ದೆಹಲಿಯಲ್ಲಿ ಜಾರಿಗೆ ಬಂತು ಹೊಸ ರೂಲ್ಸ್

ಹೊಸ ವರ್ಷದ ಆರಂಭದಲ್ಲಿ ಕಾರೊಂದು ಮಹಿಳೆಗೆ ಡಿಕ್ಕಿ ಹೊಡೆದು ಆಕೆಯ ದೇಹವನ್ನು 13 ಕಿ.ಮೀ ವರೆಗೆ ಎಳೆದೊಯ್ದ ಘಟನೆ ಹಿನ್ನಲೆಯಲ್ಲಿ ರಾಷ್ಟ್ರ ರಾಜಧಾನಿ ಪೊಲೀಸರಿಗೆ ಹೊಸ ರೂಲ್ಸ್ ಜಾರಿಯಾಗಿದೆ.ರಾತ್ರಿ ಕರ್ತವ್ಯ ನಿರ್ವಹಿಸುವ ಪೊಲೀಸರು ಮತ್ತು ಇನ್ಸ್‍ಪೆಕ್ಟರ್ ಮಟ್ಟದ ಅಧಿಕಾರಿಗಳು ಇನ್ನು ಮುಂದೆ ತಾವು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳಗಳನ್ನು ಹಂಚಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ರಾತ್ರಿ ಕರ್ತವ್ಯಕ್ಕೆ ಹೊರಗೆ ತೆರಳುವ ಎಸ್‍ಎಚ್‍ಒಗಳು, ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳೂ, ಇನ್ವೇಸ್ಟಿಗೇಷನ್ ಆಫಿಸರ್‍ಗಳು ತಾವು ತೆರಳುವ ಸ್ಥಳಗಳ ಬಗ್ಗೆ ಡಿಸಿಪಿಗಳಿಗೆ ಮಾಹಿತಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.ಮಧ್ಯರಾತ್ರಿ 12 ರಿಂದ ಬೆಳಗಿನ ಜಾವ 4 ಗಂಟೆಯವರೆಗೆ ಅವರು ಕರ್ತವ್ಯ ನಿರ್ವಹಿಸಬೇಕು ಹಿರಿಯ ಅಧಿಕಾರಿಗಳ ಅನುಮತಿ ಇಲ್ಲದೆ ಅವರು ಕರ್ತವ್ಯ ನಿರ್ವಹಿಸುವ ಸ್ಥಳದಿಂದ ತೆರಳಬಾರದು ತಾವು ಕರ್ತವ್ಯ ನಿರ್ವಹಿಸುವ ಸ್ಥಳದ ಲೈವ್ ಲೊಕೇಷನ್ ಆನ್ ಮಾಡಿಕೊಂಡಿರಬೇಕು ಎಂದು ಸೂಚಿಸಲಾಗಿದೆ.
ಹೊಸ ವರ್ಷದಂದು ಬೆಳಗಿನ ಜಾವ 2 ಗಂಟೆಯ ನಂತರ ಅಂಜಲಿ ಸಿಂಗ್ ತನ್ನ ಸ್ನೇಹಿತೆಯೊಂದಿಗೆ ತನ್ನ ಸ್ಕೂಟರ್‍ನಲ್ಲಿ ಮನೆಗೆ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ.
ಆಕೆಯ ಕಾಲಿಗೆ ಚಕ್ರ ಸಿಕ್ಕಿ ಕಾರಿನಿಂದ ಎಳೆದುಕೊಂಡು ಹೋಗಿತ್ತು. ಈ ಘಟನೆಯ ನಂತರ ಎಚ್ಚೆತ್ತಿರುವ ದೆಹಲಿ ಪೊಲೀಸರು ಇಂತಹ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.