
ಥೈಲ್ಯಾಂಡ್‍ನಿಂದ ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮಕ್ಕೆ ಬಂದ ಬುದ್ಧನ ವಿಗ್ರಹವನ್ನು ಕೊಳ್ಳೇಗಾಲದಲ್ಲಿ ಪ್ರಥಮವಾಗಿ ಮೆರವಣಿಗೆ ಮಾಡಲಾಯಿತು. ಬುದ್ಧ ಪೂರ್ಣಿಮೆಯ ಅಂಗವಾಗಿ ಥೈಲ್ಯಾಂಡ್ ನಿಂದ ಬೆಂಗಳೂರಿನಲ್ಲಿರುವ ಮಹಾಬೋಧಿ ಸೊಸೈಟಿಗೆ 100 ಬುದ್ಧನ ವಿಗ್ರಹಗಳನ್ನು ಉಚಿತವಾಗಿ ನೀಡಲಾಗಿದ್ದು ಅವುಗಳನ್ನು ಬೌದ್ಧವಿಹಾರಗಳನ್ನು ನಿರ್ಮಿಸುವ ಉದ್ದೇಶವಿರುವ ಗ್ರಾಮಗಳಿಗೆ ನೀಡಲಾಗುತ್ತಿದೆ.
ಅದರಂತೆ ಚಾಮರಾಜನಗರ ಜಿಲ್ಲಾಯ ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮಕ್ಕೆ ನೀಡಲಾಗಿರುವ ಬುದ್ಧನ ವಿಗ್ರಹವು ಕೊಳ್ಳೇಗಾಲ ಪಟ್ಟಣಕ್ಕೆ ಆಗಮಿಸಿದ ಹಿನ್ನೆಲೆ ಇಲ್ಲಿನ ಲೋಕೋಪಯೋಗಿ ಇಲಾಖೆಯ ಕಾಲೋನಿಯಲ್ಲಿ ಸಿಂಗರಿಸಿ ನಂತರ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು.
ಬುದ್ಧ ಪೂರ್ಣಿಮೆಯ ಅಂಗವಾಗಿ ಥೈಲ್ಯಾಂಡ್ ದೇಶದಿಂದ ಕೊಳ್ಳೇಗಾಲಕ್ಕೆ ಆಗಮಿಸಿದ ಸುಮಾರು ನಾಲ್ಕು ಅಡಿ ಎತ್ತರದ ಧ್ಯಾನಮಗ್ನನಾಗಿ ಕುಳಿತಿರುವ ಬುದ್ಧನ ವಿಗ್ರಹವನ್ನು ಮಂಗಳ ವಾದ್ಯಗಳೊಡನೆ ಮೆರವಣಿಗೆ ನಡೆಸಿ ಸಂಭ್ರಮಿಸಿದ ಕೊಳ್ಳೇಗಾಲದ ಪಟ್ಟಣದ ನಿವಾಸಿಗಳು ನಂತರ ಕೆಸ್ತೂರು ಗ್ರಾಮಕ್ಕೆ ಮೆರವಣಿಗೆಯಲ್ಲಿ ಸಾಗಿತು.
ವಿಗ್ರಹದ ಉಸ್ತುವಾರಿಯನ್ನು ಗುಂಡ್ಲುಪೇಟೆ ಸಹಕಾರ ಸಂಘಗಳ ಸಹಾಯಕ ನಿರ್ದೇಶಕರು ಕೆ.ಬಿ. ಶಾಂತರಾಜು ವಹಿಸಿದ್ದರು.ಬುದ್ಧನ ಮೂರ್ತಿ ಮೆರವಣಿಗೆಯೊಡನೇ ಕಸ್ತೂರು ಗ್ರಾಮದ ಅಂಬೇಡ್ಕರ್ ಯುವಕ ಸಂಘ ಅಧ್ಯಕ್ಷಕುಮಾರ್, ಉಪಾಧ್ಯಕ್ಷ ಶಿವು, ಕಾರ್ಯದರ್ಶಿ ಸಂಜಯ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಶಿವಣ್ಣ , ಮುಖಂಡರಾದ ಶಾಂತರಾಜು, ಎಂ. ಶಿವಬಸವಯ್ಯ ಹಾಗೂ ಗ್ರಾಮದ ಯಜಮಾನರುಗಳು ತೆರಳಿದರು.