ನನ್ನ ಮಗ ಓಡಿ ಹೋಗಿಲ್ಲ ಅರೆಂಜ್ ಮ್ಯಾರೇಜ್ ಮಾಡ್ತಾ ಇದ್ದೀವಿ” : ಕ್ರೇಜಿ ಸ್ಟಾರ್ ರವಿಚಂದ್ರನ್

ಬೆಂಗಳೂರು : ಅದೇನೋ ಗೊತ್ತಿಲ್ಲ ಚಿತ್ರಬ್ರಹ್ಮ ಸಿನಿಮಾ ಅಂದ್ರೆ ಪ್ರಾಣವೇ ಕೊಡಲು ಸಿದ್ಧರಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಅವ್ರ ಉಸಿರೇ ಸಿನಿಮಾ ಆಗಿದೆ. ಸಿನಿಮಾ ಬಿಟ್ರೆ ಇನ್ನೇನು ಇಲ್ಲ ಅನ್ನೋದೇ ಅವರ ವಾದ.
ಎಷ್ಟೋ ಬಾರಿ ಕ್ರೇಜಿ ಸ್ಟಾರ್ ರವಿಚಂದ್ರನ್ ಹೇಳಿರೋದು ಇಷ್ಟೇ ನಾನು ಸಿನಿಮಾಗೆ ಕೊಟ್ಟ ಸಮಯವನ್ನ ಕುಟುಂಬಕ್ಕೆ ಕೊಟ್ಟಿಲ್ಲ. ಮಕ್ಕಳಿಗಾಗಿ ಟೈಮ್ ಸ್ಪೆಂಡ್ ಮಾಡಿಲ್ಲ ಅನ್ನೋದನ್ನ ಆಗಾಗ ಹೇಳುತ್ತಲೇ ಇರುತ್ತಾರೆ.
ಅದು ನಿಜ ಕೂಡ ಹೌದು.ಸ್ಯಾಂಡಲ್ ವುಡ್ ಆಲದಮರ ಅಂದ್ರೆ ಅದು ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್ ಮಾತ್ರ. ಯುಗಯುಗ ಕಳೆದರೂ ರವಿಚಂದ್ರನ್ ಹೆಸ್ರು ಮಾತ್ರ ಶಾಶ್ವತವಾಗಿರುತ್ತೆ. ಮಗಳು ಗೀತಾಂಜಲಿ ಮದುವೆಯನ್ನ ತುಂಬಾ ಅದ್ದೂರಿಯಾಗಿ ಮಾಡಿದ್ರು ರವಿ ಮಾಮ.
ಇದೀಗ ರವಿಚಂದ್ರನ್ ಮನೆಯಲ್ಲಿ ಮತ್ತೇ ಸಂಭ್ರಮದ ವಾತಾವರಣ ಶುರುವಾಗಿದೆ. ಯಾಕಂದ್ರೆ ಮಗ ಮನೋರಂಜನ್ ರವಿಚಂದ್ರನ್ ಇದೇ ತಿಂಗಳ 21, 22 ರಂದು ಸಪ್ತಪದಿ ತುಳಿಯಲಿದ್ದಾರೆ.ಶುಭಕಾರ್ಯಕ್ಕೆ ರವಿಚಂದ್ರನ್ ಮನೆಯಲ್ಲಿ ಎಲ್ಲಾ ಸಿದ್ಧತೆಗಳು ಭರದಿಂದ ಸಾಗುತ್ತಿದೆ.
ರವಿಚಂದ್ರನ್ ಹಾಗೂ ಸುಮತಿ ದಂಪತಿಯ ಹಿರಿಯ ಪುತ್ರ ಮನೋರಂಜನ್ ಸದ್ಯದಲ್ಲೇ ಅವರು ಹಸೆಮಣೆ ಏರಲಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಹುಡುಗಿಯನ್ನು ಮನೋರಂಜನ್ ವರಿಸಲಿದ್ದಾರೆ.
ಕ್ರೇಜಿಸ್ಟಾರ್ ಸೊಸೆ ಹೆಸ್ರು ಸಂಗೀತ. ಮಗನ ಮದ್ವೆ ಬಗ್ಗೆ Exclusive ಆಗಿ ಜೀ ಕನ್ನಡ ನ್ಯೂಸ್ ಜೊತೆ ಮಾತನಾಡಿದ ರವಿಚಂದ್ರನ್ ಅವ್ರು , ನನ್ನ ಮಗ ಓಡಿ ಹೋಗುತ್ತಿಲ್ಲ,ನಾವು ಅರೇಂಜ್ ಮ್ಯಾರೇಜ್ ಮಾಡ್ತಾ ಇದ್ದೀವಿ. ನನ್ನ ಮಕ್ಕಳು ಯಾರ ಜೊತೆ ಓಡಿ ಹೋಗೋ ಮಕ್ಕಳಲ್ಲ.
ಅಷ್ಟೂ ಧೈರ್ಯ ಕೂಡ ನನ್ನ ಮಕ್ಕಳಿಗೆ ಇಲ್ಲ ಎಂದಿದ್ದಾರೆ. ಒಂದು ವೇಳೆ ಓಡಿ ಹೋದ್ರೂ ವಾಪಾಸ್ ಕರ್ಕೊಂಡು ಬರ್ತೀವಿ ಎಂದು ಹೇಳುವ ಮೂಲಕ ರವಿಚಂದ್ರನ್ ಮಗ ಓಡಿ ಹೋಗಿದ್ದಾನೆ ಅಂತ ಸವದಂತಿ ಹಬ್ಬಿದವರಿಗೆ ಸರಿಯಾಗಿಯೇ ಟಾಂಗ್ ಕೊಟ್ರು ರವಿಚಂದ್ರನ್.
ಹೆಣ್ಣಿನ ಮನೆಯವರೇ ನನ್ನ ಮಗನನ್ನ ಹುಡುಕಿ ಹೆಣ್ಣು ಕೊಡುತ್ತಿದ್ದಾರೆ. ಸಂಗೀತ ನಮ್ಮನೆಗೆ ಬರುತ್ತಿದ್ದಾಳೆ. ನಮ್ಮ ದೂರದ ಸಂಬಂಧಿ ನನ್ನ ಸೊಸೆ.
ತುಂಬಾ ಸಿಂಪಲ್ ಆಗಿ ಮದ್ವೆ ಮಾಡುತ್ತಿದ್ದೀವಿ ಅನ್ನೋದನ್ನ Exclusive ಆಗಿ ಜೀ ಕನ್ನಡ ನ್ಯೂಸ್ ಜೊತೆ ಹಂಚಿಕೊಂಡ್ರು ಕ್ರೇಜಿಸ್ಟಾರ್.
ಏನೇ ಅನ್ನಿ ಸೂಪರ್ ಸ್ಟಾರ್ ಆದ್ರೂ ಕೂಡ ತುಂಬಾ ಸರಳವಾಗಿ ಮುಕ್ತವಾಗಿ, ಅರ್ಥಪೂರ್ಣವಾಗಿ ಮಾತಾಡೋ ಮೂಲಕ ಜನರ ಮನಸ್ಸಿಗೆ ಇನ್ನಷ್ಟು ಹತ್ತಿರವಾಗಿದ್ದರೆ ರವಿಚಂದ್ರನ್.