
ಗೃಹಬಳಕೆಯ ಅಡುಗೆ ಅನಿಲ (ಎಲ್‍ಪಿಜಿ) ಪ್ರತಿ ಸಿಲಿಂಡರ್ ಬೆಲೆಯನ್ನು ಇಂದು 3.50 ರೂ.ಗಳಷ್ಟು ಹೆಚ್ಚಿಸಲಾಗಿದೆ.ಈ ತಿಂಗಳು ಎರಡನೇ ಭಾರಿಗೆ ದರ ಏರಿಕೆಯಾಗಿದ್ದು, ಸಣ್ಣ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ರಾಜ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಪ್ರಕಾರ, ಸಬ್ಸಿಡಿ ರಹಿತ ಎಲ್‍ಜೆಪಿ 14.2 ಕೆಜಿ ಸಿಲೆಂಡರ್ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 1,003 ರೂ. ವಿವಿಧ ನಗರಗಳಲ್ಲಿ ಸ್ಥಳೀಯ ತೆರಿಗೆ ಅನುಗುಣವಾಗಿ ಬೆಲೆ ಇದೆ.
ಕಳೆದ ಮೇ 7 ರಂದು ಪ್ರತಿ ಸಿಲಿಂಡರ್‍ಗೆ ರೂ 50 ಹೆಚ್ಚಳ ಮಾಡಲಾಗಿತ್ತು ಅದಕ್ಕೂ ಮೊದಲು ಮಾರ್ಚ್ 22 ರಂದು ಅದೇ ಪ್ರಮಾಣದಲ್ಲಿ ಬೆಲೆಗಳನ್ನು ಹೆಚ್ಚಿಸಲಾಗಿತ್ತು. 2002ರ ಆರಂಭದಿಂದ ಬೆಲೆ ಏರಿಕೆ ಬಿಸಿ ಜನಸಾಮಾನ್ಯರನ್ನು ಚಿಂತೆಗೀಡು ಮಾಡಿದೆ. ಇದಲ್ಲದೆ ವಾಣಿಜ್ಯ ಎಲ್‍ಜೆಪಿ ಸಿಲಿಂಡರ್ ಬೆಲೆಯನ್ನು 8 ರೂ ಹೆಚ್ಚಿಸಲಾಗಿದ್ದು, ಹೋಟಲ್ ತಿಂಡಿಗಳ ಬೆಲೆಯು ಏರಿದೆ. ಕೈಗಾರಿಕೆಗಳಿಂದ ತಯಾರಿಕಾ ಉತ್ಪನ್ನ ತಟಿಯಾಗಿದೆ ಇದು ಪರೋಕ್ಷವಾಗಿ ಜನಸಾಮಾನ್ಯರ ಮೇಲೆ ಹೊರೆ ಬಿದ್ದಿದೆ.