ಡೈಮಂಡ್ ಹೆಸರಲ್ಲಿ ಚೀಟಿಂಗ್: ವಂಚಕರ ಗ್ಯಾಂಗ್ ಅರೆಸ್ಟ್

ಕೋಟ್ಯಾಂತರ ಬೆಲೆ ಬಾಳುವ ಡೈಮಂಡ್ ಎಂದು ಬ್ಯುಸಿನೆಸ್ ಮ್ಯಾನ್ಗಳನ್ನೆ ಟಾರ್ಗೆಟ್ ಮಾಡಿ ವಂಚನೆ ಮಾಡಲು ಮುಂದಾಗಿದ್ದ ಗ್ಯಾಂಗ್‌ವೊಂದನ್ನು ಪುಲಿಕೇಶಿನಗರ ಪೊಲೀಸರು ಬಂಧಿಸಿದ್ದಾರೆ.
ಡೈಮಂಡ್ ಹೆಸರಲ್ಲಿ ಚೀಟಿಂಗ್ ಮಾಡುತ್ತಿದ್ದ ನಾಗರಾಜ್, ಬಾಲಕೃಷ್ಣ, ರಾಜೇಶ್ ಬಂಧಿತರು. ಮನೆಯಲ್ಲಿ ಡೈಮಂಡ್ ಇಟ್ಟರೆ ಒಳ್ಳೆಯದು ಎಂದು ನಂಬಿಸಿ ಡೈಮಂಡ್ ಎಂದು ತೋರಿಸಿ ಉದ್ಯಮಿಗಳಿಂದ ಈ ಗ್ಯಾಂಗ್ ಅಡ್ವಾನ್ಸ್ ಪಡೆಯುತ್ತಿದ್ದರು.
ಫ್ರೇಜರ್ ಟೌನ್ ಬಳಿ ಆರೋಪಿ ನಾಗರಾಜ್ಗೆ ಪರಿಚಯವಾಗಿದ್ದ ಉದ್ಯಮಿಯಲ್ಲಿ ಪಿತ್ರಾರ್ಜಿತವಾಗಿ ಬಂದ ವಜ್ರದ ಕಲ್ಲಿನ ನೆಕ್ಲಸ್ ಇದೆ. ಅದನ್ನು ಮಾರಾಟ ಮಾಡಬೇಕು ಎಂದು ಆರೋಪಿ ಹೇಳಿದ್ದ. ಮಾರ್ಕೆಟ್ ಬೆಲೆಗಿಂತ ಕಡಿಮೆ ಬೆಲೆಗೆ ಕೊಡುವುದಾಗಿ ಆಮಿಷವೊಡ್ಡಿದ್ದ, ಅಡ್ವಾನ್ಸ್ ಎಂದು ಉದ್ಯಮಿ ಹತ್ತು ಸಾವಿರ ಕೊಟ್ಟಿದ್ದ.
ನಂತರ 92 ಕ್ಯಾರೆಟ್ ವಜ್ರ ಇದೆ ಅದರ ಬೆಲೆ 25 ಕೋಟಿ. 25 ಕೋಟಿ ಕೊಟ್ಟರೆ ವಜ್ರದ ನೆಕ್ಲೆಸ್ ಬದಲಿಗೆ ಒಂದು ವಜ್ರದ ಕಲ್ಲನ್ನು ಕೊಡುವುದಾಗಿ ವಂಚಿಸಲು ಮುಂದಾಗಿದ್ದ. ಈ ಬಗ್ಗೆ ಅನುಮಾನ ಬಂದು ಉದ್ಯಮಿ ಪುಲಕೇಶಿ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.