
ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾ ವೇದ ಚಿತ್ರದ ಬಿಡುಗಡೆಗೆ ಡೇಟ್ ನೋಡುತ್ತಿದ್ದ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಕಾದಿದೆ.
ಕನ್ನಡ ಸಿನಿಮಾದ ಮೂಲಕವೇ ಭಾರತೀಯ ಸಿನಿರಂಗದಲ್ಲಿ ಹೆಸರು ಕೇಳುವಂತೆ ಮಾಡಿದ್ದ ಕನ್ನಡಿಗರ ಹೆಮ್ಮೆಯ ಗಾಜನೂರು ಗಂಡು ಇದೀಗ ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಳಿಯ ದನುಷ್ ಸಿನಿಮಾದಲ್ಲಿ ನಟಿಸಲಿದ್ದಾರೆ.
ಹೌದು… ಈ ಕುರಿತು ಸ್ವತಃ ಶಿವಣ್ಣ ಸಿನಿಮಾದ ಟ್ಟೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಅರುಣ್ ಮಾಥೇಶ್ವರನ್ ನಿರ್ದೇಶನದ ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲಿ ನಟ ಧನುಷ್ ಜೊತೆ ಶಿವರಾಜ್‌ಕುಮಾರ್ ಅವರು ನಟಿಸಲಿದ್ದಾರೆ.
ಇನ್ನು ಶಿವಣ್ಣ ರಜನಿಕಾಂತ್ ಅವರ ಜೈಲರ್ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಅವರ ಅಳಿಯ ದನುಷ್ಯ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕಾಲಿವುಡ್‌ಗೆ ಶಿವಣ್ಣ ಎಂಟ್ರಿಯಿಂದ ಪ್ಯಾನ್ಸ್ ಮುಖದಲ್ಲಿ ನಗು ಮೂಡಿದೆ. ಇನ್ನು ತಮಿಳುನಾಡಿನಲ್ಲಿಯೂ ಸಹ ಶಿವರಾಜ್‌ಕುಮಾರ್ ಅವರಿಗೆ ಸಖತ್ ಫ್ಯಾನ್ ಪಾಲೋಯಿಂಗ್ ಕೂಡಾ ಇದೆ.
ಸತ್ಯಜ್ಯೋತಿ ಫಿಲ್ಮ್ಸ್ ನಿರ್ಮಾಣದ ʼಕ್ಯಾಪ್ಟನ್ ಮಿಲ್ಲರ್ʼನಲ್ಲಿ ಸಂದೀಪ್ ಕಿಶನ್ ಮತ್ತು ಪ್ರಿಯಾಂಕಾ ಅರುಲ್ ಮೋಹನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳು, ತೆಲುಗು ಸೇರಿದಂತೆ ಹಿಂದಿ ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.
ಕ್ಯಾಪ್ಟನ್ ಮಿಲ್ಲರ್ ಸಿನಿಮಾ ದಶಕದ ಹಿಂದಿನ ಘಟನೆ ಆಧಾರಿತ ಚಿತ್ರವಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತೆ ಪೂರ್ಣಿಮಾ ರಾಮಸ್ವಾಮಿ ಮತ್ತು ಕಾವ್ಯ ಶ್ರೀರಾಮ್ ಅವರು ವಸ್ತ್ರ ವಿನ್ಯಾಸ, ಶ್ರೇಯಸ್ ಕೃಷ್ಣ ಛಾಯಾಗ್ರಹಣ, ನಾಗೂರನ್ ಸಂಕಲನ, ಮದನ್ ಕರ್ಕಿ ಸಂಭಾಷಣೆ ಮತ್ತು ಜಿ ವಿ ಪ್ರಕಾಶ್ ಕುಮಾರ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.
ʻಕ್ಯಾಪ್ಟನ್ ಮಿಲ್ಲರ್ʼ ಸಿನಿಮಾ 2023ರಲ್ಲಿ ತೆರೆಗೆ ಬರಲಿದೆ. ಸತ್ಯಜ್ಯೋತಿ ಫಿಲ್ಮ್ಸ್‌ನ ಬ್ಯಾನರ್‌ನಲ್ಲಿ ಸೆಂಧಿಲ್ ತ್ಯಾಗರಾಜನ್ ಮತ್ತು ಅರ್ಜುನ್ ತ್ಯಾಗರಾಜನ್ ಅದ್ದೂರಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.