ದುಷ್ಕರ್ಮಿಗಳ ಗುಂಡಿನದಾಳಿ ಓರ್ವ ಸಾವು, ಮೂವರಿಗೆ ಗಾಯ

ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡುಹಾರಿಸಿ ಅಟ್ಟಹಾಸ ಮೆರೆದಿದ್ದು, ಇಲ್ಲಿನ ಕಂಡಿವಲಿಯ ಬಳಿ ನಡೆದ ಈ ದಾಳಿಯಲ್ಲಿ ಯುವಕನೊಬ್ಬ ಸಾವನ್ನಪ್ಪಿ ಮೂವರು ಗಾಯಗೊಂಡಿದ್ದಾರೆಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.
ಕಂಡಿವಲಿಯಲ್ಲಿ ನಿನ್ನೆ ತಡರಾತ್ರಿ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಏಕಾಏಕಿ ನಾಲ್ವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಉಳಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಶತಾಬ್ದಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಂಡುಹಾರಿಸಿದ ಆರೋಪಿಗಳು ಮತ್ತು ಘಟನೆಯಲ್ಲಿ ಬಲಿಯಾದ ಯುವಕ, ಗಾಯಗೊಂಡವರು ಪರಸ್ಪರ ಪರಿಚಯಸ್ಥರು ಎಂದು ಕ್ಷೇತ್ರದ ಮಾಜಿ ಕಾರ್ಪೊರೇಟರ್ ಕಮಲೇಶ್ ಯಾದವ್ ಹೇಳಿದ್ದಾರೆ.ನಾಲ್ಕು ಸುತ್ತಿನ ಗುಂಡಿನ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಅಂಕಿತ್ ಯಾದವ್ ಎಂದು ಗುರುತಿಸಲಾಗಿದೆ.
ಉಳಿದ ಮೂವರು ಗಾಯಾಳುಗಳ ಹೆಸರು ಅಭಿನಾಸ್ ದಾಭೋಲ್ಕರ್, ಮನೀಶ್ ಗುಪ್ತಾ ಮತ್ತು ಪ್ರಕಾಶ್ ನಾರಾಯಣ್ ಎಂದು ತಿಳಿದುಬಂದಿದೆ.ಹಳೆ ದ್ವೇಷವೇ ಘಟನೆಗೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ಮುಂಬೈ ಪೊಲೀಸ್ ಡಿಸಿಪಿ ವಿಶಾಲ್ ಠಾಕೂರ್ ಮಾತನಾಡಿ, ಬೈಕ್‌ನಲ್ಲಿ ಬಂದ ಹುಡುಗರು ಗುಂಡುಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಆರೋಪಿಗಳು ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.ಆದರೆ, ಘಟನೆಯ ಹಿಂದಿನ ಕಾರಣ ಇನ್ನೂ ಬಹಿರಂಗವಾಗಿಲ್ಲ. ಮಧ್ಯರಾತ್ರಿ ೧೨ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದರು.