ನಕಲಿ ಸುದ್ದಿ ಹಬ್ಬಿಸಿದ ಯೂಟ್ಯೂಬ್ ಚಾನಲ್ ನಿರ್ಬಂಧ

ಪರಮಾಣು ಬಾಂಬ್ ಆತಂಕ, ಕೋಮು ದ್ವೇಷ ಸೇರಿದಂತೆ ನಕಲಿ ಸುದ್ದಿ ಹರಡಲು ಪ್ರೇರೇಪಿಸಿದ ಆರೋಪದ ಮೇಲೆ ಹಲವು ಯೂಟೂಬ್ ಚಾನಲ್ ನಿರ್ಬಂಧಿಸಲಾಗಿದೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.ಗುಪ್ತಚರ ಸಂಸ್ಥೆಗಳು ಸಾಮಾಜಿಕ ಮಾಧ್ಯಮ ಖಾತೆಗಳು, ವೆಬ್‌ಸೈಟ್‌ಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದು ಅದರ ಆಧಾರರ ಮೇಲೆ ಈ ವಿಷಯ ಬಹಿರಂಗ ಮಾಡಲಾಗಿದೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೇಶದಲ್ಲಿ “ಪರಮಾಣು ಸ್ಫೋಟ” ದಿಂದ ಅಯೋಧ್ಯೆಗೆ ಉತ್ತರ ಕೊರಿಯಾ ಸೈನ್ಯವನ್ನು ಕಳುಹಿಸುವವರೆಗೆ, ಕೇಂದ್ರ ಸರ್ಕಾರ ನಿಷೇಧಿಸಿರುವ ೧೦೨ ಯೂಟ್ಯೂಬ್ ಚಾನೆಲ್‌ಗಳು ಕೆಲಸ ಮಾಡುತ್ತಿದ್ದವು ಎನ್ನುವ ಸಂಗತಿ ಬಯಲು ಮಾಡಲಾಗಿದೆ.ಲಕ್ಷಾಂತರ ಚಂದಾದಾರರನ್ನು ಹೊಂದಿದ್ದ ಯೂಟೂಬ್‌ಗಳು ದೇಶದ ಜನರಿಗೆ ತಪ್ಪು ಮಾಹಿತಿ ತಲುಪಿಸಿದ ಆರೋಪ ಎದುರಿಸುತ್ತಿವೆ.
ಮಾಹಿತಿ ತಂತ್ರಜ್ಞಾನ ನಿಯಮ ೨೦೨೧ ರ ಅಡಿಯಲ್ಲಿ ತುರ್ತು ಅಧಿಕಾರ ಬಳಸಿಕೊಂಡು ಕೇಂದ್ರ ಸರ್ಕಾರ ಕಳೆದ ವರ್ಷ ಡಿಸೆಂಬರ್ ನಲ್ಲಿ ಮೊದಲ ಬಾರಿಗೆ ತಪ್ಪು ಮಾಹಿತಿ ಬಿತ್ತರಿಸುವ ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದನ್ನು ಪ್ರಾರಂಭ ಮಾಡಿತ್ತು.
ಕಳೆದ ವಾರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಪಾಕಿಸ್ತಾನ ಮೂಲದ ಎಂಟು ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಲು ಆದೇಶಿಸಿದಾಗ ಇತ್ತೀಚಿನ ಸುತ್ತಿನ ಕ್ರಮವು ’ಭಾರತದಲ್ಲಿ ಬಕ್ರಾ-ಈದ್ ಆಚರಣೆಗಳ ನಿಷೇಧ’ದಂತಹ ಸುದ್ದಿ ಮಾಡಲು ಯೂಟೂಬ್ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.
ದೇಶದ ಸಾರ್ವಭೌಮತೆ ಮತ್ತು ಸಮಗ್ರತೆ, ರಾಜ್ಯದ ಭದ್ರತೆ, ವಿದೇಶಿ ರಾಜ್ಯಗಳೊಂದಿಗೆ ಸ್ನೇಹ ಸಂಬಂಧಗಳು ಮತ್ತು ದೇಶದಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಹಾನಿ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಯೂಟೂಬ್ ನಿಷೇಧ ಮಾಡಲಾಗಿದೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.