ರಾಜ್ಯ
ದೇವರೇ ನನಗೆ ಹುಡುಗಿ ಕರುಣಿಸು: ಚಾಮರಾಜೇಶ್ವರನ ಹುಂಡಿಗೆ ಪತ್ರ

ಚಾಮರಾಜನಗರದ ಶ್ರೀ ಚಾಮರಾಜೇಶ್ವರ ದೇವಾಲಯದ ಹುಂಡಿಯಲ್ಲಿ ದೇವರೇ ನನಗೆ ಹುಡುಗಿಯನ್ನು ಕರುಣಿಸು ಎಂದು ಬೇಡಿಕೊಂಡ ಪತ್ರ ಪತ್ತೆಯಾಗಿದೆ.
ಹುಂಡಿ ಎಣಿಸುವಾಗಹಣದ ಜೊತೆ ಮತ್ತೊಂದು ಪತ್ರವೂ ಸಿಕ್ಕಿದ್ದು, ಇದರಲ್ಲಿ ದೇವರ ರಾಜ್ಯ ಸಮೀಪಿಸಿದೆ ಎಂದು ಬರೆಯಲಾಗಿದೆ.
ರಾಜೇಂದ್ರ ಉಪ್ಪಾರ ಬೀದಿ ಎಂಬವರ ಪತ್ರದಲ್ಲಿ ದೇವರೇ ನನಗೆ ಹುಡುಗಿಯನ್ನು ಕರುಣಿಸು ಎಂದು ಬರೆಯಲಾಗಿದೆ.
ದೇವರ ರಾಜ್ಯವು ಸಮೀಪಿಸಿದೆ ಎಂಬ ಒಕ್ಕಣೆಯುಳ್ಳ ಮತ್ತೊಂದು ಪತ್ರದಲ್ಲಿ ಮನುಷ್ಯ ದೇವರಿಗೆ ಅವಿಧೇಯನಾಗಿ ನಡೆದುಕೊಂಡು ದೇವರ ಪ್ರೀತಿ ಕಳೆದುಕೊಂಡ ಎಂದೂ ಬರೆಯಲಾಗಿದೆ.
ಚಾಮರಾಜೇಶ್ವರ ದೇವಾಲಯದ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾದ್ದು, 7,61,641 ರೂಪಾಯಿ ಕಾಣಿಕೆ ಸಂಗ್ರಹವಾಗಿದೆ.