
ಕರ್ತವ್ಯದ ಜೊತೆ ಸಮಾಜಮುಖಿ ಕೆಲಸಬಂಡೆಪಾಳ್ಯ ಠಾಣೆ ಇನ್‌ಸ್ಪೆಕ್ಟರ್ ಎಲ್.ವೈ. ರಾಜೇಶ್, ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲ್ಲೂಕಿನವರು. ವಕೀಲರಾಗಿ ವೃತ್ತಿ ಆರಂಭಿಸಿದ್ದ ಇವರು, 1998ನೇ ಬ್ಯಾಚ್ ಪಿಎಸ್‌ಐ ಆಗಿ ಪೊಲೀಸ್ ಇಲಾಖೆ ಸೇರಿದ್ದಾರೆ.
ತಂದೆ ಲಕ್ಷ್ಮಯ್ಯ ಹಾಗೂ ತಾಯಿ ಯಲ್ಲಮ್ಮ.ಹೊರ ರಾಜ್ಯದವರನ್ನು ಪ್ರತಿ ಭಾನುವಾರ ಒಂದೆಡೆ ಸೇರಿಸಿ, ಶಿಕ್ಷಕರಿಂದ ಕನ್ನಡದ ಪಾಠ ಮಾಡಿಸುತ್ತಿದ್ದರು.
ಠಾಣೆಗೆ ಬರುವ ಹಿಂದಿ-ಇಂಗ್ಲಿಷ್ ಭಾಷಿಕರಿಗೆ, ’30 ದಿನಗಳಲ್ಲಿ ಕನ್ನಡ ಕಲಿಯಿರಿ’ ಪುಸ್ತಕ ನೀಡುತ್ತಿದ್ದರು. ಎಸ್ಸೆಸ್ಸೆಲ್ಸಿ ಅನ್ನುತ್ತೀರ್ಣವಾಗುವ ವಿದ್ಯಾರ್ಥಿಗಳನ್ನು ಗುರುತಿಸಿ, ‘ದಾರಿದೀಪ’ ಹೆಸರಿನಲ್ಲಿ ಶಿಕ್ಷಕರಿದ ಉಚಿತ ಪಾಠ ಮಾಡಿಸುತ್ತಿದ್ದಾರೆ.ಪೊಲೀಸರ ಕೆಲಸದ ಬಗ್ಗೆ ಜನರ ಅಭಿಪ್ರಾಯ ಸಂಗ್ರಹಿಸಲು ಕ್ಯೂ ಆರ್ ಕೋಡ್ ಆಧರಿತ ದರ್ಪಣ ವ್ಯವಸ್ಥೆ ಜಾರಿಗೊಳಿಸಿದ್ದಾರೆ.
ಈ ವ್ಯವಸ್ಥೆ ಆಗ್ನೆಯ ವಿಭಾಗದ ಎಲ್ಲ ಠಾಣೆಗಳಿಗೂ ವಿಸ್ತರಣೆ ಆಗಿದೆ.ದೇವನಹಳ್ಳಿ ಸಂಚಾರ ಠಾಣೆಯಲ್ಲಿದ್ದಾಗ ‘ಗೋಲ್ಡನ್ ಅವರ್ ವ್ಯವಸ್ಥೆ ಜಾರಿಗೆ ತಂದು ಗಾಯಾಳುಗಳಿಗೆ ತ್ವರಿತ ಚಿಕಿತ್ಸೆ ಸಿಗುವಂತೆ ಮಾಡಿದ್ದರು. ಸೈಬರ್ ಕ್ರೈಂ ಬಗ್ಗೆ ಜಾಗೃತಿ ಕಿರುಚಿತ್ರ ನಿರ್ಮಿಸಿದ್ದರು.
ಸ್ನೇಹಿತರ ಸಹಕಾರದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೊಡಿಸುತ್ತಿದ್ದಾರೆ. ಸರ್ಕಾರಿ ಶಾಲೆಯ ಪ್ರತಿಭಾವಂತ ಮಕ್ಕಳನ್ನು ದತ್ತು ಪಡೆದು ಉನ್ನತ ವ್ಯಾಸಂಗದವರಿಗೆ ಶಿಕ್ಷಣದ ಖರ್ಚು ಭರಿಸುತ್ತಿದ್ದಾರೆ.
ಕರ್ತವ್ಯದಲ್ಲೂ ಚುರುಕಾಗಿರುವ ಇವರಿಗೆ 2017ರಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ಲಭಿಸಿದೆ.ಆಲ್ ಇಂಡಿಯಾ ಪೊಲೀಸ್ ಡ್ಯೂಟಿ ಮೀಟ್‌ನಲ್ಲೂ ಎರಡು ಪದಕ ಪಡೆದಿದ್ದ ರಾಜೇಶ್, ನಗದು ಬಹುಮಾನವಾಗಿ ಬಂದ 15 ಲಕ್ಷವನ್ನು ಪ್ರತಿಭಾವಂತ ಮಕ್ಕಳ ಓದಿಗೆ ವ್ಯಯಿಸಿದ್ದರು.
ಇವರು ಬೆಂಗಳೂರಿನ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಹಾಕಿ ಇವರು ಮಾಡುತ್ತಿರುವ ಕಾರ್ಯ ಬಹಳ ವಿಭಿನ್ನ ಬಹಳ ಹೆಮ್ಮೆ ಅನ್ನಿಸುತ್ತೆ.ಠಾಣೆಗೆ ಬರುವ ಸಾರ್ವಜನಿಕರು ದೂರು ನೀಡಿದ ಮೇಲೆ ಫೀಡ್ಬ್ಯಾಕ್ ನೀಡಲು ಅವಕಾಶ ಅನುಕೂಲ ಮಾಡಿಕೊಟ್ಟಿದ್ದಾರೆ.
ಎಷ್ಟು ಒಳ್ಳೆ ಕೆಲಸ ಅಲ್ವೇ, ಪೊಲೀಸ್ ಸಿಬ್ಬಂದಿಗಳು ಯಾವ ರೀತಿ ನಿಮಗೆ ಸ್ಪಂದನೆ ಮಾಡಿದ್ದರು, ನಿಮ್ಮ ಸಮಸ್ಯೆ ಗಳಿಗೆ ಬಗೆಹರಿಯುವ ಕೆಲಸ ಮಾಡಿದ್ದಾರಾ.ಲಂಚ ಕೇಳಿದ್ರ ಅಂತ, ಇನ್ನು ಅನೇಕ ಪ್ರಶ್ನೆ ಕೇಳಿದ್ದಾರೆ ಅದರಲ್ಲಿ.ಇವರಂತೆ ಅಧಿಕಾರಿಗಳು ಬರಬೇಕು ಎಂಬುದು ಬಂಡೆಪಾಳ್ಯ ವ್ಯಾಪ್ತಿಯ ಜನರ ಆಶಯ.
ಪದಕ ಪಡೆದುಕೊಂಡಿದ್ದೀರಿ ಹೇಗಿದೆ ಸರ್ ಅನ್ನುವ ಪ್ರಶ್ನೆಗೆ ಬಹಳ ಸರಳವಾಗಿ ಧನ್ಯವಾದಗಳು ಹೇಳಲು ಇಚ್ಛೆಸುತ್ತೇನೆ. ಕೆಲಸ ಜನ ಸೇವೆ ಮಾಡಲು ಇನ್ನುಹೆಚ್ಚು ಆಸಕ್ತಿ ಬಂದಿದೆ ಎಂದು ಹೇಳಿದರು.ತನಿಖೆಯಲ್ಲಿ ಶ್ರೇಷ್ಠತೆಗಾಗಿ ಕೇಂದ್ರ ಗೃಹ ಸಚಿವರ ಪದಕ ಪಡೆದ ಹೆಮ್ಮೆಯ ಕ್ಷಣ.
ನಾನು ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ ನನ್ನ ಹಿರಿಯ ಅಧಿಕಾರಿಗಳು ಕೊಟ್ಟ ಮಾರ್ಗದರ್ಶನಕ್ಕಾಗಿ ಮತ್ತು ತನಿಖೆಯಲ್ಲಿ ನನಗೆ ಸಹಾಯ ಮಾಡಿದ ಹೆಡ್ ಕಾನ್‌ಸ್ಟೆಬಲ್ ವಿಶ್ವನಾಥ್ ಅವರಿಗೆ ವಿಶೇಷ ಧನ್ಯವಾದಗಳು, ಮಾರ್ಗದರ್ಶನಕ್ಕಾಗಿ ಶ್ರೀ ರವೀಂದ್ರ ಸರ್ ನಿವೃತ್ತ ಎಫ್‌ಎಸ್‌ಎಲ್ ಸಹಾಯಕ ನಿರ್ದೇಶಕರು, ಅವರ ಬೆಂಬಲಕ್ಕಾಗಿ ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ಧನ್ಯವಾದಗಳು ಎಂದು ತಿಳಿಸಿದರು.
ವರದಿ : ಆಂಟೋನಿ ಬೇಗೂರು