ಡೇಟಿಂಗ್ ಆ್ಯಪ್‌ನಲ್ಲಿ ಕೊಲೆಗಡುಕನನ್ನು ಪ್ರೀತಿಸಿದ ಮಹಿಳೆ; ಮೊದಲ ದಿನವೇ ಖಾತೆಯಿಂದ 70 ಲಕ್ಷ ನಾಪತ್ತೆ!

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್‍ಗಳು ಹೆಚ್ಚುತ್ತಿವೆ. ಪ್ರಪಂಚದಾದ್ಯಂತ ಪ್ರೀತಿಯ ಹೆಸರಿನಲ್ಲಿ ವಂಚಿಸುವ ಪ್ರಕರಣಗಳು ಸಹ ಬೆಳಕಿಗೆ ಬರುತ್ತಿರುತ್ತವೆ.
ಡೇಟಿಂಗ್ ಹೆಸರಿನಲ್ಲಿ ಅನೇಕರನ್ನು ವಂಚಿಸಲಾಗುತ್ತದೆ. ಅಮಾಯಕರಿಗೆ ಗಾಳ ಬೀಸುವ ವಂಚಕರ ಜಾಲ ಲಕ್ಷಾಂತರ ರೂ.
ಹಣವನ್ನು ಲೂಟಿ ಮಾಡುತ್ತಾರೆ. ಡೇಟಿಂಗ್ ಹೆಸರಿನಲ್ಲಿ ಯುವತಿಯೊಬ್ಬಳಿಗೆ ಲಕ್ಷಾಂಗರ ರೂ. ಪಂಗನಾಮ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಡೇಟಿಂಗ್ ಆ್ಯಪ್‌ನಲ್ಲಿ ಚಾಟ್ ಮಾಡುವ ವೇಳೆ ಯುವತಿಯೊಬ್ಬಳು ಯುವಕನನ್ನು ಪ್ರೀತಿಸಿದ್ದಾಳೆ. ಆದರೆ ಈ ಪ್ರೇಮಕ್ಕೆ ಬದಲಾಗಿ ಮಹಿಳೆ ಭಾರೀ ನಷ್ಟ ಅನುಭವಿಸಬೇಕಾಗಿದ್ದು, ಆಕೆಯ ಬ್ಯಾಂಕ್ ಖಾತೆಯಲ್ಲಿದ್ದ 70 ಲಕ್ಷ ರೂ. ಹಣವನ್ನು ಯುವಕ ಎಗರಿಸಿದ್ದಾನೆ.
ಡೇಟಿಂಗ್ ಆ್ಯಪ್‌ನಲ್ಲಿ ಕೊಲೆಗಡುಕನೊಂದಿಗೆ ಪ್ರೀತಿಈ ಘಟನೆ ಅಮೆರಿಕದಲ್ಲಿ ನಡೆದಿದೆ. ವರದಿಗಳ ಪ್ರಕಾರ ಮಹಿಳೆಯ ಹೆಸರು ಕ್ರಿಸ್ಟಿನ್. ಈಕೆ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ನೈಜೀರಿಯಾದ ಕೊಲೆಗಡುಕ ಯುವಕನನ್ನು ಪ್ರೀತಿಸುತ್ತಿದ್ದಾಳೆ.
ವಿಚಿತ್ರವೆಂದರೆ ಈ ಮಹಿಳೆಗೆ ಮದುವೆಯಾಗಿದ್ದು, 3 ಮಕ್ಕಳ ಸಹ ಇದ್ದಾರಂತೆ. ಈಕೆ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ‘ಮಾರ್ಕ್ ಗಾಡ್‌ಫ್ರೇ’ ಎಂಬ ಪ್ರೊಫೈಲ್ ವ್ಯಕ್ತಿಯೊಂದಿಗೆ ಚಾಟ್ ಮಾಡುತ್ತಿದ್ದಳಂತೆ.
ದಿನೇ ದಿನೇ ಈ ಚಾಟಿಂಗ್ ಪ್ರೀತಿಗೆ ತಿರುಗಿದೆ. ಆದರೆ ಮಹಿಳೆಗೆ ತಾನು ಪ್ರೀತಿಸುತ್ತಿರುವುದು ಒಬ್ಬ ಕೊಲೆಗಡುಕ ವ್ಯಕ್ತಿಯನ್ನು ಅನ್ನೋದು ತಿಳಿದಿರಲಿಲ್ಲ.
ಮಹಿಳೆ ಪ್ರೀತಿಸುತ್ತಿದ್ದ ನೈಜೀರಿಯಾದ ವ್ಯಕ್ತಿ ಕೊಲೆ ಅಪರಾಧಿಯಾಗಿದ್ದ. ಈತನ ಮೇಲೆ ಹಲವು ಅಪರಾಧ ಪ್ರಕರಣಗಳು ದಾಖಲಾಗಿವೆ. ಈತ ಮಹಿಳೆಯ ಪ್ರೊಫೈಲ್ ನೋಡಿ ಆಕೆಗೆ ಸಂದೇಶ ಕಳುಹಿಸಲು ಪ್ರಾರಂಭಿಸಿದ್ದಾನೆ.
ನಂತರ ಮಹಿಳೆ ಆತನನ್ನು ಪ್ರೀತಿಸಲು ಶುರು ಮಾಡಿದ್ದಾಳೆ. ಬಳಿಕ ಆತ ಮಹಿಳೆಯಿಂದ ಸಾಕಷ್ಟು ಮಾಹಿತಿಯನ್ನು ಪಡೆದುಕೊಂಡಿದ್ದಾನೆ. ಇಬ್ಬರೂ ಡೇಟಿಂಗ್ ಶುರು ಮಾಡಿದ್ದಾರೆ.
ಮಹಿಳೆ ಬಹುಶಃ ಆ ಯುವಕನ ಜೊತೆಗೆ ತನ್ನ ಭವಿಷ್ಯದ ಜೀವನ ಕಳೆಯಬೇಕೆಂದುಕೊಂಡಿದ್ದಳಂತೆ. ಆದರೆ ಕಂತೆ ಕಂತೆ ಸುಳ್ಳಿ ಹೇಳಿ ಮಹಿಳೆಯನ್ನು ನಂಬಿಸಿದ್ದ ಆ ಯುವಕ ಆಕೆಯ ಹಣದ ಮೇಲೆ ಕಣ್ಣಿಟ್ಟಿದ್ದನಂತೆ.
ತಾನು ಆರ್ಕಿಟೆಕ್ಟ್ ಇಂಜಿನಿಯರ್ ಮತ್ತು ಗ್ರೀಸ್ ದೇಶದವನು ಎಂದು ಮಹಿಳೆಗೆ ವಂಚಕ ಯುವಕ ತಿಳಿಸಿದ್ದಾನೆ. ತನ್ನ ಸಹೋದರಿಯ ಅನಾರೋಗ್ಯ ಸರಿಯಿಲ್ಲ, ಹೀಗಾಗಿ ನನಗೆ ಹಣದ ಅವಶ್ಯಕತೆ ಇದೆ ಅಂತಾ ಮಹಿಳೆಗೆ ಹೇಳಿದ್ದಾನೆ.
ಈ ವೇಳೆ ಮಹಿಳೆ ಆತನಿಗೆ ಹಣ ನೀಡುವ ಭರವಸೆ ನೀಡಿ ತನ್ನ ಬ್ಯಾಂಕ್ ವಿವರಗಳನ್ನು ಆತನೊಂದಿಗೆ ಹಂಚಿಕೊಂಡಿದ್ದಾಳೆ.
ಡೇಟಿಂಗ್ ಶುರುಮಾಡಿದ ಮೊದಲ ದಿನವೇ ಕಿಲಾಡಿ ಯುವಕ ಮಹಿಳೆಯ ಬ್ಯಾಂಕ್ ಖಾತೆಯಿಂದ ಸುಮಾರು 70 ಲಕ್ಷ ರೂ.ವನ್ನು ಎಗರಿಸಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ.
ತಾನು ಮೋಸ ಹೋಗಿರುವುದು ಗೊತ್ತಾಗಿ ಮಹಿಳೆ ಪೊಲೀಸ್ ಠಾಣೆಗೆ ತೆರಳಿ ಈ ಬಗ್ಗೆ ದೂರು ನೀಡಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.