
ಭಾರೀ ಕುತೂಹಲ ಮೂಡಿಸಿದ ದೆಹಲಿ ಎಂಸಿಡಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಇದೇ ಮೊದಲ ಬಾರಿಗೆ ಅಧಿಕಾರಕ್ಕೇರುವ ಮೂಲಕ 15 ವರ್ಷಗಳ ಬಿಜೆಪಿಗೆ ಅಧಿಪತ್ಯಕ್ಕೆ ತೆರೆ ಎಳೆದಿದೆ.
ಭಾರೀ ಕುತೂಹಲ ಮೂಡಿಸಿದ ಎಂಸಿಡಿ (ಮುನ್ಸಿಪಾಲ್ ಕಾರ್ಪೊರೇಷನ್ ಆಫ್) 250 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಹುಮತ ಪಡೆಯಲು 126 ಸ್ಥಾನಗಳ ಅಗತ್ಯವಿತ್ತು.ಆಮ್ ಆದ್ಮಿ ಪಕ್ಷ 134 ಸ್ಥಾನಗಳಲ್ಲಿ ಜಯಭೇರಿ ಬಾರಿಸಿ ಇದೇ ಮೊದಲ ಬಾರಿ ಅಧಿಕಾರಕ್ಕೇರಿದೆ.
ಬಿಜೆಪಿ 104 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಬಾರಿ ಶೂನ್ಯ ಸಾಧನೆ ಮಾಡಿದ್ದ ಕಾಂಗ್ರೆಸ್ ಈ ಬಾರಿ 9 ಸ್ಥಾನ ಗೆದ್ದು ಭರವಸೆ ಮೂಡಿಸಿದೆ. 3 ಸ್ಥಾನಗಳು ಇತರರ ಪಾಲಾಗಿದೆ.