ತೆರಿಗೆ ವಂಚನೆ ಆರೋಪ : ಡೋಲೋ 650 ಮಾತ್ರೆ ತಯಾರಕ ಕಂಪನಿ ಮೇಲೆ ಐಟಿ ದಾಳಿ

ಕರೊನಾ ಕಾಲದಲ್ಲಿ ಅತೀ ಹೆಚ್ಚು ಸೇಲ್ ಆಗಿದ್ದ ಮಾತ್ರೆ ಅಂದರೆ ಡೋಲೋ 650. ಕರೋನಾ. ಕಾಲ ಮಾತ್ರವಲ್ಲ ತಲೆನೋವು, ಮೈ ಕೈ ನೋವು, ಜ್ವರ ಹೀಗೆ ಏನೇ ಸಮಸ್ಯೆ ಇದ್ದರೂ ಜನ ತಕ್ಷಣ ಮೊರೆ ಹೋಗುವುದು ಇದೇ ಮಾತ್ರೆಗೆ. ಕೊವಿಡ್ ಸಂದರ್ಭದಲ್ಲಿ 350 ಕೋಟಿ ಡೋಲೋ ಮಾತ್ರೆ ಮಾರಾಟವಾಗಿದೆ ಎಂದು ಹೇಳಲಾಗುತ್ತಿದೆ. ಈ ಮಾರಾಟದಿಂದ ಮೈಕ್ರೋ ಲ್ಯಾಬ್ಸ್ ಕಂಪನಿ ಗಳಿಸಿದ್ದು ಬರೋಬ್ಬರಿ 570 ಕೋಟಿ. ಸದ್ಯ ಈ ಮಾತ್ರೆ ತಯಾರಕ ಕಂಪನಿ ಐಮೈಕ್ರೋ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ಮೇಲೆ ಐಟಿ ದಾಳಿ ನಡೆಸಿದೆ. ಕಂಪನಿಯ ಸಿಎಂಡಿ ದಿಲೀಪ್ ಸುರಾನಾ, ಡೈರೆಕ್ಟರ್ ಆನಂದ್ ಸುರಾನ ನಿವಾಸದ ಮೇಲೂ ದಾಳಿ ನಡೆಸಲಾಗಿದೆ.
ಬೆಂಗಳೂರಿನ ಕೇಂದ್ರ ಕಚೇರಿ ಸೇರಿ ತಮಿಳುನಾಡು, ಗೋವಾ, ಪಂಜಾಬ್, ಮುಂಬೈ ,ದೆಹಲಿ, ಸಿಕ್ಕಿಂ ಸೇರಿ ದೇಶದ 40 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. 200ಕ್ಕೂ ಹೆಚ್ಚು ಐಟಿ ಅಧಿಕಾರಿಗಳಿಂದ 40ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಆದಾಯ ತೆರಿಗೆ ವಂಚನೆ ಆರೋಪ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದೆ.
ಕೋವಿಡ್ ಸಂದರ್ಭದಲ್ಲಿ ಅತಿ ಹೆಚ್ಚು ವ್ಯಾಪಾರ ವಹಿವಾಟು ನಡೆಸಿದ್ದ ಸಂಸ್ಥೆ ಇದಾಗಿದೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಮೈಕ್ರೋ ಲ್ಯಾಬ್ಸ್ ಕೇಂದ್ರ ಕಚೇರಿ ಮೇಲೆ 25ಕ್ಕೂ ಹೆಚ್ಚು ಅಧಿಕಾರಿಗಳಿಂದ ಬೆಳ್ಳಗೆ 7ಗಂಟೆ ಸುಮಾರಿಗೆ ದಾಳಿ ನಡೆದಿದೆ. ಕೊವಿಡ್ ಸಂದರ್ಭದಲ್ಲಿ 350 ಕೋಟಿ ಡೋಲೋ ಮಾತ್ರೆ ಮಾರಾಟವಾಗಿದ್ದು, ಮೈಕ್ರೋ ಲ್ಯಾಬ್ಸ್ ಕಂಪನಿ ಇದರಿಂದ 570 ಕೋಟಿ ಆದಾಯಗಳಿಸಿತ್ತು.ಆದರೆ ಇದಕ್ಕೆ ಸರಿಯಾಗಿ ಆದಾಯ ತೆರಿಗೆ ಮಾತ್ರ ಪಾವತಿಸಿರಲಿಲ್ಲ.ಈ ಹಿನ್ನಲೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.