ರಾಜ್ಯ

ದೋಷಪೂರಿತ ನಂಬರ್ ಪ್ಲೇಟ್ ಬದಲಿಸಿಕೊಳ್ಳದಿದ್ದರೆ ವಾಹನ ಸೀಜ್

ದೋಷಪೂರಿತ ನಂಬರ್ ಪ್ಲೇಟ್‍ಗಳನ್ನು ಕೂಡಲೇ ಬದಲಿಸಿಕೊಳ್ಳಿ. ಇಲ್ಲದಿದ್ದರೆ ಪೊಲೀಸರಿಂದ ದಂಡ ಜೊತೆಗೆ ನಿಮ್ಮ ವಾಹನವು ಕೂಡ ಜಪ್ತಿಯಾಗಬಹುದು ಹುಷಾರ್.ಬೆಂಗಳೂರು ನಗರ ಪೊಲೀಸರು ವಿವಿಧೆಡೆ ನಂಬರ್ ಪ್ಲೇಟ್‍ಗಳಿಲ್ಲದೆ ಓಡಾಡುವ ವಾಹನಗಳನ್ನು ಬಳಸಿಕೊಂಡು ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿರುವುದು ಗೊತ್ತಾಗಿದೆ.

ಇದನ್ನು ತಡೆಯುವ ನಿಟ್ಟಿನಲ್ಲಿ ಈಗಾಗಲೇ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಕೆಲವರು ಶೋಕಿಗಾಗಿ ನಿಯಮ ಮೀರಿ ನಂಬರ್ ಪ್ಲೇಟ್‍ಗಳನ್ನು ಅಳವಡಿಸಿಕೊಂಡಿದ್ದಾರೆ. ಇದರಿಂದ ವಾಹನದ ನೋಂದಣಿ ಸಂಖ್ಯೆ ಸರಿಯಾಗಿ ಕಾಣುವುದಿಲ್ಲ.

ಇನ್ನೊಂದೆಡೆ ನೋಂದಣಿ ಸಂಖ್ಯೆಯೇ ಸರಿಯಾಗಿ ಕಾಣದಂತಹ ಮತ್ತು ನಂಬರ್ ಪ್ಲೇಟ್‍ಗಳೇ ಇಲ್ಲದಂತಹ ವಾಹನಗಳು ನಗರದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ.ಇದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಾದ ಅಗತ್ಯವಿದ್ದು, ಕೆಲವರು ಇದನ್ನೇ ದುರುಪಯೋಗಪಡಿಸಿಕೊಂಡು ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.

ಇದಕ್ಕೆ ಕಡಿವಾಣ ಹಾಕಲು ವಿಶೇಷ ತಪಾಸಣಾ ಕಾರ್ಯವನ್ನು ಸಹ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.ದೋಷಪೂರಿತ ನಂಬರ್ ಪ್ಲೇಟ್ ಇದ್ದರೆ ಸ್ಥಳದಲ್ಲೇ ನಿಮ್ಮ ವಾಹನವನ್ನು ವಶಪಡಿಸಿಕೊಳ್ಳಲಾಗುವುದು.

ನೀವು ನ್ಯಾಯಾಲಯಕ್ಕೆ ಹೋಗಿ ದಂಡ ಕಟ್ಟಬೇಕಾಗುತ್ತದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button