ಅಂತಾರಾಷ್ಟ್ರೀಯಆರೋಗ್ಯ

ತನ್ನದೇ ಕೊರೊನಾ ಕ್ವಾರಂಟೈನ್ ನಿಯಮ ಹಿಂಪಡೆದ ಕರ್ನಾಟಕ ಸರ್ಕಾರ

ಈ ಮುನ್ನ ಹೈರಿಸ್ಕ್ ದೇಶಗಳಿಂದ ಆಗಮಿಸುವ ರೋಗಲಕ್ಷಣ ಇಲ್ಲದ ಪ್ರಯಾಣಿಕರಿಗೂ ಕ್ವಾರಂಟೈನ್ ಕಡ್ಡಾಯ ಮಾಡಲಾಗಿತ್ತು. ಆದರೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ಈ ಆದೇಶವಿಲ್ಲ ಎಂದು ಈ ಆದೇಶವನ್ನು ಹಿಂಪಡೆಯಲಾಗಿದೆ. ಕೊರೊನಾ ಸೋಂಕಿನ ಭೀತಿ ಹೆಚ್ಚಿರುವ ಹೈ-ರಿಸ್ಕ್ ದೇಶಗಳಿಂದ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಪ್ರಕಟಿಸಿದೆ.ಕೋವಿಡ್ ಹೈರಿಸ್ಕ್ ದೇಶಗಳಿಂದ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರಿಗೆ 7 ದಿನಗಳ ಕಾಲ ಕ್ವಾರಂಟೈನ್ ಎಂಬ ಹಳೆಯ ಆದೇಶವನ್ನು ವಾಪಸ್ ಪಡೆದು ರಾಜ್ಯ ಸರ್ಕಾರ ಆದೇಶಿಸಿದೆ.ಈ ಮುನ್ನ ಹೈರಿಸ್ಕ್ ದೇಶಗಳಿಂದ ಆಗಮಿಸುವ ರೋಗಲಕ್ಷಣ ಇಲ್ಲದ ಪ್ರಯಾಣಿಕರಿಗೂ ಕ್ವಾರಂಟೈನ್ ಕಡ್ಡಾಯ ಮಾಡಲಾಗಿತ್ತು.ಆದರೆ ರಾಜ್ಯ ಸರ್ಕಾರ ಈ ಮುನ್ನ ತಾನು ಹೊರಡಿಸಿದ್ದ ಆದೇಶವನ್ನು ಹಿಂಪಡೆದಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ಈ ಆದೇಶವಿಲ್ಲ ಎಂದು ಈ ಆದೇಶವನ್ನು ಹಿಂಪಡೆಯಲಾಗಿದೆ.

Related Articles

Leave a Reply

Your email address will not be published. Required fields are marked *

Back to top button