ ಕಾನೂನು ವ್ಯವಹಾರಗಳ ಸಚಿವ ಕೈಲಾಶ್ ಗೆಹ್ಲೋಟ್ ಅವರು ಸಚಿವರು, ಶಾಸಕರು, ಸ್ಪೀಕರ್, ಉಪಸಭಾಪತಿ, ವಿರೋಧ ಪಕ್ಷದ ನಾಯಕ ಮತ್ತು ಮುಖ್ಯ ಸಚೇತಕರ ವೇತನವನ್ನು ಹೆಚ್ಚಿಸುವ ಮಸೂದೆಯನ್ನು ಮಂಡಿಸಿದರು.
ದೆಹಲಿ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ವೇತನ ಮತ್ತು ಭತ್ಯೆಗಳನ್ನು ದ್ವಿಗುಣಗೊಳಿಸುವ ಮಸೂದೆಯನ್ನುಅಂಗೀಕರಿಸಿದೆ.
ದೆಹಲಿ ಶಾಸಕರಿಗೆ 66.67% ವೇತನ ಹೆಚ್ಚಳವನ್ನು ಪ್ರಸ್ತಾಪಿಸುವ ಮಸೂದೆಯನ್ನು ಈಗ ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಳುಹಿಸಲಾಗುವುದು.
ಪ್ರಸ್ತುತ ದೆಹಲಿಯಲ್ಲಿರುವ ಶಾಸಕರು ತಿಂಗಳಿಗೆ 54,000 ರೂಪಾಯಿಗಳನ್ನು ವೇತನ ಮತ್ತು ಭತ್ಯೆಯಾಗಿ ಪಡೆಯುತ್ತಾರೆ, ಈ ಭಟ್ಯೆಯು ಹೆಚ್ಚಳದ ನಂತರ 90,000 ರೂ.ಗಳಿಗೆ ಹೆಚ್ಚಾಗುವ ಸಾಧ್ಯತೆಯಿದೆ.
ಪರಿಷ್ಕೃತ ವೇತನ ಮತ್ತು ಭತ್ಯೆಗಳ ವಿಘಟನೆಯು ಮೂಲ ವೇತನ – ರೂ. 30,000, ಕ್ಷೇತ್ರ ಭತ್ಯೆ – ರೂ. 25,000, ಕಾರ್ಯದರ್ಶಿ ಭತ್ಯೆ – ರೂ. 15,000, ದೂರವಾಣಿ ಭತ್ಯೆ – ರೂ. 10,000, ಸಾರಿಗೆ ಭತ್ಯೆ – ರೂ. 10,000 ಕೂಡ ಸೇರಿದೆ. ಶಾಸಕರಿಗೆ ಮಾಸಿಕ ವೇತನದ ಹೊರತಾಗಿ ಕ್ಷೇತ್ರದ ಅಭಿವೃದ್ಧಿಗೆ ಪ್ರತಿ ವರ್ಷ 1 ಕೋಟಿ ರೂ.ನಿಂದ 8 ಕೋಟಿ ರೂ. ವರೆಗೆ ಕ್ಷೇತ್ರ ಭತ್ಯೆಯನ್ನೂ ನೀಡಲಾಗುತ್ತದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹಣಕಾಸು ಖಾತೆಯನ್ನು ಹೊಂದಿರುವ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, “ಪ್ರತಿಭಾವಂತರನ್ನು ರಾಜಕೀಯಕ್ಕೆ ಆಹ್ವಾನಿಸಲು, ಪ್ರತಿಫಲಗಳು ಇರಬೇಕು. ಕಾರ್ಪೊರೇಟ್ಗಳು ಸಂಬಳದ ಕಾರಣದಿಂದ ಪ್ರತಿಭಾವಂತ ಜನರನ್ನು ಪಡೆಯುತ್ತಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಶಾಸಕ ಮತ್ತು ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಾಮವೀರ್ ಸಿಂಗ್ ಬಿಧುರಿ ಕೂಡ ವೇತನ ಹೆಚ್ಚಳವನ್ನು ಬೆಂಬಲಿಸಿದ್ದಾರೆ.
ಶಾಸಕರ ವೇತನ ಮತ್ತು ಭತ್ಯೆಗಳನ್ನು ಪರಿಷ್ಕರಿಸಲು ದೆಹಲಿ ವಿಧಾನಸಭೆಯಲ್ಲಿ ಶಾಸಕಾಂಗ ಪ್ರಸ್ತಾವನೆಯನ್ನು ಮಂಡಿಸಲು ಕೇಂದ್ರ ಗೃಹ ಸಚಿವಾಲಯವು ದೆಹಲಿ ಸರ್ಕಾರಕ್ಕೆ ತನ್ನ ಪೂರ್ವಾನುಮತಿಯನ್ನು ಮೇ ತಿಂಗಳಲ್ಲಿ ತಿಳಿಸಿತ್ತು.ದೆಹಲಿಯ ಶಾಸಕರ ವೇತನವು ದೇಶದಲ್ಲೇ ಅತ್ಯಂತ ಕಡಿಮೆ:ದೆಹಲಿಯ ಶಾಸಕರ ವೇತನವು ದೇಶದಲ್ಲೇ ಅತ್ಯಂತ ಕಡಿಮೆ ಎಂದು ದೆಹಲಿ ಸರ್ಕಾರ ಹೇಳಿಕೊಂಡಿದೆ.
ಆಮ್ ಆದ್ಮಿ ಪಕ್ಷ ಸೋಮವಾರ ಟ್ವೀಟ್ ಮಾಡಿದ್ದು, ದೇಶದ ವಿವಿಧ ರಾಜ್ಯಗಳ ಶಾಸಕರ ವೇತನದ ಬಗ್ಗೆ ಮಾಹಿತಿ ನೀಡಲಾಗಿದೆ. ಎಎಪಿಯ ಟ್ವೀಟ್ ಪ್ರಕಾರ, ತೆಲಂಗಾಣ ಶಾಸಕರು ಅತ್ಯಧಿಕ ವೇತನವನ್ನು ಪಡೆಯುತ್ತಿದ್ದಾರೆ. ಇವರು ವೇತನ, ಭತ್ಯೆ ಸೇರಿ ತಿಂಗಳಿಗೆ 2.50 ಲಕ್ಷ ರೂ. ವರೆಗೆ ಭತ್ಯೆ ಪಡೆಯುತ್ತಾರೆ ಎಂದು ಟ್ವೀಟ್ ಉಲ್ಲೇಖಿಸಿದೆ. ಯಾವ ರಾಜ್ಯದ ಶಾಸಕರು ಎಷ್ಟು ಸಂಬಳ (ಸಂಬಳ + ಭತ್ಯೆ) ಪಡೆಯುತ್ತಾರೆ? ಯಾವ ರಾಜ್ಯದ ಶಾಸಕರು ಅತಿ ಹೆಚ್ಚು ಭತ್ಯೆ ಪಡೆಯುತ್ತಾರೆ ತಿಳಿಯೋಣ…>> ತೆಲಂಗಾಣ – ₹ 2.5 ಲಕ್ಷ>> ಮಹಾರಾಷ್ಟ್ರ – ₹ 2.32 ಲಕ್ಷ>> ಕರ್ನಾಟಕ – ₹ 2.05 ಲಕ್ಷ>> ಉತ್ತರ ಪ್ರದೇಶ – ₹ 1.87 ಲಕ್ಷ >> ಉತ್ತರಾಖಂಡ – ₹ 1.60 ಲಕ್ಷ>> ಆಂಧ್ರ ಪ್ರದೇಶ – ₹ 1.30 ಲಕ್ಷ>> ಹಿಮಾಚಲ ಪ್ರದೇಶ – ₹ 1.25 ಲಕ್ಷ>> ರಾಜಸ್ಥಾನ – ₹ 1.25 ಲಕ್ಷ>> ಗೋವಾ – ₹ 1.17 ಲಕ್ಷ>> ಹರಿಯಾಣ- ₹ 1.15 ಲಕ್ಷ>> ಪಂಜಾಬ್ – ₹ 1.14 ಲಕ್ಷ>> ಬಿಹಾರ – ₹ 1.14 ಲಕ್ಷ>> ಪಶ್ಚಿಮ ಬಂಗಾಳ – ₹ 1.13 ಲಕ್ಷ>> ಜಾರ್ಖಂಡ್ – ₹ 1.11 ಲಕ್ಷ>> ಮಧ್ಯ ಪ್ರದೇಶ – ₹ 1.10 ಲಕ್ಷ>> ಛತ್ತೀಸ್ ಗಢ – ₹ 1.10 ಲಕ್ಷ>> ತಮಿಳುನಾಡು – ₹ 1.05 ಲಕ್ಷ>> ಸಿಕ್ಕಿಂ – ₹ 86,700>> ಕೇರಳ -₹ 70 ಸಾವಿರ>> ಗುಜರಾತ್- ₹ 65 ಸಾವಿರ>> ಒಡಿಶಾ- ₹ 62 ಸಾವಿರ >> ಮೇಘಾಲಯ- ₹ 59 ಸಾವಿರ>> ಪುದುಚೇರಿ- ₹ 50 ಸಾವಿರ>> ಅರುಣಾಚಲ ಪ್ರದೇಶ- ₹ 49 ಸಾವಿರ>> ಮಿಜೋರಾಂ- ₹ 47 ಸಾವಿರ>> ಅಸ್ಸಾಂ- ₹ 42 ಸಾವಿರ>> ಮಣಿಪುರ- ₹ 37 ಸಾವಿರ>> ನಾಗಾಲ್ಯಾಂಡ್- ₹ 36 ಸಾವಿರ>> ತ್ರಿಪುರ- ₹ 34 ಸಾವಿರ.ಈ ಮೇಲಿನ ಅಂಕಿ-ಅಂಶಗಳ ಪ್ರಕಾರ ಇಡೀ ದೇಶದಲ್ಲಿ ತೆಲಂಗಾಣ ರಾಜ್ಯದ ಶಾಸಕರು ಅತಿ ಹೆಚ್ಚು ಭತ್ಯೆಯನ್ನು ಪಡೆಯುತ್ತಿದ್ದು, ತ್ರಿಪುರಾ ಶಾಸಕರು ಅತಿ ಕಡಿಮೆ ಭತ್ಯೆಯನ್ನು ಪಡೆಯುತ್ತಿದ್ದಾರೆ.