ಬೆಂಗಳೂರು

ದೇವಸ್ಥಾನದಲ್ಲಿ ಭಜನೆಗೆ ಯತ್ನ, ಶ್ರೀರಾಮ ಸೇನೆ ಕಾರ್ಯಕರ್ತರ ಬಂಧನ, ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕ್ರಮ, ಆರಗ ಜ್ಞಾನೇಂದ್ರ ಎಚ್ಚರಿಕೆ

ಬೆಂಗಳೂರು: ನಗರದ ಅಲ್ಪಸಂಖ್ಯಾತರು ಹೆಚ್ಚಿರುವ ಪ್ರದೇಶವಾದ ನೀಲಸಂದ್ರ ದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಮುಂಜಾನೆ ಭಜನೆಗೆ ಮುಂದಾದಾಗ ಆಶೋಕನಗರ ಪೋಲಿಸ್ ಠಾಣೆ ಪೋಲಿಸರು ವಶಕ್ಕೆ ಪಡೆದಿದ್ದಾರೆ. ರಾಜ್ಯಾದ್ಯಂತ ಮಸೀದಿಯಲ್ಲಿ ಲೌಡ್ ಸ್ಪೀಕರ್ ನಲ್ಲಿ ಆಜಾನ್ ಮೊಳಗಿಸುವ ವಿರುದ್ಧ ನೀಡಿದ ಗಡುವಿನ ಅವಧಿ ಮುಗಿದ ಹಿನ್ನಲೆ ದೇವಸ್ಥಾನದಲ್ಲಿ ಭಜನೆ, ಸುಪ್ರಭಾತ, ಹನುಮಾನ್ ಚಾಲಿಸ ಪಠಿಸಲು ಶ್ರೀರಾಮಸೇನೆಯ ಕಾರ್ಯಕರ್ತರು ಮುಂದಾಗಿದಾರೆ. ಹಲವಾರು ಕಡೆ ಗಂಟೆ ನಾದ, ಪೂಜೆ, ಭಜನೆ ಯಶ್ವಸಿಯಾದರು ಕೆಲವು ಕಡೆ ಮುಂಜಾಗ್ರತೆ ಕ್ರಮವಾಗಿ ಅಹಿತಕರ ಘಟನೆ ನಡೆಯಬಾರದೆಂದು ಪೋಲಿಸರು ಶ್ರೀರಾಮಸೇನೆ ಕಾರ್ಯಕರ್ತರನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.

ಶ್ರೀರಾಮ ಸೇನೆಯ ಸಂಚಾಲಕ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಸೋಮವಾರದಿಂದ 1000 ದೇವಸ್ಥಾನಗಳಲ್ಲಿ ಭಜನೆ ಹಾಗೂ ಸುಪ್ರಭಾತ ಮೊಳಗಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ದೇವಸ್ಥಾನಗಳಲ್ಲೂ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.ಮೈಕ್ ಬಳಕೆ ವಿಚಾರವಾಗಿ ಸುಪ್ರೀಂ ಕೋರ್ಟ್ ಆದೇಶ ಇದ್ದರೂ ಆಝಾನ್ ಮೊಳಗಿಸಲಾಗುತ್ತದೆ. ಇದು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದೆ. ಈ ನಿಟ್ಟಿನಲ್ಲಿ ಆಝಾನ್‌ ಮೊಳಗಿಸುವುದನ್ನು ನಿಲ್ಲಿಸಬೇಕು ಎಂಬುವುದು ಹಿಂದೂ ಪರ ಸಂಘಟನೆಗಳ ಬೇಡಿಕೆಯಾಗಿದೆ.ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕಾರಣಕ್ಕಾಗಿ ಆಝಾನ್‌ಗೆ ವಿರುದ್ಧವಾಗಿ ಭಜನೆ ಹಾಗೂ ಸುಪ್ರಭಾತ ಮೊಳಗಿಸಲಾಗುತ್ತಿದೆ ಎಂಬುವುದು ಅಭಿಯಾನದ ಆಯೋಜಕರ ಸಮರ್ಥನೆಯಾಗಿದೆ.

ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ.ಆಝಾನ್ ವಿರೋಧಿಸಿ ಭಜನೆ ಹಾಗೂ ಸುಪ್ರಭಾತ ಅಭಿಯಾನವನ್ನು ಶ್ರೀರಾಮ ಸೇನೆ ಹಾಗೂ ಹಿಂದೂ ಪರ ಸಂಘಟನೆಗಳು ಆರಂಭಿಸಿದ್ದು, ಈ ಹಿನ್ನೆಲೆಯಲ್ಲಿ ಕಾನೂನನ್ನು ಕೈಗೆ ತೆಗೆದುಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಈ ಬಗ್ಗೆ ಇಂದು ಹೇಳಿಕೆ ನೀಡಿರುವ ಅವರು “ಶಬ್ದ ಮಾಲಿನ್ಯ ಉಂಟು ಮಾಡುವ ಯಾವುದೇ ಚಟುವಟಿಕೆಗಳನ್ನು ನಿಯಂತ್ರಿಸಲು ನ್ಯಾಯಾಲಯಗಳ ಆದೇಶದಂತೆ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳ ಲಾಗುವುದು. ನ್ಯಾಯಾಲಯದ ಆದೇಶವನ್ನು, ಎಲ್ಲರೂ ಗೌರವಿಸಬೇಕು” ಎಂದಿದ್ದಾರೆ

Related Articles

Leave a Reply

Your email address will not be published. Required fields are marked *

Back to top button