
ಬೆಂಗಳೂರು : ದೇಶಾದ್ಯಂತ ದಸರಾ ವೈಭವ ಕಳೆ ಕಟ್ಟಿದೆ. ರಾಜ್ಯದಲ್ಲೂ ದಸರಾ ನವರಾತ್ರಿ ಸಂಭ್ರಮ ಜೋರಾಗಿದೆ. ಆದರೆ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೂವು ಹಣ್ಣಿನ ದರ ಗಗನಕ್ಕೇರಿದೆ. ಕುಂಬಳಕಾಯಿ ದರವು ದುಪ್ಪಟ್ಟಾಗಿದೆ.
ಹಬ್ಬದ ಹಿನ್ನೆಲೆಯಲ್ಲಿ ಬೂದು ಕುಂಬಳ ಕಾಯಿ ದುಬಾರಿಯಾಗಿದೆ. ಒಂದು ಬೂದುಗುಂಬಳಕಾಯಿ 40 ರೂ.ಗೆ ಮಾರಾಟವಾಗುತ್ತಿದೆ. ಕೆಜಿ ಕುಂಬಳಕಾಯಿ ದರ ಕಳೆದ ವಾರ 15-20 ರೂ. ವರೆಗೆ ಇತ್ತು.
ಆದರೆ, ದಸರಾಹಬ್ಬ ಮತ್ತು ಮಳೆ ಕಾರಣ ಇದೀಗ ಕುಂಬಳಕಾಯಿ ದರ ಹೆಚ್ಚಾಗಿದೆ. ಇಳುವರಿ ಕಡಿಮೆ ಇರುವ ಕುಂಬಳಕಾಯಿ ಬೆಲೆ ದುಪ್ಪಟ್ಟಾಗಿದೆ.
ಮಾರುಕಟ್ಟೆಯಲ್ಲಿ ಎಷ್ಟಿದೆ ಹೂವಿನ ಬೆಲೆ : ಕುಂಬಳಕಾಯಿಯಂಟೆ ಹೂವಿನ ದರವೂ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ಹೂವಿನ ದರ ಎಷ್ಟಿದೆ ನೋಡೋಣ.
ಮಲ್ಲಿಗೆ ಹೂ ಪ್ರತೀ ಮಾರು 190-220 ರೂ.ಸೇವಂತಿಗೆ ಪ್ರತೀ ಮಾರು 180-200 ರೂ.ಚೆಂಡು ಹೂ ಮಾರಿಗೆ 100-130 ರೂ.ಕನಕಾಂಬರ ಹೂ 450 – 500 ರೂ.ಸುಗಂಧರಾಜ 250-280 ರೂ. ಕೆಜಿಕಾಕಡ 800 ರೂ. ಕೆಜಿ
ಹಣ್ಣಿನ ದರ:ಆಪಲ್ – 120 ರಿಂದ 150 ರೂದಾಳಿಂಬೆ – 80 ರಿಂದ 120 ರೂ ಮೂಸಂಬಿ – 80ರಿಂದ 100 ರೂದ್ರಾಕ್ಷಿ – 80 ರೂಕಪ್ಪು ದ್ರಾಕ್ಷಿ -70ರೂಬಾಳೆಹಣ್ಣು – 80-90ರೂಪಚ್ಚಬಾಳೆ – 60ರೂ