ಡ್ಯಾನ್ಸಿಂಗ್ ಚಾಂಪಿಯನ್ ಗ್ರ್ಯಾಂಡ್ ಫಿನಾಲೆಯಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್

ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ (Dancing Champion) ರಿಯಾಲಿಟಿ ಶೋ ಈಗಾಗಲೇ ಯಶಸ್ವಿಯಾಗಿ ಜನಮನ ಗೆದ್ದಿದೆ. ಸ್ಪರ್ಧಿಗಳು ಉತ್ತಮ ರೀತಿಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಇದೀಗ ಇದೀಗ ಗ್ರಾಂಡ್ ಪಿನಾಲೆ ಹಂತಕ್ಕೆ ತಲುಪಿರುವ ಈ ಶೋಗೆ ಸ್ಪೆಷಲ್ ಗೆಸ್ಟ್ ಆಗಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Punith Rajkumar) ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯವರು ಈಗಾಗಲೇ ಪ್ರೊಮೋ ಕೂಡ ಬಿಟ್ಟಿದ್ದಾರೆ.
14 ಸೆಲೆಬ್ರಿಟಿಗಳು ವೃತ್ತಿಪರ ಡ್ಯಾನ್ಸರ್ ಜೊತೆಯಾಗಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಧಾರಾವಾಹಿಗಳಲ್ಲಿ ನಟಿಸಿದ ನಟ-ನಟಿಯರು ಇಲ್ಲಿ ಸೆಲೆಬ್ರಿಟಿ ಡ್ಯಾನ್ಸರ್ ಗಳಾಗಿ ಸ್ಪರ್ಧಿಸಿದ್ದಾರೆ. ಇದೀಗ ಫೈನಲ್ ಹಂತಕ್ಕೆ ತಲುಪಿರುವ ಈ ಶೋ ನಲ್ಲಿ ಗ್ರಾಂಡ್ ಫಿನಾಲೆಗೆ ಐದು ಜೋಡಿಗಳು ಆಯ್ಕೆಯಾಗಿವೆ.ಡ್ಯಾನ್ಸಿಂಗ್ ಚಾಂಪಿಯನ್ ವೇದಿಕೆಗೆ ಆರಂಭದಿಂದಲೂ ಪ್ರತಿವಾರ ಒಬ್ಬರು ಸೆಲೆಬ್ರೆಟಿ ಬಂದು ಕಾರ್ಯಕ್ರಮಕ್ಕೆ ಮೆರುಗನ್ನು ನೀಡುತ್ತಿದ್ದರು. ಅದೇ ರೀತಿ ಡಾ. ಶಿವ ರಾಜ್‍ಕುಮಾರ್ ಕೂಡ ಈ ಕಾರ್ಯಕ್ರಮಕ್ಕೆ ಭಾಗವಹಿಸಿ ನಾಲ್ಕು ದಿನದ ಪುಟ್ಟ ಮಗುವಿಗೆ ನಾಮಕರಣ ಕೂಡ ಮಾಡಿದ್ದರು.