ಅಂತಾರಾಷ್ಟ್ರೀಯ

ನನ್ನನ್ನು ಬೆತ್ತಲೆ ನೋಡಿದ್ರೆ, ಮೈ ಮೇಲಿನ ಮಚ್ಚೆ ಬಗ್ಗೆ ಹೇಳಲಿ: ಎಲಾನ್ ಮಸ್ಕ್​​ರಿಂದ ಇದೆಂಥಾ ಚಾಲೆಂಜ್!

ವಿಶ್ವದ ನಂಬರ್​​ 1 ಶ್ರೀಮಂತ ಬಿಲಿಯನೇರ್ ಎಲಾನ್​​ ಮಸ್ಕ್ (Elon Musk) ಅವರು 2016 ರಲ್ಲಿ ಖಾಸಗಿ ಜೆಟ್‌ನಲ್ಲಿ (Private Jet) ಫ್ಲೈಟ್ ಅಟೆಂಡೆಂಟ್‌ಗೆ (Flight Attendant) ಲೈಂಗಿಕ ಕಿರುಕುಳ (Sexually Harassed) ನೀಡಿದ್ದರು ಎಂಬ ಆರೋಪಿತ ವರದಿಯನ್ನು ಅಲ್ಲಗಳೆದಿದ್ದಾರೆ. ಫ್ಲೈಟ್ ಅಟೆಂಡೆಂಟ್‌ ಗೆಳತಿ ಎನ್ನಲಾದ ವ್ಯಕ್ತಿ ಮಸ್ಕ್​ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಖಾಸಗಿ ವಿಮಾನದಲ್ಲಿ ಬೆತ್ತಲೆಯಾಗುವಂತೆ, ಕಾಮೋದ್ರೇಕ ಮಸಾಜ್​ ಮಾಡುವಂತೆ, ಮತ್ತಷ್ಟು ಸಹಕರಿಸಿದ ಕುದುರೆ ಖರೀಸುವುದಾಗಿ ಆಮಿಷವೊಡ್ಡಿದ್ದಾರೆ. ಈ ವಿಷಯವನ್ನು ಹೊರಗೆ ಹೇಳದಂತೆ ಹಣದ ಆಮಿಷವನ್ನು ಒಡ್ಡಿದ್ದಾರೆ. ಈ ಬಗ್ಗೆ ಗೆಳತಿ ನನ್ನ ಬಳಿ ಅಳಲು ತೋಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನು ಅಲ್ಲಗಳೆದಿರುವ ಮಸ್ಕ್​​​, ಆರೋಪಿತರಿಗೆ ಓಪನ್​ ಚಾಲೆಂಜ್​ ಹಾಕುವೆ. ಆಕೆ ನನ್ನನ್ನು ಬೆತ್ತಲೆ ನೋಡಿದ್ದರೆ ನನ್ನ ದೇಹದ ಮೇಲಿನ, ಸಾರ್ವಜನಿಕವಾಗಿ ತೋರಿಸದ ಯಾವುದಾದರೂ ಮಚ್ಚೆ/ಗುರುತನ್ನು ಹೇಳಲಿ ನೋಡೋಣ. ಆಕೆ ನನ್ನ ದೇಹದ ಮೇಲಿನ ಗುರುತು ಹೇಳಲು ಸಾಧ್ಯವಿಲ್ಲ. ಏಕೆಂದರೆ ನಾನು ಆಕೆಯ ಎದುರು ಬೆತ್ತಲೆಯಾಗಿಲ್ಲ. ಅವರು ಆರೋಪಿಸುತ್ತಿರುವ ಘಟನೆ ನಡೆದೇ ಇಲ್ಲ ಎಂದು ಟ್ವೀಟ್​ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಮಸ್ಕ್‌ನ ಸ್ಪೇಸ್‌ಎಕ್ಸ್ 2018 ರಲ್ಲಿ $250,000 ಪಾವತಿಸಿದ್ದು, ಹೆಸರಿಸದ ಖಾಸಗಿ ಜೆಟ್ ಫ್ಲೈಟ್ ಅಟೆಂಡೆಂಟ್‌ನಿಂದ ಲೈಂಗಿಕ ಕಿರುಕುಳದ ಹಕ್ಕನ್ನು ಇತ್ಯರ್ಥಪಡಿಸಿದ್ದಾರೆ ಎಂದು ಬ್ಯುಸಿನೆಸ್ ಇನ್‌ಸೈಡರ್ ಗುರುವಾರ ವರದಿ ಮಾಡಿದೆ.ಈ ಲೇಖನವು ಅನಾಮಧೇಯ ವ್ಯಕ್ತಿಯೊಬ್ಬರನ್ನು ಉಲ್ಲೇಖಿಸಿ ಅವರು ಫ್ಲೈಟ್ ಅಟೆಂಡೆಂಟ್‌ನ ಸ್ನೇಹಿತೆ ಎಂದು ಹೇಳಿದೆ. ಲೇಖನದ ಪ್ರಕಾರ ಖಾಸಗಿ ವಸಾಹತು ಪ್ರಕ್ರಿಯೆಯ ಭಾಗವಾಗಿ ಸ್ನೇಹಿತ ಹೇಳಿಕೆಯನ್ನು ನೀಡಿದ್ದಾರೆ. ಬ್ಯುಸಿನೆಸ್ ಇನ್‌ಸೈಡರ್ ಸುದ್ದಿಯನ್ನು ಖಚಿತಪಡಿಸಲು ರಾಯಿಟರ್ಸ್‌ಗೆ ಸಾಧ್ಯವಾಗಲಿಲ್ಲ. ಬ್ಯುಸಿನೆಸ್ ಇನ್‌ಸೈಡರ್ ಸ್ಟೋರಿ ಅಥವಾ ಮಸ್ಕ್‌ನ ಟ್ವೀಟ್‌ಗಳ ಕುರಿತು ಕಾಮೆಂಟ್ ಮಾಡಲು ರಾಯಿಟರ್ಸ್ ವಿನಂತಿಗಳಿಗೆ ಮಸ್ಕ್ ಮತ್ತು ಸ್ಪೇಸ್‌ಎಕ್ಸ್ ಪ್ರತಿಕ್ರಿಯಿಸಲಿಲ್ಲ.

Related Articles

Leave a Reply

Your email address will not be published. Required fields are marked *

Back to top button