
ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಹೊರ ಪ್ರದೇಶದಲ್ಲಿ ಬೆಳಿಗ್ಗೆ ದಟ್ಟವಾದ ಮಂಜು ಆವರಿಸಿದ್ದ ಪರಿಣಾಮ ವಾಹನ ಮತ್ತು ರೈಲು ಸಂಚಾರದಲ್ಲಿ ಪರಿಣಾಮ ಬೀರಿದೆ.
20 ರೈಲುಗಳು ತಡವಾಗಿ ಓಡುತ್ತಿವೆ ಎಂದು ರೈಲ್ವೆ ವಕ್ತಾರರು ತಿಳಿಸಿದ್ದಾರೆ.ಭಾರತೀಯ ಹವಾಮಾನ ಇಲಾಖೆ ಪ್ರಕಾರ ಅತ್ಯಂತ ದಟ್ಟವಾದಮಂಜು ಆವರಿಸಿ ರಸ್ತೆಯೇ ಕಾಣದಂತಾಗಿತ್ತು.
ಪಾಲಮ್ ಮತ್ತು ಸಫ್ದರ್‍ಜಂಗ್ ವಿಮಾನ ನಿಲ್ದಾಣದಲ್ಲಿ ಗೋಚರತೆಯ ಮಟ್ಟ 50 ಮೀಟರ್ ದಾಖಲಿಸಿದೆ, ಮಧ್ಯಮ ವಾಯುಮಂಡಲದ ಮಟ್ಟದಲ್ಲಿ ನೈಋತ್ಯ ಮಾರುತಗಳ ಪರಿಣಾಮವಾಗಿ ತಾಪಮಾನದಲ್ಲಿನ ಹೆಚ್ಚಳವಾಗಿದೆ.
ಕಡಿಮೆ ತಾಪಮಾನ, ಹೆಚ್ಚಿನ ತೇವಾಂಶ ಮತ್ತುಬಿರುಸು ಗಾಳಿಯು ಪಂಜಾಬ, ಹರಿಯಾಣ, ವಾಯುವ್ಯ ರಾಜಸ್ಥಾನ, ಪಶ್ಚಿಮ ಮತ್ತು ಪೂರ್ವ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಮುಂದುವರೆಯಿತು.
ಉಪಗ್ರಹ ಚಿತ್ರಣವು ಪಂಜಾಬ್ ಮತ್ತು ವಾಯುವ್ಯ ರಾಜಸ್ಥಾನದಿಂದ ಬಿಹಾರದವರೆಗೆ ದಟ್ಟವಾದ ಮಂಜು ಪದರದ ಮುಂದುವರಿಕೆಯನ್ನು ತೋರಿಸುತ್ತದೆ ಎಂದು ಹವಾಮಾನ ಅದಿಕಾರಿಯೊಬ್ಬರು ತಿಳಿಸಿದ್ದಾರೆ.