ಡಾಲರ್ ಎದುರು ರೂಪಾಯಿ ಮೌಲ್ಯ 80.11ಕ್ಕೆ ಕುಸಿತ..

ಡಾಲರ್ ಎದುರು ರೂಪಾಯಿ ದರ ಭಾರೀ ಅಪಮೌಲ್ಯ ಕಂಡಿದೆ. ಇಂದು ಅದು ೮೦.೧೧ ರೂಪಾಯಿಗೆ ಕುಸಿದಿದೆ. ಷೇರುಪೇಟೆ ಕೂಡ ಮೊದಲು ೧೩೦೦ ಪಾಯಿಂಟ್ ಕುಸಿದು ಬಳಿಕ ಚೇತರಿಸಿಕೊಂಡು ೭೭೮ ಅಂಕ ಕಳೆದುಕೊಂಡಿದೆ.
ಡಾಲರ್ ರೂಪಾಯಿ ಮೌಲ್ಯ ಭಾರೀ ಅಪಮೌಲ್ಯ ಕಂಡಿದೆ. ಎರಡು ದಿನಗಳ ಹಿಂದಷ್ಟೇ ಒಂದು ಡಾಲರ್‌ಗೆ ೭೯.೮೭ ಪೈಸೆ ಇದ್ದ ರೂಪಾಯಿ ಇಂದು ೨೪ ಪೈಸೆ ಕುಸಿಯುವ ಮೂಲಕ ದಿಢೀರ್ ಆಗಿ ೮೦.೧೧ ಕ್ಕೆ ಇಳಿದಿದೆ. ಜೊತೆಗೆ ಭಾರತೀಯ ಷೇರುಪೇಟೆ ಕೂಡ ಆರಂಭಿಕ ವಹಿವಾಟಿನಲ್ಲಿ ತತ್ತರಿಸಿದ್ದು, ೧೩೦೯ ಪಾಯಿಂಟ್ ಕಳೆದುಕೊಂಡಿದೆ.ಇಂದು ಬೆಳಗ್ಗೆ ವಹಿವಾಟು ಆರಂಭವಾದಾಗ ಅಂತರ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ ರೂಪಾಯಿ ಬೆಲೆ ಅಮೆರಿಕ ಡಾಲರ್? ಎದುರು ೭೯.೮೭ ರೂಪಾಯಿ ಇತ್ತು.
ಅದು ಮುಂದುವರಿದು ೨೪ ಪೈಸೆ ಕುಸಿಯುವ ಮೂಲಕ ೮೦ ರೂಪಾಯಿ ದಾಟಿತು.ಷೇರುಪೇಟೆ ತಲ್ಲಣ: ಜಾಗತಿಕ ಮಟ್ಟದಲ್ಲಾದ ಬೆಳವಣಿಗೆಗಳಿಂದ ಭಾರತೀಯ ಷೇರುಗಳು ಭಾರೀ ಪ್ರಮಾಣದಲ್ಲಿ ಕುಸಿತ ಕಂಡವು. ಬೆಳಗ್ಗೆ ೯ ಗಂಟೆಗೆ ಆರಂಭವಾದ ಸೆನ್ಸೆಕ್ಸ್ ವಹಿವಾಟು ಆರಂಭಿಸಿದ ವೇಳೆ ೧,೩೦೯.೬೦ ಪಾಯಿಂಟ್ ಅಂದರೆ ಶೇ.೨.೨೩ ರಷ್ಟು ಇಳಿಕೆ ಕಂಡಿತು.
ಅದೇ ರೀತಿ ನಿಫ್ಟಿ ೩೭೭ ಪಾಯಿಂಟ್ ಅಥವಾ ಶೇ.೨.೧೫ ರಷ್ಟು ಕುಸಿಯಿತು.ಬಳಿಕದ ವಹಿವಾಟಿನಲ್ಲಿ ಕುಸಿತದ ಅಂತರವನ್ನು ೭೭೮ ತಗ್ಗಿಸಿಕೊಂಡ ಸೆನ್ಸೆಕ್ಸ್ ೫೮,೦೫೫.೧೫ ರಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ ಕೂಡ ಚೇತರಿಕೆ ಕಂಡು ೨೨೭ ಪಾಯಿಂಟ್? ಕುಸಿತದೊಂದಿಗೆ ೧೭,೩೩೧ ಅಂಕಗಳೊಂದಿಗೆ ವಹಿವಾಟು ನಡೆಸುತ್ತಿದೆ.
ಓದಿ: ವಾರದ ಮೊದಲ ದಿನದ ತರಕಾರಿ ಮಾರುಕಟ್ಟೆ ದರ ಈ ರೀತಿ ಇದೆ..