Travelಅಂತಾರಾಷ್ಟ್ರೀಯರಾಷ್ಟ್ರಿಯ
ತುಂಬಾ ದಪ್ಪ ಅಂತ ವಿಮಾನ ಹತ್ತಲು ಬಿಡದ ಸಂಸ್ಥೆಗೆ 3 ಲಕ್ಷ ರೂ. ದಂಡ!

ಸ್ಥೂಲಕಾಯದ ಮಹಿಳೆಯೊಬ್ಬರು ಕತಾರ್ ಏರ್‌ವೇಸ್ ವಿಮಾನ ಏರಲು ಮುಂದಾದಾಗ ಸಿಬ್ಬಂದಿ ‘ಟೂ ಫ್ಯಾಟ್’ ಎಂದು ತಡೆದಿದ್ದರು.ಬೈರುತ್‌ನಿಂದ ದೋಹಾಗೆ ಹೊರಟಿದ್ದ 38 ವರ್ಷದ ತನ್ನನ್ನು ವಿಮಾನ ಹತ್ತಲು ಬಿಡದೆ ದೈಹಿಕ ಕಾರಣಕ್ಕೆ ಅಪಮಾನ ಎಸಗಿದ ವಿಮಾನಯಾನ ಸಂಸ್ಥೆ ವಿರುದ್ಧ ಸಂತ್ರಸ್ತೆ ಜುಲಿಯಾನಾ ನೆಹ್ಮಿ ನ್ಯಾಯಾಲಯದ ಮೊರೆ ಹೋಗಿದ್ದರು.
ವಿಮಾನದ ಸಿಬ್ಬಂದಿಯ ವರ್ತನೆಯಿಂದ ಮಾನಸಿಕ ಯಾತನೆಗೆ ಒಳಗಾಗಿದ್ದೇನೆ ಎಂದು ಆರೋಪಿಸಿದ ಜುಲಿಯಾನಾಳ ಪರವಾಗಿ ಬ್ರೆಜಿಲ್ ಕೋರ್ಟ್ ನ್ಯಾ. ರೆನಾಟ ಮಾರ್ಟಿನ್ಸ್ ಡಿ ಕರ್ವಾಲ್ಹೊ , ವಾರಕ್ಕೊಂದು ಅಥವಾ ಎರಡರಂತೆ ಮಾನಸಿಕ ಪುನಶ್ಚೇತನ ಚಿಕಿತ್ಸೆಯನ್ನು ಕೊಡಿಸುವಂತೆ ವಿಮಾನಯಾನ ಸಂಸ್ಥೆಗೆ ಆದೇಶಿಸಿದೆ.ಪ್ರತಿ ಚಿಕಿತ್ಸಾ ಸೆಷನ್‌ಗೆ 6,400 ರೂ.ಗಳಂತೆ ಒಂದು ವರ್ಷ ಜುಲಿಯಾನಾಗೆ ಮಾನಸಿಕ ಚಿಕಿತ್ಸೆ ಕೊಡಿಸಬೇಕಿದೆ.
ಅಲ್ಲಿಗೆ ಒಂದು ಸೀಟು ಕೊಡಲು ನಿರಾಕರಿಸಿದ್ದಕ್ಕಾಗಿ ವಿಮಾನಯಾನ ಸಂಸ್ಥೆಯು 3.10 ಲಕ್ಷ ರೂ. ಚಿಕಿತ್ಸಾ ವೆಚ್ಚವಾಗಿ ಭರಿಸಬೇಕಾಗಿದೆ.