ನನಗೆ ರಾಜಕೀಯದ ಮೇಲೆ ಆಸಕ್ತಿ ಇಲ್ಲ, ಅರಮನೆಯ ಪರಂಪರೆ ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಇದೆ -ಯದುವೀರ್ ಒಡೆಯರ್

Yaduveer Krishnadatta Chamaraja Wadiyar: ಯದುವೀರ ಒಡೆಯರ್ ಅವರು ದೇಶದಲ್ಲಿ ಬ್ರಿಟೀಷ್ ಆಡಳಿತವಿದ್ದಾಗ ಮೈಸೂರು ಸಂಸ್ಥಾನದ ಕೊನೆಯ ರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರ ಮರಿಮೊಮ್ಮಗ.
ಬೆಂಗಳೂರು: ಮೈಸೂರು ಮಹಾರಾಜರ ಕೊನೆಯ ಕೊಂಡಿಯಂತಿರುವ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ (30) ಅವರು ( Yaduveer Krishnadatta Chamaraja Wadiyar ) ಇಂದು ಅರಮನೆ ರಸ್ತೆಯಲ್ಲಿರುವ ಐತಿಹಾಸಿಕ ಓಣಿ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನಗೆ ರಾಜಕೀಯದ ಮೇಲೆ ಆಸಕ್ತಿ ಇಲ್ಲ. ನನ್ನ ಕರ್ತವ್ಯ ಇರುವುದು ಪರಂಪರೆ ಮುಂದುವರಿಸಿಕೊಂಡು ಹೋಗುವುದು. ಆ ಜವಾಬ್ದಾರಿ ನಿಭಾಯಿಸುತ್ತೇನೆ. ಸಂಪ್ರದಾಯ ರಕ್ಷಣೆ ಜೊತೆಗೆ ಜನರ ಸೇವೆಯನ್ನು ಮಾಡುತ್ತೇನೆ ಎಂದು ಮಹಾರಾಜ ಯದುವೀರ ಒಡೆಯರ್ ಹೇಳಿದ್ದಾರೆ.
ಯದುವೀರ ಒಡೆಯರ್ ಅವರು ದೇಶದಲ್ಲಿ ಬ್ರಿಟೀಷ್ ಆಡಳಿತವಿದ್ದಾಗ ಮೈಸೂರು ಸಂಸ್ಥಾನದ ಕೊನೆಯ ರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ (Jayachamarajendra Wadiyar) ಅವರ ಮರಿಮೊಮ್ಮಗ.