ಡಿಜಿಟಲ್ ಮೀಟರ್ ಅಳವಡಿಕೆ ಚುರುಕು

ಬೆಸ್ಕಾಂನ ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶ ವಲಯದಲ್ಲಿನ ಡಿಜಿಟಲ್ ಮೀಟರ್ ಅಳವಡಿಕೆ ಕಾರ್ಯ ಭರದಿಂದ ಸಾಗಿದ್ದು, ಇದುವರೆಗೆ ೨,೮೫,೯೪೧ ಲಕ್ಷ ಡಿಜಿಟಲ್ ಮೀಟರ್‌ಗಳನ್ನು ಅಳವಡಿಸಲಾಗಿದೆ.
ಡಿಎಲ್‌ಎಮ್‌ಎಸ್ ಸ್ಟ್ಯಾಟಿಕ್ (ಡಿವೈಸ್ ಲ್ಯಾಂಗ್ವೇಜ್ ಮೆಸೇಜ್ ಸ್ಪೆಸಿಫಿಕೇಷನ್) ಡಿಜಿಟಲ್ ಮಾಪನಗಳನ್ನು ಅಳವಡಿಸಲು ಎರಡು ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದ್ದು, ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶ ವಲಯದಲ್ಲಿ ಬರುವ ಬೆಸ್ಕಾಂನ ಉತ್ತರ, ಪಶ್ಚಿಮ ಮತ್ತು ಪೂರ್ವ ವೃತ್ತಗಳಲ್ಲಿ ಡಿಜಿಟಲ್ ಮೀಟರ್ ಅಳವಡಿಸಲಾಗುತ್ತಿದ್ದು, ದಕ್ಷಿಣ ವೃತ್ತದಲ್ಲಿ ಕಾರ್ಯ ಇನ್ನಷ್ಟೆ ಆರಂಭಗೊಳ್ಳಬೇಕಾಗಿದೆ.
ಅಕ್ಟೋಬರ್ ೧೭,ವೇಳೆಗೆ ಉತ್ತರ ವೃತ್ತ-ಪಶ್ಚಿಮ ವೃತ್ತ, ದಕ್ಷಿಣ ವೃತ್ತ ಪೂರ್ಣಗೊಳ್ಳಲಿದೆ. ಮತ್ತು ಪೂರ್ವ ವೃತ್ತದ ವ್ಯಾಪ್ತಿಯಲ್ಲಿನ ಗ್ರಾಹಕರಿಗೆ ೧,೧೧,೬೦೪ ಸೇರಿ ಒಟ್ಟು ೨,೮೫,೯೪೧ ಡಿಎಲ್‌ಎಮ್ ಎಸ್ ಸ್ಟ್ಯಾಟಿಕ್ ಸಿಂಗಲ್ ಫೇಸ್ ಮೀಟರ್ ಗಳನ್ನು ಅಳವಡಿಸಲಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
ಮೀಟರ್ ಅಳವಡಿಕೆ ಕಾರ್ಯವನ್ನು ಎರಡು ಇಲೆಕ್ಟ್ರಿಕ್ ಕಂಪನಿಗಳಾದ ರಾಜೇಶ್ವರಿ ಇಲೆಕ್ಟ್ರಿಕಲ್ಸ್ ಮತ್ತು ವಿ.ಆರ್. ಪಾಟೀಲ್ ಇಲೆಕ್ಟ್ರಿಕಲ್ಸ್ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದ್ದು, ರಾಜಶ್ರೀ ಇಲೆಕ್ಟ್ರಿಕಲ್ಸ್ ದಿನಕ್ಕೆ ಸರಾಸರಿ ೩೫೦೦ ರಿಂದ ೩೮೦೦ ಡಿಜಿಟಲ್ ಮೀಟರ್ ಅಳವಡಿಸುತ್ತಿದೆ. ಹಾಗೆಯೇ ವಿ.ಆರ್. ಪಾಟೀಲ್ ಇಲೆಕ್ಟ್ರಿಕಲ್ಸ್ ಕಂಪನಿ ದಿನಕ್ಕೆ ಸರಾಸರಿ ೨೦೦೦ ರಿಂದ ೫೦೦೦ ಮೀಟರ್ ಗಳನ್ನು ಅಳವಡಿಸುತ್ತಿದೆ.
ಇದೀಗ ಸಿಂಗಲ್ ಫೇಸ್ ಡಿಜಿಟಲ್ ಮೀಟರ್ ಅಳವಡಿಸಲಾಗುತ್ತಿದ್ದು, ೩ ಫೇಸ್ ಮಿಟರ್ ಅಳವಡಿಕೆ ಕಾರ್ಯವನ್ನು ಇನ್ನಷ್ಟೆ ಕೈಗೆತ್ತಿಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದರು.
ಡಿಜಿಟಲ್ ಮೀಟರ್ ಅಳವಡಿಕೆ ಕಾರ್ಯದ ಪ್ರಗತಿಯನ್ನು ಪರಿಶೀಲಿಸಲಾಗುತ್ತಿದ್ದು, ಎರಡೂ ಕಂಪನಿಗಳಿಗೆ ದಿನಕ್ಕೆ ಸರಾಸರಿ ೧೨೦೦೦ ಸಿಂಗಲ್ ಫೇಸ್ ಮೀಟರ್ ಗಳನ್ನು ಅಳವಡಿಸಲು ಸೂಚಿಸಲಾಗಿದೆ ಎಂದು ಬೆಸ್ಕಾಂ ಎಂಡಿ ತಿಳಿಸಿದ್ದಾರೆ.
ಗ್ರಾಹಕರಿಗೆ ತಾವು ಬಳಸುವ ವಿದ್ಯುತ್ ಪ್ರಮಾಣದ ನಿಖರ ಮಾಹಿತಿ ತಿಳಿದುಕೊಳ್ಳಲು ಅನುಕುಲವಾಗುವ ಡಿಎಲ್‌ಎಮ್‌ಎಸ್ ಸ್ಟ್ಯಾಟಿಕ್ (ಡಿವೈಸ್ ಲ್ಯಾಂಗ್ವೇಜ್ ಮೆಸೇಜ್ ಸ್ಪೆಸಿಫಿಕೇಷನ್) ಡಿಜಿಟಲ್ ಮಾಪನಗಳನ್ನು ಅಳವಡಿಲಾಗುತ್ತಿದೆ.