ಆರೋಗ್ಯ

ದಿನಕ್ಕೊಂದು ಬಾರಿಯಾದರೂ ರಾಗಿಮುದ್ದೆ ತಿಂದ್ರೆ, ಆರೋಗ್ಯಕ್ಕೆ ಲಾಭವೋ ಲಾಭ!

ನಮ್ಮ ಕರ್ನಾಟಕದಲ್ಲಿ ಒಂದೊಂದು ಕಡೆ, ಒಂದೊಂದು ಬಗೆಯ ತಿಂಡಿ ತಿನಿಸುಗಳು, ತಮ್ಮ ಹೆಸರಿ ನಿಂದಲೇ ತುಂಬಾನೇ ಫೇಮಸ್. ಉದಾಹರಣೆಗೆ ನೋಡುವುದಾದರೆ ದಾವಣಗೆರೆ ಕಡೆ ಹೋದರೆ ಬೆಣ್ಣೆ ದೋಸೆ, ಅದೇ ನಮ್ಮ ಬೆಳಗಾವಿ ಕಡೆಗೆ ಹೋದರೆ, ಸಿಹಿ ಸಿಹಿ ಕುಂದಾ ಸ್ವೀಟ್ಸ್ ಬಹಳ ಫೇಮಸ್.

ಇನ್ನೂ ರಾಯಚೂರು ಗುಲ್ಬರ್ಗ ಕಡೆ ಜೋಳದ ರೊಟ್ಟಿ, ಖಾರ ಚಟ್ನಿ ಪುಡಿ, ಹಾಗೆಯೇ ಸ್ವಲ್ಪ ದಕ್ಷಿಣ ಕರ್ನಾಟಕದ ಕಡೆಗೆ ಮುಖ ಮಾಡಿದರೆ ಚಪಾತಿ ಮತ್ತು ರಾಗಿ ಮುದ್ದೆ.

ಹೀಗೆ ಆಯಾ ಪ್ರದೇಶದ ಜನರು ಅವರು, ನೆಚ್ಚಿನ ಆಹಾರಗಳನ್ನು ಮತ್ತು ಹಿಂದಿನಿಂದ ಸೇವನೆ ಮಾಡಿಕೊಂಡು ಬಂದಿರುವ ಬಹಳಷ್ಟು ಆಹಾರ ಪದಾರ್ಥ ಗಳನ್ನು ಕಟ್ಟು ನಿಟ್ಟಾಗಿ ಅನುಸರಿಸಿ ಕೊಂಡು ಬಂದಿರುವ ಜೊತೆಗೆ ಅನೇಕ ಕಾಯಿಲೆಗಳಿಂದ ಕೂಡ ದೂರ ಉಳಿದಿದ್ದಾರೆ.

ಬನ್ನಿ ಇಂದಿನ ಲೇಖನದಲ್ಲಿ ಮಧ್ಯಾಹ್ನ ಊಟದ ಜೊತೆ, ಒಂದೊಂದು ರಾಗಿ ಮುದ್ದೆಯನ್ನು ಕೂಡ ಸೇವನೆ ಮಾಡುವುದರಿಂದ ಏನೆಲ್ಲಾ ಆರೋಗ್ಯಕಾರಿ ಪ್ರಯೋಜನಗಳನ್ನು ನಿರೀಕ್ಷಿಸ ಬಹುದು ಎಂಬುದನ್ನು ನೋಡೋಣ….

​ದೇಹದ ತೂಕ ಕಡಿಮೆಯಾಗುತ್ತದೆ ; ದೇಹದ ತೂಕ ಇಳಿಸಲು ಬಯಸುವವರು ಮೊದಲಿಗೆ ಕಟ್ಟುನಿಟ್ಟಿನ ಆಹಾರ ಕ್ರಮ, ವ್ಯಾಯಾಮ, ಸರಿಯಾದ ಜೀವನಶೈಲಿಯನ್ನು ಅನುಸರಿಸಬೇಕು. ಮುಖ್ಯವಾಗಿ ಕ್ಯಾಲೋರಿ ಕಡಿಮೆ ಇರುವ ಆಹಾರ ಗಳನ್ನು ಸೇವಿನೆ ಮಾಡಬೇಕು, ಹಾಗೂ ಪ್ರೋಟೀನ್ ಅಂಶ ಹೆಚ್ಚಿರುವ ಆಹಾರವನ್ನು ಸೇವಿಸಬೇಕು.

ಈ ನಿಟ್ಟಿನಲ್ಲಿ ನೋಡುವುದಾದರೆ, ರಾಗಿ ಮುದ್ದೆ ತುಂಬಾನೇ ಸಹಾಯಕ್ಕೆ ನಿಲ್ಲುತ್ತದೆ. ಮುಖ್ಯವಾಗಿ ರಾಗಿ ಮುದ್ದೆಯಲ್ಲಿ ಕ್ಯಾಲೋರಿ ಅಂಶಗಳು ಕಡಿಮೆ ಇರುವುದರ ಜೊತೆಗೆ, ಇದರಲ್ಲಿ ಅಮಿನೋ ಆಮ್ಲವಾಗಿರು ವಂತಹ ಟ್ರಿಪ್ಟೊಫಾನ್ ಇದ್ದು, ಹೊಟ್ಟೆಯ ಹಸಿವನ್ನು ಕಡಿಮೆ ಮಾಡಿ ದೇಹದ ತೂಕ ಇಳಿಸಲುನೆರವಾಗುತ್ತದೆ.

ದೇಹದ ಮೂಳೆಗಳಿಗೆ ಒಳ್ಳೆಯದು : ನಿಮಗೆ ಗೊತ್ತಿರಲಿ ರಾಗಿಯಲ್ಲಿ ಕ್ಯಾಲ್ಸಿಯಂ ಹಾಗೂ ವಿಟಮಿನ್ ಡಿ ಸಮತ್ತು ಇದು ಮೂಳೆಗಳನ್ನು ಬಲಿಷ್ಠ ಗೊಳಿಸುವುದು. ಹೀಗಾಗಿ ಪ್ರತಿದಿನ ಊಟ ಜೊತೆಗೆ, ಒಂದೊಂದು ರಾಗಿ ಮುದ್ದೆಯನ್ನು ಕೂಡ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ, ಸಾಮಾನ್ಯವಾಗಿ ವಯಸ್ಸಾದ ನಂತರದಲ್ಲಿ ಕಂಡು ಬರುವ ಆಸ್ಟಿಯೋಪೋರೋಸಿಸ್ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.

ಮಧುಮೇಹ ಕಾಯಿಲೆ ಇದ್ದವರಿಗೆ…

ಸಕ್ಕರೆಕಾಯಿಲೆ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ! ಮನುಷ್ಯನಲ್ಲಿ ಒಮ್ಮೆ ಈ ಕಾಯಿಲೆ ಕಾಣಿಸಿಕೊಂಡರೆ, ಮತ್ತೆ ಜೀವನ ಪರ್ಯಾಂತ ಈ ಕಾಯಿಲೆಯ ಜೊತೆಗೆ ಜೀವನ ನಡೆಸಬೇಕಾದ ಪರಿಸ್ಥಿತಿ ಎದುರಾ ಗುತ್ತದೆ. ಆದರೆ ಸಮಾಧಾನದ ಸಂಗತಿ ಏನೆಂದರೆ, ಈ ಕಾಯಿಲೆಯನ್ನು ವೈದ್ಯರ ಚಿಕಿತ್ಸೆ ಹಾಗೂ ಕಟ್ಟು ನಿಟ್ಟಿನ ಆಹಾರ ಸೇವನೆಯಿಂದ ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳಬಹುದು.

ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ ರಾಗಿ ಮುದ್ದೆ. ಇದಕ್ಕೆ ಬಹುಮುಖ್ಯ ಕಾರಣ ಎಂದರೆ ರಾಗಿ ಮುದ್ದೆಯಲ್ಲಿ ಸಿಗುವ ನಾರಿನಾಂಶ ಹಾಗೂ ಪಾಲಿಫಿನಾಲ್ ಅಂಶ.

ಹೀಗಾಗಿ ಸಕ್ಕರೆಕಾಯಿಲೆ ಇರುವವರು ಪ್ರತಿದಿನ ಒಂದೊಂದು ರಾಗಿ ಮುದ್ದೆ ಸೇವನೆ ಮಾಡುವುದ ರಿಂದ, ದೇಹದಲ್ಲಿ ಸಕ್ಕರೆ ಪ್ರಮಾಣ ಅಚ್ಚುಕಟ್ಟಾಗಿ ನಿರ್ವಹಣೆ ಆಗುತ್ತದೆ ಹಾಗೂ ಮಧುಮೇಹ ಕೂಡ ನಿಯಂತ್ರಣಕ್ಕೆ ಬರುತ್ತದೆ. ಇದರ ಜೊತೆಗೆ ಜೀರ್ಣಾಂಗ ವ್ಯವಸ್ಥೆ ಕೂಡ ಅತ್ಯುತ್ತಮಗೊಳ್ಳಲಿದೆ.

ಕೊಲೆಸ್ಟ್ರಾಲ್ ತಗ್ಗಿಸುವುದು….

ದೇಹದ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ನ ಅಂಶ ಹೆಚ್ಚಾದರೆ, ಮುಂದಿನ ದಿನಗಳಲ್ಲಿ ಹೃದಯಕ್ಕೆ ಸಮಸ್ಯೆ ಬರುವ ಅಪಾಯ ಹೆಚ್ಚಿರುತ್ತದೆ. ಹೀಗಾಗಿ ರಾಗಿ ಮುದ್ದೆಯನ್ನು ಪ್ರತಿದಿನ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ, ಹೃದಯದ ಆರೋಗ್ಯವು ಕೂಡ ಉತ್ತಮವಾಗಿ ಇರುವುದು.

ಇದಕ್ಕೆ ಮುಖ್ಯ ಕಾರಣ ರಾಗಿಯಲ್ಲಿ ಅಮಿನೋ ಆಮ್ಲವಾಗಿರುವಂತಹ ಲೆಸಿಥಿನ್ ಹಾಗೂ ಮೆಥಿ ಯೋನಿನ್ ಎನ್ನುವ ಆರೋಗ್ಯಕಾರಿ ಅಂಶವು, ನಮ್ಮ ದೇಹದೊಳಗಿನ ಯಕೃತ್‌ನಲ್ಲಿ ಸಂಗ್ರಹಣೆ ಗೊಂಡಿರುವ ಅಧಿಕ ಮಟ್ಟದ ಕೊಬ್ಬನ್ನು ಕಡಿಮೆ ಮಾಡಿ, ರಕ್ತದಲ್ಲಿ ಶೇಖರಣೆಗೊಂಡಿರುವ ಕೊಲೆಸ್ಟ್ರಾಲ್ ಅಂಶವನ್ನು ಕೂಡ ನಿವಾರಿಸುವುದು.

ರಕ್ತಹೀನತೆ ಸಮಸ್ಯೆ…..

ದೇಹದಲ್ಲಿ ಕಬ್ಬಿಣಾಂಶದ ಕೊರತೆಯಿಂದಾಗಿ ರಕ್ತಹೀನತೆ ಅಥವಾ ಅನಿಮಿಯ ಸಮಸ್ಯೆ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಈ ಸಮಸ್ಯೆ ಇದೆ ಎಂದು ಗೊತ್ತಾದ ಬಳಿಕ, ಕಬ್ಬಿಣದ ಅಂಶ ಹೆಚ್ಚಿರುವ ಆಹಾರ ಪದಾರ್ಥ ಗಳನ್ನು ಸೇವಿಸಬೇಕು.

ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ, ಪ್ರತಿದಿನ ರಾಗಿ ಮುದ್ದೆ ತಿನ್ನುವ ಅಭ್ಯಾಸ ಮಾಡು ವುದು. ಇದರಿಂದ ದೇಹದಲ್ಲಿ ಕಬ್ಬಿನಾಂಶವು ಹೆಚ್ಚಾಗಿ, ಹಿಮೋಗ್ಲೋಬಿನ್ ಮಟ್ಟವು ಸುಧಾರಣೆ ಯಾವುದು.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button