ನನ್ನ ಲೈಂಗಿಕ ಜೀವನ ಅಷ್ಟೊಂದು ಸರಿಯಾಗಿಲ್ಲದ ಕಾರಣ ನನ್ನನ್ನು …..!’

ಖ್ಯಾತ ಬಾಲಿವುಡ್ ನಟಿ ತಾಪ್ಸಿ ಪನ್ನು ಶೀಘ್ರದಲ್ಲಿಯೇ ತಮ್ಮ ಮುಂಬರುವ ಚಿತ್ರ ‘ದೋಬಾರಾ’ನಲ್ಲಿ ಕಾಣಿಸಿಕೊಳ್ಳಲಿದ್ದಾಳೆ.
ಈ ಚಿತ್ರಕ್ಕೆ ಸಂಬಂಧಿಸಿದಂತೆ ತಾಪ್ಸಿ ಭಾರಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಳೆ. ಇತ್ತೀಚೆಗಷ್ಟೇ ಲೈವ್ ಪ್ರೋಮೊಶನಲ್ ಇವೆಂಟ್ ನಲ್ಲಿ ‘ಕಾಫೀ ವಿಥ್ ಕರಣ್’ ಕುರಿತು ತಾಪ್ಸಿ ನೀಡಿರುವ ಹೇಳಿಕೆ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ ಮತ್ತು ತಾಪ್ಸಿ ಸಾಕಷ್ಟು ಹೆಡ್ ಲೈನ್ ಗಿಟ್ಟಿಸುತ್ತಿದ್ದಾಳೆ.
ಪ್ರಚಾರ ಕಾರ್ಯಕ್ರಮವೊಂದರಲ್ಲಿ, ತಾಪ್ಸಿ ಪನ್ನು ಮತ್ತು ಅನುರಾಗ್ ಕಶ್ಯಪ್ ತಮ್ಮ ‘ದೋಬಾರಾ’ ಚಿತ್ರದ ಪ್ರಚಾರ ಮಾಡುತ್ತಿರುವಾಗ, ಕರಣ್ ಜೋಹರ್ ಪಕ್ಕದ ಕೋಣೆಯಲ್ಲಿ ತಮ್ಮ ಚಾಟ್ ಶೋ ಆಗಿರುವ ‘ಕಾಫೀ ವಿಥ್ ಕರಣ್’ ಪ್ರಚಾರ ನಡೆಸುತ್ತಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು, ಕರಣ್ ಅವರು ನಿಮ್ಮನ್ನು ಕಾರ್ಯಕ್ರಮಕ್ಕೆ ಏಕೆ ಆಹ್ವಾನಿಸಲಿಲ್ಲ? ಎಂದು ಮಾಧ್ಯಮದವರು ತಾಪ್ಸಿಯನ್ನು ಪ್ರಶ್ನಿಸಿದ್ದಾರೆ.
ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಟಿ, ‘ಕಾಫಿ ವಿತ್ ಕರಣ್ ಗೆ ಆಹ್ವಾನಿಸುವಷ್ಟು ನನ್ನ ಲೈಂಗಿಕ ಜೀವನ ಆಸಕ್ತಿದಾಯಕವಾಗಿಲ್ಲ’ ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ.ಸಾಮಾನ್ಯವಾಗಿ ತಾಪ್ಸಿ ತನ್ನ ನೇರ ಹಾಗೂ ದಿಟ್ಟ ಹೇಳಿಕೆಗಳಿಗೆ ಹೆಸರುವಾಸಿಯಗಿದ್ದಾಳೆ. ಇದೇ ವೇಳೆ, ಕಾಫಿ ವಿತ್ ಕರಣ್‌ನ ಹೊಸ ಸೀಸನ್‌ನಲ್ಲಿ ಅನೇಕ ಸೆಲೆಬ್ರಿಟಿಗಳನ್ನು ಈ ಬಗ್ಗೆ ಪ್ರಶ್ನಿಸಲಾಗಿದೆ.
ತಾಪ್ಸಿಯವರ ಹೊಸ ಚಿತ್ರ ‘ದೊಬಾರಾ’ ಕುರಿತು ಹೇಳುವುದಾದರೆ, ಟೈಮ್ ಟ್ರಾವೆಲ್ ಆಧಾರಿತ ಈ ಚಲನಚಿತ್ರವು ಇದುವರೆಗೆ ಲಂಡನ್ ಫಿಲ್ಮ್ ಫೆಸ್ಟಿವಲ್ ಮತ್ತು ಫ್ಯಾಂಟಸಿಯಾ ಫಿಲ್ಮ್ ಫೆಸ್ಟಿವಲ್ 2022 ನಂತಹ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲ್ಪಟ್ಟಿದೆ. ಈ ಚಿತ್ರದಲ್ಲಿ ತಾಪ್ಸಿ ಮತ್ತು ಅನುರಾಗ್ ಮತ್ತೆ ಒಟ್ಟಿಗೆ ನಟಿಸಿದ್ದಾರೆ.
ಈ ಹಿಂದೆ 2018ರಲ್ಲಿ ತೆರೆಕಂಡ ‘ಮನ್‌ಮರ್ಜಿಯಾ’ ಚಿತ್ರದಲ್ಲಿ ಇವರಿಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು.ಇನ್ನೊಂದೆಡೆ ತಾಪ್ಸಿ ವರ್ಕ್ ಫ್ರಂಟ್ ಕುರಿತು ಹೇಳುವುದಾದರೆ, ತಾಪ್ಸಿ ಇತ್ತೀಚಿಗೆ ತರೆಕಂಡ ‘ಶಭಾಶ್ ಮಿಥುನ್’ ನಲ್ಲಿ ಕಾಣಿಸಿಕೊಂಡಿದ್ದಳು. ಈ ಚಿತ್ರದಲ್ಲಿ ತಾಪ್ಸಿ ಮಿಥಾಲಿ ರಾಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಳು. ಚಿತ್ರದಲ್ಲಿ ತಾಪ್ಸಿ ಅಭಿನಯಕ್ಕೆ ಸಾಕಷ್ಟು ಪ್ರಶಂಸೆ ಕೂಡ ವ್ಯಕ್ತವಾಗಿದೆ.
ಆದರೆ, ಬಾಕ್ಸ್ ಆಫಿಸ್ ನಲ್ಲಿ ಚಿತ್ರ ಅಷ್ಟೊಂದು ಹೇಳಿಕೊಳ್ಳುವ ಪ್ರದರ್ಶನ ತೋರಲು ವಿಫಲವಾಗಿದೆ.
ಪ್ರಬಲ ನಟನೆ ಹಾಗೂ ಉತ್ತಮ ಕಥಾಹಂದರ ಹೊಂದಿದ್ದರೂ ಕೂಡ ಚಿತ್ರ ನಿರ್ಮಾಪಕರಿಗೆ ಚಿತ್ರದ ಗಳಿಕೆ ಭಾರಿ ನಿರಾಶೆ ತಂದಿದೆ ಎಂದರೆ ತಪ್ಪಾಗಲಾರದು.
ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕೇವಲ 2.2 ಕೋಟಿ ರೂ.ಬಿಸ್ನೆಸ್ ನಡೆಸಲಷ್ಟೇ ಶಕ್ತವಾಗಿದೆ.