ದೇಶದಲ್ಲಿ ೫ ವಿವಿ ಆರ್ ಎಸ್ ಎಸ್ ಪ್ರಾರಂಭ

ದೇಶದ ಐದು ಸ್ಥಳಗಳಲ್ಲಿ ವಿಶ್ವ ವಿದ್ಯಾಲಯಗಳನ್ನು ಪ್ರಾರಂಭಿಸಲು ಆರ್ ಎಸ್ ಎಸ್ ಮುಂದಾಗಿದೆ.ಕೇಸರಿ ಸಂಸ್ಥೆ, ಈಗಾಗಲೇ ಪ್ರಾಥಮಿಕ ಮತ್ತು ಉನ್ನತ ಮಾಧ್ಯಮಿಕ ಶಿಕ್ಷಣದಲ್ಲಿ ತೊಡಗಿಸಿಕೊಂಡಿದ್ದು ಈಗ ತಮ್ಮ ಸಂಸ್ಥೆ ಉಚ್ಛ್ ಶಿಕ್ಷಾ ಸಂಸ್ಥಾನದ ಮೂಲಕ ಉನ್ನತ ಶಿಕ್ಷಣ ಸಂಸ್ಥೆಗಳತ್ತ ಗಮನ ಹರಿಸಲು ನಿರ್ಧರಿಸಿದೆ.
ಹರಿದ್ವಾರ ಮೂಲದ ಸರಸ್ವತಿ ವಿದ್ಯಾ ಮಂದಿರ ಇಂಟರ್ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ವಿದ್ಯಾಭಾರತಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಯತೀಂದ್ರ ಶರ್ಮಾ ಮಾತನಾಡಿ ಶಿಕ್ಷಣದಲ್ಲಿ ಸಕಾರಾತ್ಮಕ ಬದಲಾವಣೆ ತರುವುದು ಇದರ ಉದ್ದೇಶ” ಎಂದಿದ್ದಾರೆ.
ಬೆಂಗಳೂರಿನಲ್ಲಿ ಚಾಣಕ್ಯ ವಿವಿ:ಉಚ್ಛ್ ಶಿಕ್ಷಾ ಸಂಸ್ಥಾನ ಈಗಾಗಲೇ ಬೆಂಗಳೂರಿನಲ್ಲಿ ಚಾಣಕ್ಯ ವಿಶ್ವವಿದ್ಯಾಲಯವನ್ನು ಕಳೆದ ವರ್ಷ ೧೨೫ ಎಕರೆ ವಿಶಾಲವಾದ ಕ್ಯಾಂಪಸ್‌ನಲ್ಲಿ ತೆರೆದಿದೆ, ಆದರೆ ಇನ್ನೊಂದು ಗುವಾಹಟಿಯಲ್ಲಿದೆ., “ಆರ್‌ಎಸ್‌ಎಸ್ ನಡೆಸುವ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಜಾತಿ ಲೆಕ್ಕಿಸದೆ ಎಲ್ಲಾ ವಿದ್ಯಾರ್ಥಿಗಳಿಗೆ ಮುಕ್ತವಾಗಿವೆ ಬೆಂಗಳೂರು ವಿಶ್ವವಿದ್ಯಾಲಯದ ಮೊದಲ ಬ್ಯಾಚ್‌ನಲ್ಲಿ ಒಟ್ಟು ೨೦೦ ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಎಂದು ಹೇಳಿದ್ದಾರೆ.
ವಿದ್ಯಾಭಾರತಿ ಶಾಲೆಗಳ ಐವತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ನಿರ್ಧರಿಸಿದೆ.ಆರ್‌ಎಸ್‌ಎಸ್ ನಡೆಸುತ್ತಿರುವ ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ, ೨೯,೦೦೦ ಆರ್‌ಎಸ್‌ಎಸ್ ಶಾಲೆಗಳಲ್ಲಿ ೩೧ ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದಾರೆ ಎಂದಿದ್ದಾರೆ.ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳ ವಿದ್ಯಾರ್ಥಿಗಳಿಗೂ ವಿದ್ಯಾಭಾರತಿ ಅವಕಾಶ ಮಾಡಿಕೊಟ್ಟಿದೆ.
ಉತ್ತರಾಖಂಡದ ಪ್ರತಿ ಜಿಲ್ಲೆಯಲ್ಲಿ ಒಂದು ಮಾದರಿ ಶಾಲೆಯನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.