ನನ್ನ ಗೆಲುವು ಖಚಿತ-ಹೊರಟ್ಟಿ ವಿಶ್ವಾಸ

ಸೋಲಿಲ್ಲದ ಸರದಾರ ಎಂಬ ಪಟ್ಟ ಮುಂದುವರಿಯಲಿದೆ. ಪ್ರತಿಪಕ್ಷಗಳು ಏನೇ ಅಪಪ್ರಚಾರ ಮಾಡಿದರೂ ಅದರ ಪರಿಣಾಮ ಮತದಾರರ ಮೇಲೆ ಬೀರಲ್ಲ.
ನನ್ನ ಗೆಲುವು ನಿಶ್ಚಿತ. ಶೇಕಡಾ ೭೦ರಷ್ಟು ಮತ ಪಡೆದು ಗೆಲ್ಲುತ್ತೇನೆ ಎಂದು ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿರೋಧಿಗಳು ಚುನಾವಣೆ ಸಂದರ್ಭದಲ್ಲಿ ಆರೋಪ ಮಾಡುವುದು ಸಹಜ ಎಂದು ಇಲ್ಲಿನ ದೇಶಪಾಂಡೆ ನಗರದ ರೋಟರಿ ಶಾಲೆಯ ಮತಗಟ್ಟೆಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ೪೨ ವರ್ಷಗಳಿಂದ ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದೇನೆ.
ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಅಧಿಕಾರ ನಡೆಸಿದ್ದೇನೆ. ಈ ಸಲವು ಗೆಲುವು ಖಚಿತ.
ವಿರೋಧಿಗಳು ಮಾಡಿರುವ ಆರೋಪ ಸಾಬೀತಾದರೆ ರಾಜಕೀಯದಿಂದ ದೂರ ಉಳಿಯುತ್ತೇನೆ ಎಂದರು.ನನ್ನ ವಿರುದ್ಧ ಮಾಡಿರುವ ಆರೋಪಗಳನ್ನು ಯಾವುದೇ ಸತ್ಯಾಂಶವಿಲ್ಲ.
ಆರೋಪ ಮಾಡುವುದಕ್ಕೆ ಮಾಡಿದ್ದಾರೆ ಎಂದು ಹೇಳಿದರು.ಶಿಕ್ಷಕರು ಪ್ರಾಮಾಣಿಕರು ಹಣ ಪಡೆದು ಮತ ಚಲಾಯಿಸುವ ಕೀಳು ಮಟ್ಟಕ್ಕೆ ಇಳಿಯಲಾರರು.
ಪ್ರತಿಸ್ಪರ್ಧಿಗಳು ಏನೇ ಆರೋಪ ಮಾಡಿದರೂ ಗೆಲುವು ನಿಶ್ಚಿತ ಎಂದು ಹೇಳಿದರು.