ಡ್ರಗ್ಸ್ ಸೇವನೆ ಪ್ರಕರಣ : ವಿಚಾರಣೆಗೆ ಹಾಜರಾದ ಸಿದ್ಧಾಂತ್ ಕಪೂರ್

ಪ್ರತಿಷ್ಠಿತ ಹೋಟೆಲ್‍ನಲ್ಲಿ ನಡೆಯುತ್ತಿದ್ದ ಪಾರ್ಟಿ ವೇಳೆ ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಬಾಲಿವುಡ್ ನಟ ಸಿದ್ದಾಂತ್ ಕಪೂರ್ ಇಂದು ಹಲಸೂರು ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದರು.
ಪಾರ್ಟಿಯಲ್ಲಿ ಡ್ರಗ್ಸ್ ಹೇಗೆ ಬಂತು ಎಂಬುದು ತನಗೆ ಗೊತ್ತಿಲ್ಲ. ಸ್ನೇಹಿತರೊಬ್ಬರು ನೀರು ಕೊಟ್ಟರು. ನಾನು ಅದನ್ನು ಕುಡಿದೆ.
ಮತ್ತೊಬ್ಬ ಸ್ನೇಹಿತ ಕೊಟ್ಟ ಸಿಗರೇಟ್‍ನ್ನು ಸೇದಿದೆ ಅಷ್ಟೇ ಎಂದು ವಿಚಾರಣೆ ವೇಳೆ ಹೇಳಿದ್ದಾನೆ. ನಾನು ಸೇವಿಸಿದ ಯಾವ ಪದಾರ್ಥದಲ್ಲಿ ಡ್ರಗ್ಸ್ ಇತ್ತು ಎಂಬುದು ಗೊತ್ತಿಲ್ಲ ಎಂದು ಸಿದ್ದಾಂತ್ ತಿಳಿಸಿದ್ದಾನೆ.
ಮೊನ್ನೆ ತಡರಾತ್ರಿ ಪಂಚತಾರಾ ಹೋಟೆಲ್‍ನಲ್ಲಿ ನಡೆಯುತ್ತಿದ್ದ ರೇವಾ ಪಾರ್ಟಿಯಲ್ಲಿ ಡಿಜೆಯಾಗಿ ಸಿದ್ದಾಂತ್ ಕಪೂರ್ ಪಾಲ್ಗೊಂಡಿದ್ದರು.
ಈ ಪಾರ್ಟಿಯಲ್ಲಿ ಡ್ರಗ್ಸ್ ಸರಬರಾಜಾಗಿದೆ ಎಂಬ ಮಾಹಿತಿ ಮೇರೆಗೆ ಹಲಸೂರು ಠಾಣೆ ಪೊಲೀಸರು ಹೋಟೆಲ್ ಮೇಲೆ ದಾಳಿ ಮಾಡಿ ಸಿದ್ದಾಂತ್ ಕಪೂರ್ ಸೇರಿದಂತೆ 35 ಮಂದಿಯನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಸಿದ್ದಾಂತ್ ಕಪೂರ್ ಡ್ರಗ್ಸ್ ಸೇವಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ನಿನ್ನೆ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ನಂತರ ಠಾಣಾ ಜಾಮೀನು ಮೇಲೆ ಬಿಡುಗಡೆ ಮಾಡಿ ಇಂದು ವಿಚಾರಣೆಗೆ ಆಗುವಂತೆ ಸೂಚಿಸಿದ್ದರು.