ರಾಜ್ಯ

ನಂದಿಮಾರ್ಗದಲ್ಲಿ ಅವೈಜ್ಞಾನಿಕ ಕಾಮಗಾರಿ; ಚಾಮುಂಡಿಬೆಟ್ಟಕ್ಕೆ ಕಾದಿದೆ ಅಪಾಯ!

ಮೈಸೂರು: ಚಾಮುಂಡಿಬೆಟ್ಟದ ನಂದಿ ಮಾರ್ಗದ ರಸ್ತೆ ದುರಸ್ತಿ ಕಾರ್ಯವೇನೋ ಆರಂಭವಾಗಿದೆ. ಆದರೆ ಇದು ಬೆಟ್ಟದ ಈ ಭಾಗದ ಅವನತಿಗೇ ಕಾರಣವಾಗುವ ಆತಂಕವೂ ಎದುರಾಗಿದೆ. ಜತೆಗೆ ಅಲ್ಲಲ್ಲಿ ಮಣ್ಣಿನ ಸವಕಳಿ, ಸಣ್ಣ ಸಣ್ಣ ಬಂಡೆಗಳು ಉರುಳಿ ಬೀಳುತ್ತಿರುವುದು ಬೆಟ್ಟದ ಭವಿಷ್ಯಕ್ಕೆ ಕಂಟಕ ತರುವ ಮುನ್ಸೂಚನೆಯಾಗಿದೆ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.ಪ್ರ

ಮುಖ ಪ್ರವಾಸಿ ತಾಣವೂ ಆಗಿರುವ ಧಾರ್ಮಿಕ ಕ್ಷೇತ್ರ ಚಾಮುಂಡಿಬೆಟ್ಟದ ನಂದಿ ದೇಗುಲಕ್ಕೆ ತೆರಳುವ ರಸ್ತೆ ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಟಿಪ್ಪರ್‌ ಲಾರಿಗಳ ಸಂಚಾರದ ಜತೆಗೆ ಎಡೆಬಿಡದೇ ಸುರಿದ ಮಳೆಯಿಂದಾಗಿ ಮತ್ತಷ್ಟು ಭಾಗಕ್ಕೆ ಹಾನಿಗೀಡಾಗಿದೆ. ಸದ್ಯ ಕಾಮಗಾರಿ ನಡೆಯುತ್ತಿರುವ ಜಾಗದಿಂದ ಕೆಲ ಮೀಟರ್‌ ಅಂತರದಲ್ಲಿಯೇ ರಸ್ತೆಯಲ್ಲಿ ಮತ್ತಷ್ಟು ಭಾಗ ಬಿರುಕುಬಿಟ್ಟಿದೆ.

ಸದ್ಯ ಮಳೆಗಾಲ ಇನ್ನೂ ಮುಗಿಯದ ಹಿನ್ನೆಲೆಯಲ್ಲಿ ವರುಣದ ಆರ್ಭಟ ಹೆಚ್ಚಾದರೆ ಈ ಭಾಗವೂ ಕುಸಿಯುವ ಆತಂಕ ಎದುರಾಗಿದೆ.ಇದೇ ಮಾರ್ಗದಲ್ಲಿ ರಸ್ತೆ ಬಿರುಕುದುರಸ್ತಿ ಕಾಮಗಾರಿ ನಡೆಯುತ್ತಿರುವ ಪ್ರದೇಶದ ಕೆಲ ಮೀಟರ್‌ಗಳ ಅಂತರದಲ್ಲಿಯೇ ರಸ್ತೆ ಬಿರುಕುಬಿಟ್ಟಿದೆ.

ಮುಂದೆ ಒಂದಷ್ಟು ಮಳೆ ಹೆಚ್ಚಾದರೂ ಬಿರುಕು ಬಿಟ್ಟಿರುವ ಜಾಗದಲ್ಲಿ ನೀರು ಸೇರಿದರೆ ಈ ಭಾಗವೂ ಕುಸಿಯುವುದು ಖಚಿತ. ಇನ್ನು ಉತ್ತನಹಳ್ಳಿ ಕಡೆಯಿಂದ ನಂದಿಗೆ ಬರುವ ರಸ್ತೆ ಕೂಡ ಅಪಾಯದ ಸುಳಿಯಲ್ಲಿ ಸಿಲುಕಿದೆ. ಕಾಮಗಾರಿ ನಡೆಯುತ್ತಿರುವ ಜಾಗದಿಂದ ಮಣ್ಣು ತುಂಬಿದ್ದ ಟಿಪ್ಪರ್‌ ಲಾರಿಗಳ ನಿರಂತರ ಸಂಚಾರದಿಂದ ಕಿರಿದಾದ ಈ ರಸ್ತೆ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ.

ಜತೆಗೆ ಅಲ್ಲಲ್ಲಿ ಸಣ್ಣ ಬಂಡೆಗಳು ಕುಸಿಯುತ್ತಿವೆ. ಇದರ ಜತೆಗೆ ಮಣ್ಣಿನ ಸವಕಳಿ ಸಂಭವಿಸುತ್ತಿದೆ.ಪರಿಸರವಾದಿಗಳ ಆರೋಪಕ್ಕೆ ಬಲನಂದಿಮಾರ್ಗದಲ್ಲಿ ಕುಸಿದಿರುವ ರಸ್ತೆಯ ದುರಸ್ತಿ ಕಾಮಗಾರಿ ಅವೈಜ್ಞಾನಿಕವಾಗಿದೆ. ಮುಂದಿನ ದಿನಗಳಲ್ಲಿ ಕುಸಿಯುವ ಹಂತಕ್ಕೆ ಹೋಗಬಹುದು.

ಪ್ರಸ್ತುತ ಕೈಗೊಂಡಿರುವ ಕಾಮಗಾರಿ ಬೆಟ್ಟದ ಈ ಭಾಗವನ್ನೇ ಉಳಿಸುವುದಿಲ್ಲ ಎಂಬ ಆತಂಕ ಎದುರಾಗಿದೆ. ದೊಡ್ಡ ಟ್ರಕ್‌, ವೈಬ್ರೇಟರ್‌ ಬಳಕೆಯಿಂದಾಗಿ ಈ ಭಾಗಕ್ಕೆ ಇನ್ನಷ್ಟು ಹಾನಿ ಸಂಭವಿಸಿದೆ. ಜತೆಗೆ ಇದೇ ರಸ್ತೆಯಲ್ಲಿ ಸುಮಾರು ಒಂದು ಕಿ.ಮೀ ಇದರಿಂದಾಗಿ ಈಗ ಕುಸಿಯುವ ಹಂತ ತಲುಪಿದೆ.

ಜತೆಗೆ ಕುಸಿದ ಭಾಗದಲ್ಲಿ ರಸ್ತೆ ದುರಸ್ತಿ ವೇಳೆ ರೋಡ್‌ ರೋಲರ್‌ ಬಳಸದೇ ವೈಬ್ರೇಟರ್‌ ಬಳಸಿದ್ದರಿಂದಲೇ ಈ ಸಮಸ್ಯೆ ಉಂಟಾಗಿದೆ ಎಂದು ಕೆಲ ದಿನಗಳ ಹಿಂದೆಯಷ್ಟೇ ನಗರದ ಕೆಲ ಪರಿಸರವಾದಿಗಳು ದೂರಿದ್ದರು. ಇದೀಗ ಅದೇ ಮಾರ್ಗದ ರಸ್ತೆ ಬಿರುಕು ಬಿಟ್ಟಿರುವುದು ಅವೈಜ್ಞಾನಿಕ ಕಾಮಗಾರಿ ಆರೋಪಕ್ಕೆ ಬಲ ನೀಡಿದಂತಾಗಿದೆ.ಬೆಟ್ಟದ ಮೇಲೆ ಹೆಚ್ಚಿದ ಒತ್ತಡಬೆಟ್ಟಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ ಹಿಂದೆಂದಿಗಿಂತಲೂ ಅಧಿಕವಾಗಿದೆ.

ಇದಕ್ಕೆ ಉದಾಹರಣೆ ಈ ಬಾರಿ ಆಷಾಢ. ಜತೆಗೆ ವಾರಾಂತ್ಯ, ಲಾಂಗ್‌ವೀಕೆಂಡ್‌ಗಳಲ್ಲಿ ಹೆಚ್ಚು ಪ್ರವಾಸಿಗರ ವಾಹನಗಳ ದಟ್ಟಣೆಯೂ ಬೆಟ್ಟದ ಮೇಲೆ ಭಾರಿ ಒತ್ತಡ ತರುತ್ತಿದೆ. ಇದರ ಜತೆಗೆ ಇತ್ತೀಚಿನ ವರ್ಷಗಳಲ್ಲಿಅಭಿವೃದ್ಧಿ ಹೆಸರಿನಲ್ಲಿ ಕೈಗೊಂಡ ಕಾಮಗಾರಿಗಳು ಕೂಡ ಬೆಟ್ಟದ ಆಯುಷ್ಯವನ್ನು ಕಡಿಮೆ ಮಾಡುತ್ತಿವೆ.

ಇದಕ್ಕೆ ಕಡಿವಾಣ ಹಾಕಿ ಬೆಟ್ಟವನ್ನು ಅದರಂತೆ ಬಿಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ನಗರದ ಪರಿಸರವಾದಿಗಳು.ಏನಾಗಿತ್ತು?2021ರ ಅ. 21ರಂದು ಭಾರಿ ಮಳೆಯ ಪರಿಣಾಮ ಬೆಟ್ಟದ ನಂದಿ ವಿಗ್ರಹ ಬಳಿ ಭೂ ಕುಸಿತ ಉಂಟಾಗಿತ್ತು. ನಂತರ ನ. 5ರಂದು 50 ಮೀಟರ್‌ನಷ್ಟು ರಸ್ತೆ ಬಿರುಕು ಬಿಟ್ಟು ರಸ್ತೆಯ ಅರ್ಧ ಭಾಗ ಕುಸಿದಿತ್ತು. ನ. 5ರಂದು ಮತ್ತೆ ಕುಸಿತ ಉಂಟಾಗಿತ್ತು.

ತಿಂಗಳೊಳಗೆ 4 ಬಾರಿ ಬೆಟ್ಟದಲ್ಲಿ ಭೂ ಕುಸಿತವಾಗಿ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿತ್ತು. ಅಂದಿನಿಂದಲೂ ಮುಂಜಾಗ್ರತಾ ಕ್ರಮವಾಗಿ ಆ ಮಾರ್ಗಕ್ಕೆ ಬ್ಯಾರಿಕೇಡ್‌ ಹಾಕಿ ಸಂಚಾರ ಬಂದ್‌ ಮಾಡಲಾಗಿದೆ.ಬೆಟ್ಟದ ನಂದಿ ರಸ್ತೆಯಲ್ಲಿ ದುರಸ್ತಿ ಕೈಗೊಂಡಿರುವ ಭಾಗದ ಹಿಂದೆ ಮುಂದೆ ಸುಮಾರು ಎರಡು ಕಿ. ಮೀ.ನಷ್ಟು ರಸ್ತೆಗೆ ಅಪಾಯ ಎದುರಾಗಿದೆ.

ಹೀಗಾಗಿ ಈ ನಿರ್ದಿಷ್ಟ ಭಾಗದಲ್ಲಿ ಭಾರಿ ವಾಹನ ನಿಷೇಧಿಸಬೇಕು. ಕುಸಿತಗೊಂಡಿರುವ ರಸ್ತೆ ಸಮೀಪ ಮತ್ತಷ್ಟು ಕಡೆ ಬಿರುಕು ಕಾಣಿಸಿಕೊಂಡಿದೆ. ಈಗಾಗಲೇ ಎರಡು ಕಡೆ ಭಾರಿ ಪ್ರಮಾಣದ ಭೂ ಕುಸಿತವಾಗಿದೆ.

ಕುಸಿತಗೊಂಡಿರುವ ಜಾಗದಲ್ಲಿ ಶೀಘ್ರ ದುರಸ್ತಿ ಕಾರ್ಯ ಕೈಗೊಳ್ಳದ ಪರಿಣಾಮ ಭಾರಿ ಪ್ರಮಾಣದ ಮಣ್ಣು ಸವೆಯುತ್ತಿದೆ. ಬೆಟ್ಟಕ್ಕೆ ಮತ್ತಷ್ಟು ಘಾಸಿಯಾಗುವ ಮುನ್ನ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿದೆ.ಬಿ.ಎಲ್‌.ಭೈರಪ್ಪ, ಮಾಜಿ ಮೇಯರ್‌

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button