ಡೆತ್ ನೋಟ್ ಬರೆದಿಟ್ಟು ಪ್ರೊಫೆಸರ್ ಆತ್ಮಹತ್ಯೆ

ಬೆಂಗಳೂರು: ನಗರದ ಬಿಜಿಎಸ್ ಕಾಲೇಜಿನ ಪ್ರೊಫೆಸರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೂಸೈಡ್‌ಗೂ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದಾರೆ. ಬಿಜಿಎಸ್ ಕಾಲೇಜಿನ ಪ್ರೊಫೆಸರ್ ಚೈತ್ರಾ (41) ನೇಣಿಗೆ ಶರಣಾಗಿದ್ದಾರೆ.
ಕದಂಬ ಲೇಔಟ್ ನ ಮನೆಯಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 23 ವರ್ಷದ ಹಿಂದೆ ಚೈತ್ರಾಳನ್ನ ಗುರುಪ್ರಸಾದ್ ಮದುವೆಯಾಗಿದ್ದರು. ಗುರುಪ್ರಸಾದ್ ಶಿಗ್ಗಾವಿಯಲ್ಲಿ ಜಾನಪದ ವಿಶ್ವವಿದ್ಯಾಲಯದಲ್ಲಿ ರಿಜಿಸ್ಟಾರ್ ಆಗಿ ಕೆಲಸ ಮಾಡುತ್ತಾರೆ.
ಪತಿ ಕರೆ ಮಾಡಿದಾಗ ಚೈತ್ರಾ ರಿಸೀವ್ ಮಾಡಿಲ್ಲ. ಕೂಡಲೇ ಚೈತ್ರಾ ಸಹೋದರನಿಗೆ ಕರೆ ಮಾಡಿ ತಿಳಿಸಿದ್ದಾರೆ. ನಂತರ ಬಾಗಿಲು ಮುರಿದು ನೋಡಿದಾಗ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಚೈತ್ರಾ ಶವ ಪತ್ತೆಯಾಗಿದೆ. ಘಟನೆ ಸಂಬಂಧ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನನ್ನ ಸಾವಿಗೆ ನಾನೇ ಕಾರಣ. ನನಗೆ ತೀವ್ರವಾದ ಅನಾರೋಗ್ಯ ಸಮಸ್ಯೆಕಾಡುತ್ತಿದೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನನ್ನು ಕ್ಷಮಿಸಿಬಿಡಿ” ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆ.