ನನಗೆ ಕ್ಲೀನ್‍ಚಿಟ್ ಸಿಕ್ಕಿದೆ, ಸಂಪುಟ ಸೇರುವ ಭರವಸೆಯಿದೆ : ಈಶ್ವರಪ್ಪ

ನನ್ನ ಮೇಲಿನ ಆರೋಪಕ್ಕೆ ಕ್ಲೀನ್‍ಚಿಟ್ ಸಿಕ್ಕಿದ್ದು, ಸಂಪುಟ ಸೇರ್ಪಡೆ ಭರವಸೆ ಸಿಕ್ಕಿದೆ. ಆದಷ್ಟು ಬೇಗ ಸಂಪುಟಕ್ಕೆ ಸೇರಿಸಿಕೊಳ್ಳಲಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನ ವಾಪಸ್ ನೀಡುವುದಾಗಿ ವರಿಷ್ಟರು ಭರವಸೆ ನೀಡಿದ್ದರು.
ಆದರೆ, ಭರವಸೆ ಈಡೇರದ ಕಾರಣ ಅಸಮಾಧಾನ ಇತ್ತು. ಈಗ ಸಂಪುಟ ಸೇರುವ ಭರವಸೆ ಸಿಕ್ಕಿದೆ. ಹಾಗಾಗಿ ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳುತ್ತೇನೆ ಎಂದರು.ನನ್ನ ಜತೆ ರಮೇಶ್‍ಜಾರಕಿಹೊಳಿ ಅವರನ್ನು ಸಂಪುಟಕ್ಕೆ ಮತ್ತೆ ಸೇರಿಸಿಕೊಳ್ಳುವ ಭರವಸೆ ಮುಖ್ಯಮಂತ್ರಿ ಗಳಿಂದ ಸಿಕ್ಕಿದೆ. ಕರ್ನಾಟಕದಲ್ಲಿ ಬಿಜೆಪಿಗೆ 90ನೆ ದಶಕದಲ್ಲಿ ವೇಗ ಪಡೆಯಿತು.
ಅನಂತ್‍ಕುಮಾರ್, ಬಿ.ಎಸ್.ಯಡಿಯೂರಪ್ಪ ಅವರ ಜತೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಕಟ್ಟಿದವರಲ್ಲಿ ನಾನೂ ಒಬ್ಬನಾಗಿದ್ದೇನೆ ಎಂದರು.ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ, ಸದಾನಂದಗೌಡರು ಅಧ್ಯಕ್ಷರಾದಾಗ ಪಕ್ಷ ವೇಗವಾಗಿ ಬೆಳೆಯಿತು.
ಶೇಷಾದ್ರಿಪುರಂನ ಸಣ್ಣ ಕಚೇರಿಯಿಂದ ಕೆಲಸ ಮಾಡಿಕೊಂಡು ಬಂದು ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇವೆ. ರಾಜ್ಯ ನಾಯಕರನ್ನು ಹೈಕಮಾಂಡ್ ಎಂದಿಗೂ ನಿರ್ಲಕ್ಷ್ಯ ಮಾಡಿಲ್ಲ. ಬಿಎಸ್‍ವೈ ಅವರಿಗೆ ಕೇಂದ್ರದಲ್ಲಿ ಸ್ಥಾನ ಕಲ್ಪಿಸಿದ್ದಾರೆ ಎಂದು ತಿಳಿಸಿದರು.
ನನ್ನ ಮೇಲೆ ನಿರಾಧಾದ ಆರೋಪ ಬಂದಾಗ ಪಕ್ಷಕ್ಕೆ ಮುಜುಗರವಾಗದಂತೆ ಎಚ್ಚರ ವಹಿಸಿ ರಾಜೀನಾಮೆ ನೀಡಿದ್ದೇನೆ. ಈಗ ನನ್ನ ಮೇಲಿನ ಆರೋಪಗಳು ಮುಕ್ತವಾಗಿದ್ದು, ಮತ್ತೆ ಸಂಪುಟ ಸೇರುವ ಭರವಸೆ ಇದೆ ಎಂದರು.ಆದಷ್ಟು ಬೇಗ ನಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಿ ಎಂದು ಇದೇ ವೇಳೆ ಈಶ್ವರಪ್ಪ ಹೇಳಿದರು.