ಡಿಎನ್‌ಎ ಹೈಕೋರ್ಟ್ ಹೊಸ ವ್ಯಾಖ್ಯಾನ

ಡಿಎನ್‌ಎ ಮಾದರಿ ಹೊಂದಾಣಿಕೆಯಾಗದಿದ್ದರೆ ಆರೋಪಿ ಅತ್ಯಾಚಾರವೆಸಗಿಲ್ಲ ಎಂದು ಹೇಳಲು ಆಗುವುದಿಲ್ಲ ಎಂಬುದಾಗಿ ಹೈಕೋರ್ಟ್ ಹೇಳಿದೆ.ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಗರ್ಭ ಧರಿಸಲು ಕಾರಣನಾಗಿದ್ದಾನೆ ಎಂಬ ಆರೋಪಕ್ಕೆ ಗುರಿಯಾಗಿರುವ ೪೩ ವರ್ಷದ ಬಸ್ ಕಂಡಕ್ಟರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಡಿಎನ್‌ಎ ಪರೀಕ್ಷೆಯಲ್ಲಿ ತನ್ನ ಮತ್ತು ಭ್ರೂಣದ ರಕ್ತದ ಮಾದರಿ ಹೊಂದಾಣಿಕೆಯಾಗುತ್ತಿಲ್ಲ ಎಂದು ತೋರಿಸಿದ ನಂತರ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಆರೋಪಿ ಹೈಕೋರ್ಟ್‌ಗೆ ಮೊರೆ ಹೋಗಿದ್ದನು.ಆರೋಪಿ ಮೈಸೂರು ನಿವಾಸಿಯಾಗಿದ್ದು ಆತನ ವಿರುದ್ಧ ಪೋಕೋಸ್ ಕಾಯಿದೆ ಮತ್ತು ಭಾರತೀಯ ದಂಡ ಸಂಹಿತೆಯಡಿ ಪ್ರಕರಣ ದಾಖಲಿಸಲಾಗಿದೆ.
ಸಂತ್ರಸ್ಥೆ ತಾಯ ಫೆಬ್ರವರಿ ೧೯, ೨೦೨೧ ರಂದು ಆರೋಪಿ ವಿರುದ್ಧ ದೂರು ದಾಖಲಿಸಿ, ಬಸ್ ಕಂಡಕ್ಟರ್ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದರು. ಡಿಎನ್‌ಎ ಪರೀಕ್ಷೆ ವರದಿ ಇನ್ನು ಬಾಕಿಯಿರುವಾಗಲೇ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ.ವರದಿ ಬಂದಾಗ ಆರೋಪಿಯ ರಕ್ತದ ಮಾದರಿ ಹಾಗೂ ಭ್ರೂಣಕ್ಕೆ ಹೊಂದಾಣಿಕೆಯಾಗುತ್ತಿಲ್ಲ ಎಂದು ಹೇಳಲಾಗಿದೆ.
ಈ ಮೂಲಕ ಸಂತ್ರಸ್ಥ ಬಾಲಕಿಯ ಗರ್ಭಧಾರಣೆಗೆ ನಾನು ಹೊಣೆಗಾರನಲ್ಲ ಎಂದು ವಾದಿಸಿ ಕೋರ್ಟ್ ಮೆಟ್ಟಿಲೇರಿದ್ದನು.ಆರೋಪಿ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವುದಾಗಿ ಬಾಲಕಿ ಹೇಳಿಕೆ ನೀಡಿದ್ದು ಡಿಎನ್‌ಎ ವರದಿ ನೆಗಟೀವ್ ಬಂದಿದ್ದರೂ ವಿಚಾರಣೆ ಮುಂದುವರಿಸಬೇಕೆಂದು ಸರ್ಕಾರಿ ಪರ ವಕೀಲರು ವಾದ ಮಂಡಿಸಿದ್ದರು.ನ್ಯಾಯಾಧೀಶ ಎಂ.
ನಾಗಪ್ರಸನ್ನ ಅವರು ಸೆಪ್ಟೆಂಬರ್ ೧೫ ರಂದು ತೀರ್ಪು ನೀಡಿ ಡಿಎನ್‌ಎ ಪರೀಕ್ಷೆಯಲ್ಲಿ ಆರೋಪಿಯು ಭ್ರೂಣದ ಜೈವಿಕ ತಂದೆಯಲ್ಲ ಎಂದು ತೋರಿಸಿದ್ದರೂ ಅರ್ಜಿದಾರರನ್ನು ಅತ್ಯಾಚಾರದ ಅಪರಾಧಗಳಿಂದ ಸಂಪೂರ್ಣವಾಗಿ ಮುಕ್ತಗೊಳಿಸುವುದಿಲ್ಲ ಎಂದರು.
ಡಿಎನ್‌ಎ ಪರೀಕ್ಷೆಯನ್ನು ದೃಢೀಕರಿಸುವ ಸಾಕ್ಷಿವೆಂದು ಪರಿಗಣಿಸುವ ನ್ಯಾಯಾಲಯ ಆರೋಪಿ ಸಲ್ಲಿಸಿದ ಅರ್ಜಿ ವಜಾಗೊಳಿಸಿದೆ. ಅರ್ಜಿದಾರರ ವಿರುದ್ಧ ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಡಿಎನ್‌ಎ ಪರೀಕ್ಷೆ ನಿರ್ಣಯಕಯಾಗುವುದಿಲ್ಲ ನ್ಯಾಯಪೀಠ ತಿಳಿಸಿದೆ.