ರಾಜ್ಯ

ಧ್ವಜ ಸಂಭ್ರಮ, ಮನೆ ನೆಲಸಮ: ಚಿಕ್ಕಮಗಳೂರಿನಲ್ಲಿ ಮಳೆ, ಗಾಳಿಗೆ 666 ಮನೆಗಳಿಗೆ ಹಾನಿ

ಚಿಕ್ಕಮಗಳೂರು: ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ನೂರಾರು ಮನೆಗಳು ಕುಸಿದು ಬಿದ್ದಿವೆ. ಸಹಸ್ರ ಜನರ ಬದುಕು ಬೀದಿಗೆ ಬಿದ್ದಿದೆ. ಇದರ ನಡುವೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಸರಕಾರ ಪ್ರತಿ ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸುವ ಅಭಿಯಾನ ಕೈಗೊಂಡಿದ್ದು, ಜಿಲ್ಲೆಯ ನೂರಾರು ಬಡಜನರಲ್ಲಿ ಧ್ವಜವನ್ನು ಹಾರಿಸುವುದಾದರೂ ಎಲ್ಲಿ ಎಂಬ ಚಿಂತೆ ಕಾಡುತ್ತಿದೆ.

ಈ ವರ್ಷ ಸುರಿದ ಮಳೆಗೆ ಜಿಲ್ಲೆಯಲ್ಲಿ 666 ಮನೆಗಳಿಗೆ ಹಾನಿಯಾಗಿದೆ. 70 ಮನೆಗಳು ಸಂಪೂರ್ಣ ನಾಶವಾಗಿದೆ. 214 ಮನೆಗಳಿಗೆ ಭಾಗಶಃ ಹಾನಿಯುಂಟಾಗಿದೆ. 383 ಸೂರುಗಳಿಗೆ ಸಣ್ಣಪುಟ್ಟ ಹಾನಿಯಾಗಿದೆ. ಈ ಹೊತ್ತಿನಲ್ಲಿ ರಾಷ್ಟ್ರಧ್ವಜ ಹಾರಿಸುವ ಜಿಜ್ಞಾಸೆ ಮನೆ ಕಳೆದುಕೊಂಡವರಲ್ಲಿ ಕಾಡುತ್ತಿದೆ.

ಸೋರುವ ಸೂರುಗಳ ಮೇಲೆ ತ್ರಿವರ್ಣಧ್ವಜಎರಡು ತಿಂಗಳಿನಿಂದ ಕಾಫಿನಾಡಿನಾದ್ಯಂತ ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆಗೆ ಇಡೀ ಜಿಲ್ಲೆ ತೋಯ್ದು ತೊಪ್ಪೆಯಾಗಿದೆ. ಮಲೆನಾಡಿನ ಹಲವು ಮನೆಗಳಲ್ಲಿ ನೀರಿನ ಬುಗ್ಗೆಗಳೆದ್ದು ನೋಡ ನೋಡುತ್ತಲೆ ಮನೆಗಳು ಕುಸಿದು ಬೀಳುತ್ತಿವೆ.

ಮನೆ ಮೇಲೆ ಮರ ಬಿದ್ದು ನೂರಾರು ಕುಟುಂಬಗಳು ನಿರಾಶ್ರಿತರಾಗಿದ್ದಾರೆ. ಇನ್ನು ಹಲವರು ಸೋರುವ ಮನೆಗಳಲ್ಲಿಯೇ ಆತಂಕದಿಂದ ಬದುಕುತ್ತಿದ್ದು, ಜಿಲ್ಲಾಡಳಿತ ಸೂಕ್ತ ಕ್ರಮ ತಗೆದುಕೊಳ್ಳುವ ಅಗತ್ಯ ಇದೆ.

25 ಸಾವಿರ ಕುಟುಂಬ ವಸತಿ ರಹಿತಜಿಲ್ಲೆಯಲ್ಲಿ 2020-21ರ ಅಂಕಿ ಅಂಶಗಳ ಪ್ರಕಾರ 25,634 ಮನೆ ಇಲ್ಲದ ಕುಟುಂಬಗಳಿವೆ. ಅಜ್ಜಂಪುರ ತಾಲೂಕಿನಲ್ಲಿ 3414, ಚಿಕ್ಕಮಗಳೂರು 4061, ಕಡೂರು 9528, ಕೊಪ್ಪ 1287, ಮೂಡಿಗೆರೆ 3423, ನರಸಿಂಹರಾಜಪುರ 1160, ಶೃಂಗೇರಿ 288, ತರೀಕೆರೆ ತಾಲೂಕಿನಲ್ಲಿ 2653 ಕುಟುಂಬಗಳು ವಸತಿ ರಹಿತವಾಗಿವೆ. ಅಲ್ಲದೆ, 20 ಸಾವಿರಕ್ಕೂ ಹೆಚ್ಚು ನಿವೇಶನ ರಹಿತ ಕುಟುಂಬಗಳಿದ್ದು, ಅವರೆಲ್ಲ ರಾಷ್ಟ್ರಧ್ವಜ ಹಾರಿಸುವುದೆಲ್ಲಿ ಎಂಬ ಪ್ರಶ್ನೆ ಎದುರಾಗಿದೆ.

ಆತಂಕದ ನಡುವೆ ಬದುಕುಮಲೆನಾಡು ಭಾಗದಲ್ಲಿ ವಿಪರೀತ ಮಳೆಗೆ ಮನೆಯೊಳಗೆ ಹಾಗೂ ಅಕ್ಕಪಕ್ಕದಲ್ಲಿ ನೀರಿನ ಒರತೆಗಳು ಉದ್ಭವವಾಗುತ್ತಿದ್ದು ವಾಸ ಮಾಡುವುದೇ ದುಸ್ತರವಾಗಿದೆ. ಹಳೆಯ ಮಣ್ಣಿನ ಮನೆಗಳಲ್ಲಿ ತೇವಾಂಶ ಹೆಚ್ಚಾದ ಕಾರಣ ಕುಸಿಯುವ ಭೀತಿ ಎದುರಾಗಿದೆ. ಜತೆಗೆ ಮಲೆನಾಡಿನ ಬಹುತೇಕ ಹಳ್ಳಿಗಳಲ್ಲಿ ಮರದ ಬುಡದಲ್ಲಿಯೇ ನೂರಾರು ಮನೆಗಳಿದ್ದು ಮರ ಬೀಳುವ ಆತಂಕದಲ್ಲಿಯೇ ಜನರು ಬದುಕುವಂತಾಗಿದೆ.

ಸ್ಥಳಾಂತರಕ್ಕೆ ಸೂಕ್ತ ಕ್ರಮ ಅಗತ್ಯಜಿಲ್ಲೆಯಲ್ಲಿ ನಿರಂತರ ಮಳೆಗೆ ನಿತ್ಯ ಕನಿಷ್ಠ 20ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗುತ್ತಿವೆ. ಅನಾಹುತಗಳು ಸಂಭವಿಸುವ ಮೊದಲು ಜಿಲ್ಲಾಡಳಿತ ಸೂಕ್ತ ಕ್ರಮ ತಗೆದುಕೊಳ್ಳುವ ಅಗತ್ಯ ಇದೆ.

ದುಸ್ಥಿತಿಯಲ್ಲಿರುವ ಹಾಗೂ ಅಪಾಯದಂಚಿನಲ್ಲಿರುವ ಮನೆಗಳನ್ನು ಗುರುತಿಸಿ ಅವರನ್ನು ತಾತ್ಕಾಲಿಕವಾಗಿ ಸ್ಥಳಾಂತರ ಮಾಡಬೇಕಿದೆ. ಇಲ್ಲವಾದರೆ ಬುಧವಾರ ಕೆ.ತಲಗೂರು ಗ್ರಾಮದಲ್ಲಿ ನಡೆದ ದುರಂತ ಮತ್ತೆ ಹಲವು ಕಡೆ ಮರುಕಳಿಸುವ ಸಾಧ್ಯತೆ ಹೆಚ್ಚಿದೆ.

ನಾಲ್ಕು ವರ್ಷದಲ್ಲಿ ಮಳೆಗೆ ಹಾನಿಯಾದ ಮನೆಗಳು2019-20 – 26432020-21 – 5542021-22 -9102022-23 -705

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button