ಡಾ ll ಬಿ.ಆರ್ ಅಂಬೇಡ್ಕರ್ ಜಯಂತಿ ಪ್ರಯುಕ್ತ ಮೂಲನಿವಾಸಿ ಅಂಬೇಡ್ಕರ್ ಸಂಘ (ರಿ) ವತಿಯಿಂದ ಸಂವಿಧಾನ ಪುಸ್ತಕ ನೀಡಿರುವುದು ಪಿ ಲೋಕೇಶ್ ರಾಜ್ಯ ಕಾರ್ಯದರ್ಶಿ
Jai Bheem

ಡಾಕ್ಟರ್ ಬಿಆರ್ ಅಂಬೇಡ್ಕರ್ ಜಯಂತಿ ಪ್ರಯುಕ್ತ ಸಂವಿಧಾನ ಪುಸ್ತಕ ನೀಡಿರುವುದು.. ಅಂಬೇಡ್ಕರ್ ದಿನದಂದು ಹಲವಾರು ಅಂಬೇಡ್ಕರ್ ಸಂಘ ಸಂಘಟನೆಗಳು ಹಲವಾರು ವಿಧದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ದಿನವನ್ನು ಆಚರಣೆ ಮಾಡುತ್ತಾರೆ, ಇದರಲ್ಲಿ ವಿಭಿನ್ನ ವೇನೆಂದರೆ ಮೂಲನಿವಾಸಿ ಅಂಬೇಡ್ಕರ್ ಸಂಘದ ರಾಜ್ಯ ಕಾರ್ಯದರ್ಶಿ ಲೋಕೇಶ್ ಪಿ ಅವರು ಸಂವಿಧಾನ ಪುಸ್ತಕ ನೀಡಿರುವುದು.
ಹಲಸೂರು ಗೇಟ್ ಪೊಲೀಸ್ ಠಾಣೆ ಅಧಿಕಾರಿ ACP ನಾರಾಯಣಸ್ವಾಮಿ ಸರ್.ಸಂಪಂಗಿರಾಮನಗರ ಪೊಲೀಸ್ ಠಾಣೆ ಅಧಿಕಾರಿ ರಾಜೇಶ್ ಸರ್.ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ ಅಧಿಕಾರಿ ಶಂಕರಾಚಾರ್ಯ ಸರ್.
ಅಂಬೇಡ್ಕರ್ ಸಂಘ ರಾಜ್ಯಾಧ್ಯಕ್ಷರು ಅಂತೋನಿ ಸರ್ ಇವರೊಂದಿಗೆ ಮೇಲೆ ತಿಳಿಸಿದ ಪೊಲೀಸ್ ಠಾಣೆಗಳಿಗೆ ಹೋಗಿ ಅಲ್ಲಿನ ಅಧಿಕಾರಿಗಳಿಗೆ ಸಂವಿಧಾನದ ಪುಸ್ತಕವನ್ನು ನೀಡಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹುಟ್ಟುಹಬ್ಬವನ್ನು ಆಚರಿಸಿದರು.
ಈ ರೀತಿಯ ಕೆಲಸವನ್ನು ಬಹಳಷ್ಟು ದಿನಗಳಿಂದ ಮಾಡಿಕೊಂಡು ಬಂದಿರುತ್ತದೆ. ಅದರಲ್ಲೂ ಈ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಪಿ ಲೋಕೇಶ್ ಅನೇಕ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಎಲ್ಲರಿಗೂ ತಿಳಿಸುತ್ತಾ ಬರುತ್ತಿದ್ದಾರೆ. ಜೊತೆಗೆ ಸಂವಿಧಾನದ ಪುಸ್ತಕವನ್ನು ಜನರಿಗೆ ತಿಳಿಯುವಂತೆ ಮಾಡುತ್ತಿದ್ದಾರೆ.
ಕೊನೆಯದಾಗಿ ಅವರು ಹೇಳಿದಂತೆ ಮಾತುಗಳು ಹೋರಾಟ ಶಿಕ್ಷಣ ಸಂಘಟನೆ ಬಡವರ ಪರವಾಗಿ ಧ್ವನಿ ನಿರಂತರವಾಗಿ ಮಾಡ ಬಯಸುವವನು ಸಂವಿಧಾನದ ಪುಸ್ತಕವನ್ನು ತಿಳಿದಿರಬೇಕು ಎಂದು ಹೇಳಿದರು.


ಜೈ ಭೀಮ್ ಜೈ ಕರ್ನಾಟಕ.
ವರದಿ ಆಂಟೋನಿ ಬೇಗೂರು