
ಈ ಹಿಂದೆ ಮೈಸೂರಿನ ಕೆಆರ್‍ಎಸ್ ಡ್ಯಾಮ್ ಸೇರಿದಂತೆ ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿ ಶಿಕ್ಷೆಗೊಳಗಾದ ಪಾಕಿಸ್ತಾನದ ಮೊಹಮ್ಮದ್ ಫಹಾದ್ ಎಂಬ ಕೈದಿ 7 ದಿನಗಳಿಂದ ಉಪವಾಸ ಮಾಡುತ್ತಿದ್ದಾನೆ.ಅಸ್ವಸ್ಥನಾದ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ದಾಖಲಿಸಲಾಗಿದೆ. ಧಾರವಾಡ ಕೇಂದ್ರ ಕಾರಾ ಗೃಹದಲ್ಲಿರುವ ಈತನ ಉಪವಾಸ ಕೊನೆ ಗೊಳಿಸಲು ಜೈಲಿನ ಅಧಿಕಾರಿಗಳು ಏನೆಲ್ಲ ಪ್ರಯತ್ನ ಮಾಡಿದರೂ ವಾಗಿಲ್ಲ. ಹೈಕೋರ್ಟ್ ಹಾಗೂ ಜೈಲು ಅೀಧಿಕ್ಷಕರು ತನ್ನ ಬೇಡಿಕೆಗಳನ್ನು ಈಡೇರಿಸುವವರೆಗೂ ಆಹಾರ ಸೇವಿಸುವು ವೈದ್ಯರು ಗ್ಲೂಕೋಸ್ ಮೂಲಕ ಚಿಕಿತ್ಸೆ ಮುಂದುವರಿಸಿದ್ದಾರೆ. ಯಾವುದೇ ಕಾರಣಕ್ಕೋ ಬಿಡಲ್ಲ ಎಂದು ಫಹಾದ್ ಹಠ ಹಿಡಿದಿದ್ದಾನೆ. ಅೀಧಿಕ್ಷಕರಿಂದ ಮಾಹಿತಿ ಲಭ್ಯವಾಗಿದೆ.
ಬೇಡಿಕೆಗಳೇನು: ತನ್ನ ಮೇಲಿರುವ ಬಾಕಿ ಪ್ರಕರಣದ ತನಿಖೆ ಶೀಘ್ರ ಪೂರ್ಣ ಗೊಳಿಸಬೇಕು. ತನ್ನ ಸಹಚರರು ಇರುವ ಬೆಂಗಳೂರು ಇಲ್ಲವೇ ಕಾಶ್ಮೀರ ಜೈಲಿಗೆ ವರ್ಗಾವಣೆ ಮಾಡ ಬೇಕು. ಧಾರವಾಡ ಜೈಲಿನಲ್ಲಿಯೇ ಉಳಿದ ಕೈದಿಗಳೊಂದಿಗೆ ಬೇರೆಯಲು ಮತ್ತು ಓಡಾಡಿ ಕೊಂಡಿರಲು ಬಿಡಬೇಕು ಎಂಬುದು ಆತನ ಬೇಡಿಕೆಗಳಾಗಿವೆ.
ಅಸ್ವಸ್ಥನಾಗಿರುವ ಫಹಾದ್ ಆರೋಗ್ಯವನ್ನು ಜೈಲು ವೈದ್ಯಾಧಿಕಾರಿಗಳು ಪರಿಶೀಲಿಸಿದ್ದಾರೆ. ಅವರ ಸಲಹೆ ಮೇರೆಗೆ ಕಿಮ್ಸ್‍ಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಆತನ ಬೇಡಿಕೆಗಳ ಕುರಿತು ಸಂಬಂಧ ಪಟ್ಟ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಆತನನ್ನು ಪೊಲೀಸರು 26, ಅಕ್ಟೋಬರ್ 2006 ರಲ್ಲಿ ಬಂಧಿಸಿದ್ದರು. ಕಳೆದ ವರ್ಷ ಮೈಸೂರಿನಿಂದ ಧಾರವಾಡದ ಕೇಂದ್ರ ಕಾರಾಗೃಹಕ್ಕೆ ಫಹಾದ್ ನನ್ನು ವರ್ಗಾವಣೆ ಮಾಡಲಾಗಿದೆ.
ಆದರೆ, ಇಲ್ಲಿಯೂ ಅನ್ಯ ಕೈದಿಗಳು ಹಾಗೂ ಅಧಿಕಾರಿಗಳ ಜತೆ ಕಿರಿಕ್ ಮಾಡುವ ತನ್ನ ಹಳೆಯ ಚಾಳಿ ಮುಂದುವರಿಸಿದ ಕಾರಣಕ್ಕಾಗಿ ಆತನನ್ನು ಪ್ರತ್ಯೇಕ ಸೆಲ್‍ನಲ್ಲಿ ಇಡಲಾಗಿದೆ. ಕೇರಳದ ಕಲ್ಲಿಕೋಟೆ ಮೆಡಿಕಲ್ ಕಾಲೇಜಿನಲ್ಲಿ ನಡೆದ ಭಯೋತ್ಪಾದಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಗೂ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಭಯೋತ್ಪಾದಕ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನಿಗೆ ಒಟ್ಟು 14 ವರ್ಷ ಶಿಕ್ಷೆಗೆ ವಿಧಿಸಲಾಗಿದೆ. ಬಾಂಬ್ ಸೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿವಾಳ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿದೆ. ಅದರ ವಿಚಾರಣೆ ನಡೆಯುತ್ತಿದೆ.