
ರೋಹಿಣಿ ನ್ಯಾಯಾಲಯದ ಎರಡನೇ ಮಹಡಿಯಲ್ಲಿರುವ ನ್ಯಾಯಾಧೀಶರ ಕೊಠಡಿಯ ಬಳಿ ಬುಧವಾರ ಬೆಂಕಿ ಕಾಣಿಸಿಕೊಂಡು ಆತಂಕ ಮೂಡಿಸಿದೆ. ಆದರೆ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಎರಡನೇ ಮಹಡಿಯಲ್ಲಿರುವ ರೋಹಿಣಿ ನ್ಯಾಯಾಲಯದ ಕೊಠಡಿ ಸಂಖ್ಯೆ 210 ರಲ್ಲಿ ಬೆಳಿಗ್ಗೆ 11.10 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಐದು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ ಎಂದು ದೆಹಲಿ ಅಗ್ನಿಶಾಮಕ ಸೇವೆಯ ನಿರ್ದೇಶಕ ಅತುಲ್ ಗಾರ್ಗ್ ಹೇಳಿದ್ದಾರೆ.
ನ್ಯಾಯಾೀಧಿಶರ ಚೇಂಬರ್ ಬಳಿಯ ಕೊಠಡಿಯಲ್ಲಿನ ಹವಾನಿಯಂತ್ರಣದಲ್ಲಿ ಬೆಂಕಿ ಕಾಣಿಸಿಕೊಂಡಿತು ಎಂದು ಅವರು ಹೇಳಿದ್ದಾರೆ. ಅರ್ಜಿದಾರರು, ವಕೀಲರು ಮತ್ತು ನ್ಯಾಯಾೀಧಿಶರು ಸೇರಿದಂತೆ ನ್ಯಾಯಾಲಯಗಳಿಗೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ನ್ಯಾಯಾಲಯದ ಆವರಣದಲ್ಲಿ ಬೆಂಕಿಯ ಸಾಮಾನ್ಯ ಘಟನೆಗಳು ಭಯಾನಕ ಸಂಗತಿಯಾಗಿದೆ ಎಂದು ಉತ್ತರ ದೆಹಲಿ ವಕೀಲರ ಸಂಘ ಹೇಳಿಕೆಯಲ್ಲಿ ತಿಳಿಸಿದೆ.
ಪ್ರತಿಯೊಂದು ಜಿಲ್ಲಾ ನ್ಯಾಯಾಲಯವು ತನ್ನದೇ ಆದ ನಿರ್ವಹಣಾ ಸಮಿತಿಯನ್ನು ಹೊಂದಿದ್ದು, ಎಲ್ಲಾ ಉಪಕರಣಗಳು ಕಾರ್ಯ ನಿರ್ವಹಿಸುತ್ತಿವೆಯೇ ಎಂದು ಪರಿಶೀಲಿಸುವ ಜವಾಬ್ದಾರಿ ಅಗ್ನಿಶಾಮಕ ಇಲಾಖೆಗೆ ಇದೆ. ನ್ಯಾಯಾಲಯದ ಆವರಣದಲ್ಲಿ ಆಗಾಗ್ಗೆ ಬೆಂಕಿಯ ಘಟನೆಗಳು ನ್ಯಾಯಾಲಯಗಳಲ್ಲಿ ಅಗ್ನಿ ಸುರಕ್ಷತೆಯ ಬಗ್ಗೆ ವಿಶೇಷ ಗಮನ ಹರಿಸುವ ಅವಶ್ಯಕತೆಯಿದೆ. ಆದರೆ ಅದನ್ನು ಮಾಡಲಾಗಿಲ್ಲ ಎಂದು ವಕೀಲರ ಸಂಘದ ಕಾರ್ಯದರ್ಶಿ ವಕೀಲ ವಿನೀತ್ ಜಿಂದಾಲ್ ಹೇಳಿದ್ದಾರೆ.