
ನಿಮಗೆ ಈಗಾಗಲೇ ದೇಹದ ತೂಕ ಹೆಚ್ಚಾಗಿ ಹೋಗಿದೆಯಾ? ಬೇರೆಬೇರೆ ಟ್ರಿಕ್ಸ್ ಅನುಸರಿಸಿ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದುಕೊಳ್ಳುತ್ತಿದ್ದೀರಾ? ಹಾಗಾದರೆ ಇಲ್ಲಿ ಒಮ್ಮೆ ಕೇಳಿ. ಕೆಲವರು ಇಡ್ಲಿ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂದು ಹೇಳುತ್ತಾರೆ.
ಆದರೆ ಇದು ನಿಜಾನಾ ಅಥವಾ ಸುಳ್ಳು ಎಂಬುದಕ್ಕೆ ವೈದ್ಯರೇ ಅವರ ಮಾತಿನಲ್ಲಿ ಹೇಳಿದ್ದಾರೆ. ಇಡ್ಲಿ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿರುವ ನಮ್ಮ ದಕ್ಷಿಣ ಭಾರತದ ಸುಪ್ರಸಿದ್ಧ ಆಹಾರ ಪದಾರ್ಥ.
ಬೆಳಗಿನ ಬ್ರೇಕ್ ಫಾಸ್ಟ್ ಗಾಗಿ ಇಡ್ಲಿ ಇಲ್ಲದಿದ್ದರೆ ಒಂದು ರೀತಿಯ ಅಪೂರ್ಣತೆ ಕಾಣುತ್ತದೆ. ಹಾಗಾದರೆ ಇಡ್ಲಿ ತಿನ್ನುವುದನ್ನು ಡಯಟ್ ಮಾಡುವವರು ಅನುಸರಿಸಬಹುದಾ? ತಿಳಿಯೋಣ ಬನ್ನಿ.
ಆರೋಗ್ಯಕರವಾದ ಉಪಹಾರದ ಆಯ್ಕೆ ನಿಮ್ಮದಾಗಬೇಕು ಎಂದರೆ ಇಡ್ಲಿ ಬೆಳಗಿನ ಲಿಸ್ಟ್ ನಲ್ಲಿ ಇರಬೇಕು. ಉತ್ತಮ ಪೌಷ್ಟಿಕ ಸತ್ವಗಳನ್ನು ಒಳಗೊಂಡಿರುವ ತಿನ್ನಲು ಹಗುರವಾಗಿರುವ ಆಹಾರ ಪದಾರ್ಥ ಬೆಳಗಿನ ತಿಂಡಿ ಆಗಿದ್ದರೆ ಒಳ್ಳೆಯದು.
ಇಡ್ಲಿ ಬಗ್ಗೆ ಹೇಳಬೇಕು ಎಂದರೆ ಇದು ಫರ್ಮೆಂಟೇಶನ್ ಮಾಡಿದ ಆಹಾರ ಪದಾರ್ಥ. ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ದೇಹದ ತೂಕ ಕೂಡ ನಿಯಂತ್ರಣವಾಗುತ್ತದೆ.
ಆರೋಗ್ಯ ತಜ್ಞರು ಹೇಳುವ ಪ್ರಕಾರ, ನಮ್ಮ ಭಾರತೀಯರ ಬಹುತೇಕ ಆಯ್ಕೆ ಕ್ಯಾಲೋರಿ ಕಡಿಮೆ ಇರುವ ಇಡ್ಲಿ ಆಗಿದೆ. ಏಕೆಂದರೆ ಇಡ್ಲಿ ತನ್ನಲ್ಲಿ ಕೇವಲ 33 ಕ್ಯಾಲೊರಿ ಒಳಗೊಂಡಿದೆ.
ಹಗುರವಾದ ಆಹಾರ ಪದಾರ್ಥ ಇದಾಗಿದ್ದು, ತನ್ನಲ್ಲಿ ಅಪ್ರತಿಮ ಪ್ರಮಾಣದಲ್ಲಿ ನಾರಿನಂಶ ಮತ್ತು ಪ್ರೊಟೀನ್ ಅಂಶವನ್ನು ಒಳಗೊಂಡಿದೆ.
ಇದರಿಂದ ನಿಮ್ಮ ಹೊಟ್ಟೆ ತುಂಬುತ್ತದೆ ಮತ್ತು ದೀರ್ಘಕಾಲ ಹೊಟ್ಟೆ ಹಸಿಯುವುದಿಲ್ಲ. ನೀವು ತೂಕ ಕಡಿಮೆ ಮಾಡಿಕೊಳ್ಳಲು ಇದೊಂದು ಬೆಸ್ಟ್ ಉಪಹಾರ ಪದಾರ್ಥ.
ಖಂಡಿತ ಈ ಕಾಂಬಿನೇಷನ್ ಆರೋಗ್ಯದ ಮೇಲೆ ಚಮತ್ಕಾರ ಮಾಡುತ್ತದೆ. ಕೆಲವರು ವೆಜಿಟೇಬಲ್ ಸ್ಟಫ್ ಮಾಡಿದ ಇಡ್ಲಿ ತಯಾರಿಸುತ್ತಾರೆ. ಇನ್ನು ಕೆಲವರು ರಾಗಿ ಇಡ್ಲಿ ತಯಾರಿಸಿ ತಿನ್ನುತ್ತಾರೆ.
ಆದರೆ ಏನೇ ಬದಲಾದರೂ ಸಹ ಇಡ್ಲಿ ಇಡ್ಲಿಯೇ. ಆರೋಗ್ಯಕರ ಎನ್ನುವುದರಲ್ಲಿ ಎರಡು ಮಾತಿಲ್ಲ.
ಪೌಷ್ಟಿಕ ಸತ್ವಗಳು ಹೆಚ್ಚಾಗಿರುವುದರಿಂದ ದೇಹಕ್ಕೆ ಯಾವುದೇ ಆರೋಗ್ಯಕರ ಅಂಶಗಳ ಹಾನಿಯಾ ಗುವುದಿಲ್ಲ. ಇದರಲ್ಲಿ ಪ್ರೊಟೀನ್ ಮತ್ತು ವಿಟಮಿನ್ ಬಿ ಹೆಚ್ಚಾಗಿರುತ್ತದೆ.
ಕಾರ್ಬೋ ಹೈಡ್ರೇಟ್ ಕೊಬ್ಬಿನ ಅಂಶ ಮತ್ತು ಪ್ರೋಟೀನ್ ಅಂಶ ಯಾವ ರೀತಿ ದೇಹಕ್ಕೆ ಅವಶ್ಯಕತೆ ಇರುತ್ತದೆ, ಅದೇ ರೀತಿ ಇರುತ್ತದೆ.
ಇನ್ನೊಂದು ವಿಚಾರವೆಂದರೆ ಫರ್ಮೆಂಟೇಶನ್ ಮಾಡಿದ ಆಹಾರ ಪದಾರ್ಥಗಳು ಕರುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ.
ಇದರಿಂದ ದೇಹದ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ, ಹೃದಯ ಆರೋಗ್ಯದಿಂದ ಕೆಲಸ ಮಾಡಲು ಶುರುಮಾಡುತ್ತದೆ. ಮೆದುಳಿನ ಆರೋಗ್ಯ ಉತ್ತಮ ಗೊಳ್ಳುತ್ತದೆ.
ದೇಹದ ತೂಕ ಕೂಡ ನಿಯಂತ್ರಣವಾಗುತ್ತದೆ. ಅತ್ಯುತ್ತಮ ಪಿಹೆಚ್ ಮಟ್ಟ ಇದರಿಂದ ನಿರ್ವಹಣೆಯಾಗುತ್ತದೆ. ಒಟ್ಟಾರೆ ಆರೋಗ್ಯಕರ ಜೀವನ ನಿಮ್ಮದಾಗುತ್ತದೆ.
ಆರೋಗ್ಯ ತಜ್ಞರು ಹೇಳುವ ಪ್ರಕಾರ ನಿಮ್ಮ ದೇಹದ ತೂಕವನ್ನು ನಿಯಂತ್ರಣ ಮಾಡಲು ಇಡ್ಲಿ ಒಂದು ಅತ್ಯುತ್ತಮ ಉಪಹಾರವಾಗಿದೆ.
ಬೇರೆ ಆಹಾರ ಪದಾರ್ಥಗಳಲ್ಲಿ ಸಿಗುವ ಕ್ಯಾಲೋರಿಗಳನ್ನು ಗಮನದಲ್ಲಿರಿಸಿಕೊಂಡರೆ, ಅಚ್ಚುಕಟ್ಟಾಗಿ ನಿಮ್ಮ ದೇಹದ ತೂಕವನ್ನು ಕಾಪಾಡಿಕೊಳ್ಳಬಹುದು.
ಒಬ್ಬರಿಗೆ ಕೆಲಸ ಮಾಡುವ ಯಾವುದೇ ಆಹಾರ ಪದಾರ್ಥ ಇನ್ನೊಬ್ಬರಿಗೆ ಕೆಲಸ ಮಾಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
ಹಾಗಾಗಿ ಇದರಲ್ಲಿ ಹಾಕಿರುವ ಉತ್ಪನ್ನಗಳು ನಿಮ್ಮ ಆರೋಗ್ಯಕ್ಕೆ ಸೂಕ್ತ ಅಥವಾ ಅಲ್ಲ ಎಂಬುದಕ್ಕೆ ವೈದ್ಯರ ಸಲಹೆ ತೆಗೆದುಕೊಳ್ಳಿ.